Breaking News
Home / ಬೆಳಗಾವಿ / ಓಝೋನ್ ಪದರು ಪ್ರಕೃತಿಯ ಜೀವ ರಕ್ಷಕ ಪ್ರಾಧ್ಯಾಪಕ ಆರ್ ಎಸ್ ಗೌರಿ

ಓಝೋನ್ ಪದರು ಪ್ರಕೃತಿಯ ಜೀವ ರಕ್ಷಕ ಪ್ರಾಧ್ಯಾಪಕ ಆರ್ ಎಸ್ ಗೌರಿ

Spread the love

ಮೂಡಲಗಿ : ಓಜೋನ್ ಪದರವು ಪ್ರಕೃತಿಯಲ್ಲಿರುವ ಜೀವ ರಕ್ಷಕವಾಗಿದ್ದು ಮಾನವನ ಜೀವನದ ಸಕಲ ಕಾರ್ಯದ ಮೇಲೆ ಓಜೋನ್ ಪದರಿನ ಪಾತ್ರಬಹುಮುಖ್ಯವಾಗಿದ್ದು ಇಂದು ಓಜೋನ್ ಪದರಿನ ನಾಶಕ್ಕೆ ಮಾನವನ ಸ್ವಾರ್ಥ ಕಾರಣವಾಗಿರುತ್ತದೆ ತಂಪು ಪಾನಿಗಳನ್ನು ತಯಾರಿಸಿಕೊಳ್ಳಲು ಬಳಸುವ ಫ್ರಿಡ್ಜ್ ಬೃಹತ್ ಕೈಗಾರಿಕೆಗಳು ಹಾಗೂ ಕಾರುಗಳಲ್ಲಿ ಬಳಸುವ ಎಸಿ ಗಳಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ಅಂಶಗಳು ಓಝೋನ ನಾಶಕ್ಕೆ ಕಾರಣವಾಗಿದ್ದು ನಾವೆಲ್ಲರೂ ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಅಥಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಆರ್‌ಎಸ್ ಗೌರಿ ಹೇಳಿದರು

ಪಟ್ಟಣದ ಆರ್ ಡಿ ಎಸ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಹಾಗೂ ಐಕ್ಯೂಎಸಿ ಘಟಕಗಳ ಅಡಿಯಲ್ಲಿ ಹಮ್ಮಿಕೊಂಡ ಓಜೋನ್ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪ್ರಕೃತಿಯಲ್ಲಿ ಮಾನವನು ಮಾತ್ರ ಪ್ರಕೃತಿಯ ವಿರುದ್ಧವಾಗಿ ಜೀವನಶೈಲಿಗಳನ್ನು ರೂಪಿಸಿಕೊಂಡು ಪ್ರಕೃತಿಯ ಹಾನಿಗೆ ಒಂದಿಲ್ಲ ಒಂದು ರೀತಿಯಲ್ಲಿ ಕಾರಣವಾಗುತ್ತಿದ್ದಾನೆ ಮುಂದೊಂದು ದಿನ ಪರಿಸರದಲ್ಲಿ ಓಜೋನ್ ಪದರ ಸಂಪೂರ್ಣ ನಾಶವಾಗಿ ಜೀವ ಸಂಕುಲ ಅಳಿವಿನಂಚಿಗೆ ಹೋಗುತ್ತದೆ ಪ್ರತಿಯೊಬ್ಬರು ಈಗಿನಿಂದಲೇ ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಅಭಿಪ್ರಾಯಪಟ್ಟರು
ಅತಿಥಿ ಅಥಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ಶಿವಾನಂದ್ ನಾವಿ ಮಾತನಾಡಿ ಭೂಮಿ ಹೊಂದಿರುವ ಅದ್ಭುತ ಶಕ್ತಿ ಓಜೋನ್ ಪದರಾಗಿದ್ದು ಅದನ್ನು ನಾವುಗಳು ಸ್ವಾರ್ಥಕ್ಕಾಗಿ ಹಾನಿಗೊಳಿಸುತ್ತಾ ಇರುತ್ತಿದ್ದೇವೆ ಇದರಿಂದ ಭೂಮಿಯ ಮೇಲಿರುವ ನೀರು ಗಾಳಿ ಬೆಳಕು ಸಸ್ಯಗಳು ಪ್ರಾಣಿಗಳು ಸಂಪೂರ್ಣವಾಗಿ ನಶಿಸಿ ತನ್ನ ಅಂತ್ಯವನ್ನು ತಾನೇ ಕಂಡು ಕೊಳ್ಳುವಂತೆ ಆಗುವುದು ದೂರವಿಲ್ಲ ಈಗಲೇ ಪ್ರಕೃತಿಯ ಪರವಾಗಿ ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದರು
ಕಾಲೇಜು ಪ್ರಾಚಾರ್ಯ ಸತೀಶ್ ಗೂಟುರೆ ಮಾತನಾಡಿ ಪ್ರಕೃತಿ ಇಂದಲೇ ನಾವು ಬದುಕುತ್ತಿರುವುದು ಸೂರ್ಯ ಚಂದ್ರ ಅಷ್ಟೇ ಓಝೋನ್ ಪದರು ಪ್ರಾಮುಖ್ಯತೆ ಹೊಂದಿದ್ದು ಅದರ ಸಂರಕ್ಷಣೆ ಎಲ್ಲರ ಆದ್ಯತೆಯಾಗಿರಬೇಕೆಂದರು
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಸ್ಪೂರ್ತಿ ಈಟಿ ಸುನಿಲ್ ಸತ್ತಿ ಮುತ್ತಣ್ಣ ಒಡೆಯರ್ ರಾಘವೇಂದ್ರ ಮುಕುಂದ ಸಂಜು ಮಂಟೂರ್ ರಾಜು ಪತ್ತಾರ್ ಕಿರಣ್ ಪಟ್ಟಣಶೆಟ್ಟಿ ಅಕ್ಷತಾ ಹೊಸಮನಿ ಕವಿತಾ ಮಳಲಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಅಕ್ಷತಾ ಬಾನಿ ನಿರೂಪಿಸಿದರು ಪ್ರೀತಿ ಚೌಹಾಣ್ ಸ್ವಾಗತಿಸಿದರು ಸೃಷ್ಟಿ ಬಡಿಗೇರ್ ವಂದಿಸಿದರು .


Spread the love

About inmudalgi

Check Also

ಯೋಜನೆಗಳ ಸದುಪಯೋಗವಾಗಲಿ’ ಕಾರ್ಮಿಕರಿಗೆ ಕಿಟ್ ವಿತರಣೆ | ಗುರುತಿನ ಚೀಟಿ ಮಾಡಿಸಿಕೊಳ್ಳಿ: ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳ ಸದುಪಯೋಗಕ್ಕೆ ಶಾಸಕ ಮತ್ತು ಬೆವೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ