ಮೂಡಲಗಿ : ಹುಬ್ಬಳಿಯ ಬಣಗಾರ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಶೈಕ್ಷಣಿಕ ವರ್ಷ 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಪ್ರತಿಶತ 80% ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಜಿಲ್ಲೆ ಬಣಗಾರ ಸಮಾಜದ ಮಕ್ಕಳು ಭಾಗವಹಿಸಬೇಕು ಎಂದು ಮೂಡಲಗಿ ಬಣಗಾರ ಸಮಾಜದ ಅಧ್ಯಕ್ಷ ಆನಂದ ಮಿರ್ಜಿ ವಿನಂತಿಸಿದ್ದಾರೆ,
ರವಿವಾರ ಮೇ 25 ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿoಗ್ ಕಾಲೇಜ, ಬಯೋಟೆಕ್ ಆಡಿಟೋರಿಯಂನಲ್ಲಿ ಪ್ರತಿಭಾ ಪುರಸ್ಕಾರ ಮಾಡುವುದಾಗಿ ನಿಶ್ಚಯಿಸಲಾಗಿದೆ.
ಬಣಗಾರ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮೂಡಲಗಿ ಬಣಗಾರ ಸಮಾಜದ ಕಾರ್ಯದರ್ಶಿ ಶಿವಾನಂದ ಮುಧೋಳ ವಿನಂತಿಸಿದ್ದಾರೆ. ಸಂಪರ್ಕಿಸಬೇಕಾದ ಫೋನ್ ನಂಬರ. ಅನಿಲ ಕವಿಶೆಟ್ಟಿ,9880377314,ಅನಿಲ ಮೂರಶಿಳ್ಳಿ. 9448267742, ಶ್ರೀಶೈಲ ಜೋಡಳ್ಳಿ, 9448113248, ಬಸವರಾಜ ಹೂಲಿ 9845825689, ಮಲ್ಲಿಕಾರ್ಜುನ ಶಿರಿಗಣ್ಣವರ 9448455229