ಮಾನವ ಕುಲದ ಐಕ್ಯತೆ ಚಿಂತನಕಾರರಲ್ಲಿ ಕನಕದಾಸರು ಶ್ರೇಷ್ಟರು : ಸಂಜೀವ ಮಂಟೂರ.
ಮೂಡಲಗಿ : ಮಾನವ ಕುಲದ ಐಕ್ಯತೆ ಚಿಂತನಕಾರರಲ್ಲಿ ಕನಕದಾಸರು ಶ್ರೇಷ್ಟರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆಯನೇನಾದರೂ ಬಲ್ಲಿರಾ…. ಎಂದು ಸಮಾಜ ಸುದಾರಕರಾಗಿ 15-16 ನೇ ಶತಮಾನದಲ್ಲಿ ಭಾರತೀಯ ಧಾರ್ಮಿಕ ಅಂದೋಲನದ ಪ್ರತಿಪಾದನೆಯನ್ನು ಕನಕದಾಸರು ಮಾಡಿದರು ಅಲ್ಲದೇ ಜನರಲ್ಲಿ ಇರುವ ಜೀವನದ ಮೌಢತ್ಯೆಗಳನ್ನು ದಾಸ ಸಾಹಿತ್ಯದ ಮೂಲಕ ಜನರಿಗೆ ತಿಳುವಳಿಕೆ ನೀಡಿದರು ಅವರ ದಾಸಸಾಹಿತ್ಯವು ಪ್ರಸ್ತುತ ಸಮಾಜದ ಜನರ ಜೀವನಕ್ಕೆ ಅನುಕರಣೆ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಪದವಿ ಕಾಲೇಜಿನ ಉಪನ್ಯಾಸಕ ಸಂಜೀವ ಮಂಟೂರ ಹೇಳಿದರು.
ಪಟ್ಟಣದ ಆರ್‍ಡಿಎಸ್. ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯ, ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಶ್ರೀವಿದ್ಯಾನಿಕೇತನ ಕನ್ನಡ ಹಿರಿಯ ಪ್ರಾಥಮಿಕ & ಪ್ರಾಡ ಶಾಲೆ, ಆರ್.ಡಿ.ಎಸ್. ಸಿ.ಬಿ.ಎಸ್.ಇ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ನೇರವೇರಿಸಿ ಮಾತನಾಡಿ ಕನಕದಾಸರ ಸಾಹಿತ್ಯ ಮಾನವ ಕುಲದ ಸಮಗ್ರತೆಯ ಮೌಲ್ಯಗಳನ್ನು ಒಳಗೊಂಡಿದೆ ಎಂದರು.
ಅತಿಥಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಮಲ್ಲಪ್ಪ ಜಾಡರ ಮಾತನಾಡುತ್ತಾ ಕನಕದಾಸರು ಜಾತಿ ಪದ್ದತಿಯ ವಿರುದ್ದ ಅವರ ಹೊಂದಿರುವ ಉದಾರತೆಯನ್ನು ತಿಳಿಸುವದರ ಜೊತೆಗೆ ಮಾನವ ಕುಲದಲ್ಲಿ ಇರುವ ಶ್ರೇಷ್ಟತೆಯನ್ನು ತಿಳಿಸುವದರ ಮೂಲಕ ಅನೇಕ ಕೃತಿಗಳನ್ನು ರಚಿಸಿ ಜನರಿಗೆ ಮೌಡ್ಯತೆಗಳನ್ನು ಬಿಟ್ಟು ಮಾನವೀತೆಯ ಮೌಲ್ಯಗಳನ್ನು ಪ್ರಸ್ತಾಪಿಸಿದನ್ನು ನನೆಪಿಸಿದರು,
ಉಪನ್ಯಾಸಕ ಜಿ.ಎಸ್. ಮನ್ನಾಪೂರ ಮಾತನಾಡಿ ಭಕ್ತಿ ಸೇವೆಯಿಂದ ಪರಮಾತ್ಮನನ್ನು ಒಲಿಸಿಕೊಳ್ಳುವದಕ್ಕೆ ಕನಕದಾಸರ ವಿಚಾರಗಳು ಮತ್ತು ಚಿಂತನೆಗಳು ಮಾನವ ಕುಲಕೋಟಿಯ ಐಕ್ಯತೆ ಸ್ಪೂರ್ತಿಯನ್ನು ಬಿಂಬಿಸುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ಕನಕದಾಸರು ಜಾತಿ ಪದ್ದತಿಯ ವಿರುದ್ದ ಹೋರಾಡಿ ಸಮಾಜವನ್ನು ಮಾನವೀಯತೆ ತತ್ವದ ಮೇಲೆ ಕಟ್ಟುವ ಅವರ ಕೀರ್ತನೆಗಳು ಅಜರಾಮರವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಸಿಬಿಎಸ್‍ಇ ಪ್ರಾಚಾರ್ಯ ಜೋಶಫ್ ಬೈಲಾ ಉಪನ್ಯಾಸಕರಾದ ಎಸ್. ಡಿ. ವಾಲಿ. ಡಾ.ಪ್ರಶಾಂತ ಮಾವರಕರ ಸುಭಾಸ ಮಾಲೋಜಿ, ಮತ್ತಿತರರು ಭಾಗವಹಿಸಿದ್ದರು.
ಉಪನ್ಯಾಸಕ ಬಾಳು ಪುರವಂತ ಸ್ವಾಗತಿಸಿದರು ಎ.ಎಂ.ಹೊಸಮನಿ ನಿರೂಪಿಸಿದರು ಅಶ್ವೀನಿ ಗುರುವ ವಂದಿಸಿದರು.