Breaking News
Home / ಬೆಳಗಾವಿ / ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

ಗೋಕಾಕ- ನಾಡಿನಾದ್ಯಂತ ನಡೆಯುತ್ತಿರುವ ಸಂತ ಶ್ರೇಷ್ಠ ಕನಕದಾಸರ ಜಯಂತಿಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.
ಕನಕದಾಸರು ಸರ್ವ ಶ್ರೇಷ್ಠ ದಾಸರು. ಇತರ ದಾಸರಿಗಿಂತ ಭಿನ್ನವಾದವರು. ಸಾಮಾನ್ಯನ ಬದುಕು ಹಸನಾಗಬೇಕು ಎಂಬ ಹಂಬಲ ಅವರದ್ದಾಗಿತ್ತು. ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಮಹತ್ವದ ಕೊಂಡಿಯಾಗಿದ್ದರು ಕನಕದಾಸರು. ಕೇಡುಗಳಿಲ್ಲದ ವರ್ಗ, ಜಾತಿ, ಅಸಮಾನತೆಗಳಿಲ್ಲದ ನಮ್ಮ ಭಾರತೀಯ ಸಮ ಸಮಾಜದ ಕನಸು ಬಿತ್ತುವವರಾಗಿ ಕಾಣಿಸುತ್ತಾರೆ. ಮನುಷ್ಯನಾಗಲಿ, ದೇವನಾಗಲೀ ಎಲ್ಲದರಲ್ಲಿ ಬದ್ಧತೆ ಇರಬೇಕು ಎಂಬ ನಂಬಿಕೆಗಳನ್ನು ಇಟ್ಟುಕೊಂಡಿದ್ದರು. ದೇವಸ್ಥಾನಗಳು ಭಕ್ತರ ಕಾಮಧೇನುವಾಗಬೇಕು. ಕೇವಲ ಅಡಂಬರಕ್ಕೆ ನಮ್ಮ ಭಕ್ತಿ ಸಿಮೀತವಾಗಬಾರದು. ದೇವರು- ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಯಾವುದೇ ಕೇಡು ಆಗಬಾರದು. ಮುಕ್ತವಾದ ಮಾನವ ಸಮಾಜವು ನಿರ್ಮಾಣವಾಗಬೇಕು ಎಂಬುದನ್ನು ದಾಸರು ತಮ್ಮ ಕೀರ್ತನೆಗಳಲ್ಲಿ ಒತ್ತಿ ಹೇಳಿದ್ದಾರೆ. ಶ್ರೇಷ್ಠ ದಾರ್ಶನಿಕರಾಗಿರುವ ಕನಕದಾಸರು ಸಾರಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಸಂದೇಶದಲ್ಲಿ ಹೇಳಿದ್ದಾರೆ.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ