ಇದೀಗ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸುದ್ದಿ ಯಲ್ಲಿರುವ ಮೊಬೈಲ್ ಅಪ್ಲಿಕೇಶನ್ ಎಂದರೆ ಅದು ಟಿಕ್ ಟಾಕ್. ಹೌದು ಗೆಳೆಯರೇ ಇದು ವಿಡಿಯೋ ಪ್ಲೇಟ್ ಫಾರಂ ನಲ್ಲೆ ಅತಿ ಹೆಚ್ಚು ವೀಕ್ಷಿಸಲು ಪಡುವ ಅಪ್ಲಿಕೇಶನ್ ಆಗಿದೆ, ಇದು ಯು ಟ್ಯೂಬ್ ಎಂಬ ದಯ್ತ್ಯನನ್ನೇ ಸದೇ ಬಡಿದಿದೆ .
ಇದು ಮೂಲತಃ ಚೀನಾದು ಇದು ಬೆಳೆದು ದೊಡ್ಡದಾಗಲು ಮೂಲ ಅಂಶ ಏನೆಂದರೆ ಇದು ನೀವು ಕೇವಲ ಒಂದು ನಿಮಿಷದ ವಿಡಿಯೋ ಮಾಡಬಹುದು ಹೇಗೆ ಕ್ರಿಕೆಟ್ ಜಗತ್ತಲ್ಲಿ ೨೦ ೨೦ ಜನಪ್ರಿಯ ವಾಯಿತು ಅದೇ ರೀತಿ ಜನರಿಗೆ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮನರಂಜನೆ ನೀಡುವದರಿಂದ ಇದು ಯಶಸ್ಸಿನ ಉತ್ತುಂಗಕ್ಕೇರಿದೆ.
ಭಾರತವು ಟಿಕ್ ಟಾಕ್ ನ ಅತಿ ದೊಡ್ಡ್ ಮಾರುಕಟ್ಟೆ ಮತ್ತು ಇದು ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ ರಾಷ್ಟ್ರ ಕೂಡ ಹೌದು ಇದನ್ನು ಯಥೇಚ್ಛವಾಗಿ ಬಳುಸುವ ನಮ್ಮಲ್ಲಿ ಅತಿ ಹೆಚ್ಚು ಟ್ರೊಲ್ ಮಾಡುಲು ಮತ್ತು ಇನ್ನೊಬ್ಬರನ್ನು ಅಣಕು ಮಾಡಲು ಉಪಾಯಯೋಗಿಸತ್ತಾರೆ ಇದು ವೊಂದು ಮುಖವಾದರೆ ಇನ್ನೊಂದ್ ಮುಖದಲ್ಲಿ ಇದರಲ್ಲಿ ಸಾಮಜಿಕ ಕಳಕಳಿ ಸಾಮಾನ್ಯ ಜ್ಜ್ಞಾನ ಮೋಟಿವೇಷನಲ್ ವಿಡಿಯೋ ಗಳು ಬರುತ್ತವೆ.
ಟಿಕ್ ಟಾಕ್ ನಲ್ಲಿ ಜಮಖಂಡಿ ಹುಡುಗರ ಹವಾ !!!!!!
ಇದರಲ್ಲಿ ನಮ್ಮ್ ಜಮಖಂಡಿ ತಾಲೂಕಿನ ನಿಂಗರಾಜ ಸಿಂಗಾಡಿ ಮತ್ತೆ ಅವನ ಸ್ನೇಹಿತರು ಸುಭಾಷ್ ಮಾಳಿ, ಅಮೀತ್ ಸುರಪಾಲಿ ಮತ್ತು ರಘು ಕಡಕೊಳ್ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಹ ವಿಡಿಯೋ ಮಾಡಿ ಅಪಾರ ಜನಪ್ರಿಯತೆ ಪಡೆದು ಕೊಳ್ಳುತ್ತಿದ್ದಾರೆ ಇಂತಹ ಯುವಕರನ್ನು ಬೆಂಬಲಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮ ನಿಮ್ಮೆಲ್ಲರಮೇಲಿದೆ . ಸಮಾಜದಲ್ಲಿ ನಡೆಯುವ ಜ್ವಲಂತ ಸಮಸ್ಯೆಗಳೇ ಇವರ ಮೂಲ ಕಥಾವಸ್ತು ಇವರು ಮಾಡಿದ ಕಿರು ಚಿತ್ರ ಈ ವರ್ಷ ಇಂದಾಪೂರ್ ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆ ಆಗಿ ಎಲ್ಲರ ಗಮನ ಸೆಳೆದಿತ್ತು.
ದಯವಿಟ್ಟು ಹಿಂತಾ ವಿಡಿಯೋ ಗಳನ್ನೂ ಆದಷ್ಟು ಬೆಳಕಿಗೆ ತರಲು ಪಯತ್ನಿಸಿ ಇದು ಎಷ್ಟೋ ಜನರಿಗೆ ಮಾರ್ಗದರ್ಶನ ನೀಡಬಹುದು. ಸಾಮಾಜಿಕ ಜಾಲತಾಣಗಳು ಈಗಿನ ದಿನಮಾನದಲ್ಲಿ ಸುದ್ದಿ ಪಸರಿಸುವಲ್ಲಿ ಅತಿ ಹೆಚ್ಚು ಕೆಲಸ ಮಾಡುತ್ತವೆ ಒಳ್ಳೆ ಸುದ್ದಿ ಒಳ್ಳೆ ಕಥಾವಸ್ತು ಇದ್ದರೆ ಹೆಂತವರನ್ನು ಆಕಾಶಮಟ್ಟಕೇರಿಸಬಹುದು ಇದರಿಂದ ಒಂದು ಒಳ್ಳೆಯ ಸಂದೇಶವನ್ನು ಸಾರೋಣ ಅವರಿಗೆ ಶುಭವಾಗಲಿ ಎಂದು ಹರಿಸೋಣ.
tik tok id -@ningaraj_singadi
ವರದಿ- ಸಾಗರ ಸಾಲಿಮಠ