Breaking News
Home / Recent Posts / ದಿ 20 ರಂದು ಪಟಗುಂದಿ ಗ್ರಾಮದಲ್ಲಿ ಪರಮಪೂಜ್ಯ ಚಾರಿತ್ರ ಚಕ್ರವರ್ತಿ ಪ್ರಥಮಾಚಾರ್ಯ 108 ಶ್ರೀ ಶಾಂತಿ ಸಾಗರ್ ಮುನಿ ಮಹಾರಾಜರ 69ನೇ ಪುಣ್ಯತಿಥಿ ಕಾರ್ಯಕ್ರಮ

ದಿ 20 ರಂದು ಪಟಗುಂದಿ ಗ್ರಾಮದಲ್ಲಿ ಪರಮಪೂಜ್ಯ ಚಾರಿತ್ರ ಚಕ್ರವರ್ತಿ ಪ್ರಥಮಾಚಾರ್ಯ 108 ಶ್ರೀ ಶಾಂತಿ ಸಾಗರ್ ಮುನಿ ಮಹಾರಾಜರ 69ನೇ ಪುಣ್ಯತಿಥಿ ಕಾರ್ಯಕ್ರಮ

Spread the love

ಮೂಡಲಗಿ: ತಾಲೂಕಿನ ಪಟಗುಂದಿ ಗ್ರಾಮದ ಸುಪಾಶ್ರ್ವನಾಥ ದಿಗಂಬರ ಜೈನ ಮಂದಿರದಲ್ಲಿ ಶುಕ್ರವಾರ ಸೆ.20 ರಂದು ಚಾರಿತ್ರ್ಯ ಚಕ್ರವರ್ತಿ ಪ್ರಥಮಾಚಾರ್ಯ 108 ಶ್ರೀ ಶಾಂತಿ ಸಾಗರ್ ಮುನಿ ಮಹಾರಾಜರ 69ನೇ ಪುಣ್ಯತಿಥಿ ಹಾಗೂ

108 ನಮನಸಾಗರ ಮಹಾರಾಜರ 5 ನೇ ಪುಣ್ಯತಿಥಿ,

ಕ್ಷುಲ್ಲಿಕಾರತ್ನ 105 ಕಾಂಚನಶ್ರೀ ಮಾತಾಜಿಯವರ ಎರಡನೆಯ ಪುಣ್ಯತಿಥಿ ಕಾರ್ಯಕ್ರಮವನ್ನು ಜರುಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಮುಂಜಾಣೆ 7.45 ಧ್ವಜಾರೋಹಣ, 8 ಗಂಟೆಗೆ ಶ್ರೀ ಭಗವಾನರ ಅಭಿಷೇಕ, 10 ಗಂಟೆಗೆ ಮಹಾರಾಜರ ಭಾವಚಿತ್ರ ಭವ್ಯ ಮೇರವಣಿಗೆ ಜರುಗುವುದು. ಮಧ್ಯಾಹ್ನ 3 ಗಂಟೆಗೆ ಜರುಗುವ ವೇದಿಕೆಯ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೊಲ್ಲಾಪುರ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಶ್ರೀಗಳು, ನಾಂದನಿ ಮಠದ ಶ್ರೀ ಜಿನಸೇನ ಭಟ್ಟಾರಕ ಶ್ರೀಗಳು, ವರೂರ ಮಠದ ಶ್ರೀ ಧರ್ಮಸೇನ ಭಟ್ಟಾರಕ ಶ್ರೀಗಳು ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಲ. ಜಾರಕಿಹೊಳಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕ ಹಾಗೂ ಬೆಮೂಲ್ ಅಧ್ಯಕ್ಷ ಸನ್ಮಾನ್ಯ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುವರು, ಅ.ಕ.ಕ.ಬೆ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಅ. ಕಮತೆ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಮಾಜಿ ವಿಧಾನಸಭಾ ಸದಸ್ಯ ವೀರಕುಮಾರ್ ಪಾಟೀಲ, ಬೆಳಗಾವಿ ಉತ್ತರ ಶಾಸಕ ಅಭಯ ಪಾಟೀಲ, ಬೋರಗಾಂವ್ ಅರಿಹಂತ ಸಮೂಹ ಸಂಸ್ಥೆಯವ ಅಧ್ಯಕ್ಷ ಉತ್ತಮ್ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಶ್ರಾವಕರತ್ನ ಮಾನಿಕ ಬೋಳಿ, ಬೆಳಗಾವಿ ಡಿ.ವೈ.ಎಸ್.ಪಿ ಬರಮಪ್ಪ ಎಸ್ ಲೋಕಾಪೂರ, ರಬಕವಿಯ ಉದ್ಯಮಿ ಗಣಪತರಾವ ಹಜಾರೆ ನೇತ್ರ ತಜ್ಞ ಪದ್ಮಜಿತ ನಾಡಗೌಡ, ಬಹನಹಟ್ಟಿಯ ಉದ್ಯಮಿ ಮಹಾವೀರ ದೇಸಾಯಿ ಭಾಗವಹಿಸುವರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ