ಫೆ.22 ರಂದು ಸತೀಶ್ ಶುಗರ್ಸದಿಂದ ಕಬ್ಬು ನುರಿಸುವ ಹಂಗಾಮಿಗೆ ಮುಕ್ತಾಯ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಶನಿವಾರ ಫೆ.22 ರಂದು ಮುಕ್ತಾಯವಾಗಲ್ಲಿದೆ ಎಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತೀಶ ಶುಗರ್ಸ್ ಕಾರ್ಖಾನೆಯ ಪ್ರಸ್ತುತ 2024-25 ನೇ ಹಂಗಾಮಿನ ಕಬ್ಬು ನುರಿಸುವಕಾರ್ಯವನ್ನು ಫೆ. 22 ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಕಾರಣ, ರೈತ ಭಾಂದವರು ಸದರಿ ಹಂಗಾಮಿಗಾಗಿ ನೋಂದಣಿ ಮಾಡಿದಂತಹ ಎಲ ್ಲಕಬ್ಬನ್ನು ನಮ್ಮ ಕಾರ್ಖಾನೆಯ ಕ್ಷೇತ್ರ ಸಿಬ್ಬಂದಿಗಳನ್ನು ಸಂಪರ್ಕಿಸಿ ಕಬ್ಬು ಕಟಾವು ಮಾಡಿ ತಮ್ಮ ಸ್ವಂತ ವಾಹನದಿಂದ ಅಥವಾ ಕರಾರು ಮಾಡಲಾದ ವಾಹನ ಹಾಗೂ ಗ್ಯಾಂಗುಗಳ ಮೂಲಕ ಶನಿವಾರ 22.02.2025ರಂದು ಸಾಯಂಕಾಲ 6:00 ಗಂಟೆಯವರೆಗೆ ಕಾರ್ಖಾನೆಗೆ ಪೂರೈಕೆ ಮಾಡಲು ವಿನಂತಿಸಲಾಗಿದೆ. ಸದರಿ ದಿನಾಂಕದೊಳಗೆ ಕಾರ್ಖಾನೆಗೆ ಪೂರೈಕೆಯಾಗದೆ ಉಳಿದ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿ ಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.