Breaking News
Home / Recent Posts / ಜೀವನವನ್ನು ಪಾವನ ಮಾಡಿಕೊಳ್ಳಲು ಶಿವ ನಾಮಸ್ಮರಣೆ ಜಪಿಸಬೇಕೆಂದು – ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಜಿಗಳು

ಜೀವನವನ್ನು ಪಾವನ ಮಾಡಿಕೊಳ್ಳಲು ಶಿವ ನಾಮಸ್ಮರಣೆ ಜಪಿಸಬೇಕೆಂದು – ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಜಿಗಳು

Spread the love

ಮೂಡಲಗಿ: ಮನುಷ್ಯನನ್ನು ಕಾಪಡುವುದು ಆಸ್ತಿ, ಅಂತಸ್ತು, ಹಣ ಅಲ್ಲ ಭಗವಂತನ ಶಿವ ನಾಮಸ್ಮರಣೆ ಮಾತ್ರ, ಪ್ರತಿಯೋಬ್ಬರು ಜೀವನವನ್ನು ಪಾವನ ಮಾಡಿಕೊಳ್ಳಲು ಶಿವ ನಾಮಸ್ಮರಣೆ ಜಪಿಸಬೇಕೆಂದು ಎಂದು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಜಿಗಳು ಹೇಳಿದರು.
ಅವರು ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಶ್ರೀ ಗಜಾನನ ಉತ್ಸವ ನಿಮಿತ್ತವಾಗಿ ಮಂಗಳವಾರ ರಾತ್ರಿ ಜರುಗಿದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಭಾಗವಹಿಸಿ ಮಾತನಾಡಿ, ಭಾರತ ದೇಶದಲ್ಲಿ ಬ್ರೀಟಿಷ ವಿರುದ್ದ ಸ್ವತಂತ್ರದ ಕಿಚ್ಚು ಹಚ್ಚಲು ಸಂಘಟಿತರಾಗಲು ಬಾಲಗಂಗಾಧರ ತಿಲಕರು ಗಲ್ಲಿ ಗಲ್ಲಿಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವ ಕಾರ್ಯಕ್ಕೆ ಮುಂದಾದರು, ಶಿವಾಪೂರ ಗ್ರಾಮದಲ್ಲಿ ಗಣಪತಿ ಉತ್ಸವದಲ್ಲಿ ಪ್ರತಿದಿನ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನಿಯವಾದ್ದು ಎಂದರು.
ಮಾನವನ ಜನ್ಮಕ್ಕೆ ಭಗವಂತ ಏನೆಲ್ಲ ಕೊಟ್ಟಿದ್ದಾನೆ, ಯಾವುದು ಸ್ಥಿರ ಇಲ್ಲ, ಯಾರು ಸಾವನ್ನು ಗೆಲ್ಲಲು ಸಾಧ್ಯವಿಲ್ಲ, ಸಾವಿರ ವರ್ಷ ಬಧುಕುತಿನಿ ಅಂತ ಗಳಿಸಬೇಕು, ನಾಳೆ ಸಾಯುತ್ತಿನೆ ಅಂತ ದಾನ, ಧರ್ಮ, ಧಾರ್ಮಿಕ ಕಾರ್ಯದಲ್ಲಿ ತೊಡಗಿದ್ದರೆ ಜೀವನ ಸಾರ್ಥಕವಾಗುತ್ತದೆ. ಕುಟುಂಬದಲ್ಲಿ ಗರ್ಭ ಸಂಸ್ಕಾರ ಬಹಳ ಮುಖ್ಯವಾದು. ಆದರಿಂದ ಇಂದಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ದೇವರ ಜ್ಞಾನ, ಮಹಾತ್ಮರ ಪುಸ್ತಕಗಳನ್ನು ಅಭ್ಯಸಿದರೆ ಹುಟ್ಟುವ ಮಕ್ಕಳು ಒಳ್ಳೆಯವರಾಗಿ ಹುಟ್ಟುತ್ತಾರೆ, ಪ್ರತಿಯೋಬ್ಬರು ನಮ್ಮ ಪೂರ್ವವಿಕೆಯರ ಪರಂಪರೆ, ಆಚಾರ ವಿಚಾರವನ್ನು ಪಾಲಿಸ ಬೇಕೆಂದರು.
ಕಂಕಣವಾಡಿ ಶ್ರೀ ಮಾರುತಿ ಶರಣರು ಮಾತನಾಡಿ, ಮಾನವ ಜನ್ಮ ಪಾವನವಾಗಲು ಜಪ ತಪಗಳು ಅವಶ್ಯಕ. ನಾಮದ ಬಲವು ನಾನಾ ಕಷ್ಟಗಳಲ್ಲಿ ಕಾಯುತ್ತದೆ ಎಂದು ಹೇಳಿದರು.
ಶರಣ ಚಿದಾನಂದ ಹೂಗಾರ ಗುರುಗಳು ಮಾತನಾಡಿ, ಪಂಚಾಕ್ಷರಿ ಮತ್ತು ಷಡಕ್ಷರಿ ಮಂತ್ರಗಳನ್ನು ಉಚ್ಚರಿಸುವದರಿಂದ ಭವದ ಪಾಪಗಳು ದೂರವಾಗುವವು ಎಂದು ಹೇಳಿದರು.
ವೇ. ಮೂ. ಈರಯ್ಯಾ ಹಿರೇಮಠ ಸ್ವಾಮಿಗಳು ಮತ್ತು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕ ಆರ್.ವ್ಹಿ.ಯರಗಟ್ಟಿ ನಿರೂಪಿಸಿದರು, ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ಅನ್ನಪ್ರಾಸದ ಜರುಗಿತು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ