Breaking News
Home / Recent Posts / ಭಾವೈಕ್ಯತೆ ಬಿಂಬಿಸುವ ಸಾವಳಗಿಯ ದಸರಾ ಉತ್ಸವ ರವಿವಾರ ಪ್ರಾರಂಭ

ಭಾವೈಕ್ಯತೆ ಬಿಂಬಿಸುವ ಸಾವಳಗಿಯ ದಸರಾ ಉತ್ಸವ ರವಿವಾರ ಪ್ರಾರಂಭ

Spread the love

ಭಾವೈಕ್ಯತೆ ಬಿಂಬಿಸುವ ಸಾವಳಗಿಯ ದಸರಾ ಉತ್ಸವ ರವಿವಾರ ಪ್ರಾರಂಭ

ಗೋಕಾಕ: ‘ಕಾಶಿ ಕಾಬಾ ಒಂದೇ, ಪುರಾಣ ಕುರಾನ್ ಒಂದೇ, ಈಶ್ವರ ಅಲ್ಲ ಒಬ್ಬನೇ’ ಎನ್ನುವ ಹಿಂದೂ ಮುಸ್ಲಿಂ ಸಾಮರಸ್ಯೆಯನ್ನು ಸಾರುವ, ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಜಗದ್ಗುರು ಪೀಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅ.15ರಿಂದ ಅ.24ರ ವರೆಗೆ ದಸರಾ ಉತ್ಸವವು ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜರುಗಲಿವೆ.
ಅ.15ರಂದು ಬೆಳಗ್ಗೆ ಕೃರ್ತೃ ಗದ್ದುಗೆಗೆ ವಿಶೇಷ ಅಲಂಕಾರದೊಂದಿಗೆ ಪೂಜೆ, ರುದ್ರಾಭಿಷೇಕ ಜರುಗಲಿದೆ.
ಪುರಾಣ, ಸಂಗೀತ: ಅ.15ರಿಂದ ಪ್ರತಿ ನಿತ್ಯ ರಾತ್ರಿ 8.30ರಿಂದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನವನ್ನು ಡಾ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ವೇ.ಮೂ. ರಾಚಯ್ಯ ವಿ. ಹಿರೇಮಠ ಮದರಿ ಅವರು ಹೇಳುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗಾನಭೂಷಣ ಗದಗದ ವೀರೇಶ ಕಿತ್ತೂರ ಮತ್ತು ತಂಡದವರಿಂದ ಸಂಗೀತ ಜರುಗುವುದು.
ಸಾಹಿತ್ಯ-ಸಂಸ್ಕøತಿ ಸೌರಭ: ಅ.15 ರಿಂದ ಅ.24ರ ವರೆಗೆ ಪ್ರತಿ ದಿನ ಸಂಜೆ 7.30ಕ್ಕೆ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಶ್ರೀಗಳ ಮಹಾಸನ್ನಿಧಿಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ಜಾನಪದ, ಕೃಷಿ, ವೈದ್ಯಕೀಯ ವಿವಿಧ ವಿಷಯಗಳಲ್ಲಿ ಉಪನ್ಯಾಸ, ನೃತ್ಯ, ಕಲಾ ಪ್ರದರ್ಶನಗಳು ಜರುಗಲಿವೆ.
ಸೀಮೋಲ್ಲಂಘನ: ಅ. 24ರಂದು ಸಂಜೆ 5ಕ್ಕೆ ವಿಜಯದಶಮಿಯ ಸೀಮೋಲ್ಲಂಘನ ನಡೆಯುವುದು. ಅಂದು ಶ್ರೀಪೀಠದಿಂದ ಸನ್ನಿಧಿಯವರು ಸಕಲ ರಾಜಮರ್ಯಾದೆಯಲ್ಲಿ ಅಶ್ವಾರೂಢರಾಗಿ ಬನ್ನಿಮಂಟಪಕ್ಕೆ ದಯಮಾಡಿಸಿ ಸೀಮೋಲ್ಲಂಘನೆಯನ್ನು ಮುಗಿಸಿ ಮರಳಿ ಶ್ರೀಮಠಕ್ಕೆ ಆಗಮಿಸಿರುವರು. ಸಾಧಕರಿಗೆ ಸನ್ಮಾನ ಇರುವುದು ಎಂದು ಸಂಚಾಲಕ ಬಾಲಶೇಖರ ಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಬಾಕ್ಸ್ ಸುದ್ದಿ..
ಭಾವೈಕ್ಯತೆಯನ್ನು ಬಿಂಬಿಸುವ ಮಠ : ದೈವಾಂಶ ಪುರುಷರು ಆಗಿರುವ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರು ಕ್ರಿ.ಶ. 1645ರಿಂದ ಕ್ರಿ.ಶ. 1748ರ ಅವಧಿಯಲ್ಲಿ ಹಲವಾರು ಪವಾಡುಗಳ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿರುವರು. ಕಲಬುರ್ಗಿಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಜನಿಸಿ ತಮ್ಮ ದೈವತ್ವ ಸಾಕ್ಷಾತ್ಕಾರದ ಮೂಲಕ ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ನೆಲೆಸಿದರು. ಇವರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷಹ ಸುಲ್ತಾನ್ ರೋಜ್ ಬಹದ್ದೂರರ ಗುರು ಬಂದೇನವಾಜ್‍ವಲಿಯವರ ಮೇಲೆ ವಿಷೇಶವಾಗಿ ಬೀರಿತ್ತು. ಮುಸಲ್ಮಾನ್ ಗುರು ಖಾಜಾ ಬಂದೇನವಾಜ್‍ರು ವೀರಶೈವ ಗುರು ಶಿವಲಿಂಗೇಶ್ವರರ ಪ್ರಭಾವಕ್ಕೆ ಒಳಗಾಗಿ ಅವರ ಸಖ್ಯವನ್ನು ಬೆಳೆಸಿರುವ ಪ್ರತೀಕವಾಗಿ ಸಾವಳಗಿಯ ಶ್ರೀಪೀಠವು ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ.
ಶಿವಲಿಂಗೇಶ್ವರರು ಲೋಕ ಕಲ್ಯಾಣಕ್ಕಾಗಿ ಸಂಚರಿಸುವಾಗ ಅವರು ವಾಸ್ತವ್ಯ ಮಾಡಿದ ಸ್ಥಳಗಳಲ್ಲಿ ಶಿವಲಿಂಗೇಶ್ವರರ ಮಠಗಳು ಸ್ಥಾಪನೆಯಾಗಿವೆ. ದೇಶದಾದ್ಯಂತ ಜಗದ್ಗುರು ಶಿವಲಿಂಗೇಶ್ವರರ 360ಕ್ಕೂ ಅಧಿಕ ಮಠಗಳು, 110ಕ್ಕೂ ಅಧಿಕ ಗದ್ದುಗೆಗಳು ಸ್ಥಾಪಿತವಾಗಿವೆ. ಸದ್ಯ ಸಾವಳಗಿಯ ಮೂಲ ಪೀಠದಲ್ಲಿ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು 15ನೇ ಪೀಠಾಧಿಪತಿಗಳಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಪ್ರತಿ ವರ್ಷ ಜಾತ್ರೆ, ದಸರಾ ಉತ್ಸವ, ಗುರುಸ್ಮರಣೆ, ಕಾರ್ತಿಕೋತ್ಸವ, ಶಿವರಾತ್ರಿ, ಶ್ರಾವಣ ಆಚರಣೆ ಮತ್ತು ಪ್ರತಿ ಅಮವಾಸ್ಯೆಗೆ ವಿಶೇಷ ಕಾರ್ಯಕ್ರಮಗಳು ಮಠದಲ್ಲಿ ಭಕ್ತಿಭಾವದಲ್ಲಿ ನಡೆದುಕೊಂಡು ಬಂದಿದ್ದು, ದೇಶದ ವಿವಿಧೆಡೆಯಿಂದ ಭಕ್ತರು ಜಗದ್ಗುರು ಶಿವಲಿಂಗೇಶ್ವರರ ಸರ್ವ ಉತ್ಸವಗಳಿಗೆ ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವುದು ಸಾವಳಗಿ ಪೀಠದ ವಿಶೇಷವಾಗಿದೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ