ಮೂಡಲಗಿ : ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಮ್ಮಿಕೊಂಡಿದ್ದು ಉದ್ಘಾಟಕರಾಗಿ ಅರಬಾಂವಿ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಬಾಲಚಂದ್ರ ಲ ಜಾರಕಿಹೊಳಿ ಆಗಮಿಸುವರು ಅಧ್ಯಕ್ಷತೆಯನ್ನು ಆರ್‍ಡಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಳ್ಳುವರು ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೋ. ರವೀಂದ್ರನಾಥ ಎನ್. ಕದಮ್ ಹಾರೂಗೇರಿಯ ಶ್ರೀಸಿದ್ದೇಶ್ವರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾದ್ಯಾಪಕರಾದ ಟಿ.ಎಸ್. ಒಂಟಗೋಡಿ. ಹಳ್ಳೂರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವಾಯ್. ಬಿ. ಕಳ್ಳಿಗುದ್ದಿ. ಸುಣದೋಳಿಯ ಶ್ರೀ ಜಡಿಸಿದ್ದೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಸುರೇಶ ಲಂಕೆಪ್ಪನವರ. ರಾಯಬಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶಾನೂರ ಐಹೊಳೆ. ಶಿವಾಪೂರ(ಹ)ದ ಸರಕಾರಿ ಪ್ರೌಢ ಶಾಲೆ ಪ್ರಬಾರಿ ಮುಖ್ಯೋಪಾದ್ಯಯರಾದ ಶಿವಲಿಂಗ ಅರ್ಗಿ. ಮೂಡಲಗಿ ಹಾಸ್ಯ ಕಲಾವಿದರಾದ ಮತ್ತು ಮೂಡಲಗಿ ಟ್ಯಾಲೆಂಟ್ಸ್ ನಿರ್ವಹಣಕಾರರಾದ ಮಂಜುನಾಥ ರೆಳೇಕರ ಅತಿಥಿಗಳಾಗಿ ಆಗಮಿಸುವವರು ಎಂದು ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.