ತೊಂಡಿಕಟ್ಟಿಯಲ್ಲಿ ಗಾಳೇಶ್ವರ ಮಠ ಮತ್ತು ಏಮ್ ಫಾರ್ ಸೇವಾ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ಉದ್ಘಾಟನೆ
ತೊಂಡಿಕಟ್ಟಿ: ಅವಧೂತ ಗಾಳೇಶ್ವರ ಮಹಾಸ್ವಾಮಿಜಿಯವರ ಪುಣ್ಯಾರಾಧನೆ ಹಾಗೂ ಸ್ವಾಮಿ ದಯಾನಂದ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲಾ ಪೂಜ್ಯರ ಉಪಸ್ಥಿತಿಯಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಈ ಸಂಸ್ಥೆಯಿಂದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉನ್ನತ ಮಟ್ಟದ ಹುದ್ದೆ ಅಲಂಕರಿಸುವುದರಲ್ಲಿ ಸಂಶಯವಿಲ್ಲ ಎಂದು ಚನೈ ಅಖಿಲ ಭಾರತ ಅಭಿಯಾನ ಸೇವಾ ಸಂಸ್ಥೆ(ಏಮ್ ಫಾರ್ ಸೇವಾ)ಯ ಅಧ್ಯಕ್ಷೆ ಶೀಲಾಬಾಲಾಜಿ ಹೇಳಿದರು.
ಸೋಮವಾರ ಇಲ್ಲಿಯ ಬುದ್ನಿಖುರ್ದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿ ಅವಧೂತ ಗಾಳೇಶ್ವರ ಮಠ ಮತ್ತು ಅಖಿಲ ಭಾರತ ಅಭಿಯಾನ ಸೇವಾ ಸಂಸ್ಥೆ (ಏಮ್ ಫಾರ್ ಸೇವಾ)ಯ ಆಂಗ್ಲ ಮಾಧ್ಯಮ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಅವರು ಪೂಜ್ಯ ಅಭಿನವ ವೆಂಕಟೇಶ ಮಹಾರಾಜರು ಕಾರ್ಯಕ್ತಮಕ್ಕೆ ಆಹ್ವಾನ ನೀಡಿದ್ದು ಖುಷಿ ತಂದಿದೆ ಎಂದರು.
ರಾಜಸ್ಥಾನ ಏಮ್ ಫಾರ್ ಸೇವಾ ಸಂಸ್ಥೆಯ ಶ್ರೀ ಸ್ವಾಮಿ ಬ್ರಹ್ಮಪರಾನಂದ ಸರಸ್ವತಿ ಶ್ರೀಗಳು ಮಾತನಾಡಿ, ಸಮಯ ಬದಲಾದಂತೆ ವ್ಯವಸ್ಥೆ ಬದಲಾಗುತ್ತದೆ. ಸಮಾಜ ಉತ್ತಮ ದಿಕ್ಕಿನಲ್ಲಿ ಸಾಗಲು ಸಂತರು ಸರಿಯಾದ ಸಮಯದಲ್ಲಿ ತಿದ್ದುವ ಕೆಲಸ ಮಾಡುತ್ತಾ ಬಂದಿದ್ದಾರೆ. ಆಧ್ಯಾತ್ಮಿಕತೆ ಜೊತೆ ಆಧುನಿಕ ಬದಲಾವಣೆ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ ಭಾಗದ ಜನರಿಗೆ ಅಭಿನವ ವೆಂಕಟೇಶ ಮಹಾರಾಜರು ನೀಡುವ ಕೆಲಸ ಮಾಡಿದ್ದಾರೆ. ವಿದ್ವತ್ತನ್ನು ಖರೀದಿಸಲು ಸಾಧ್ಯವಿಲ್ಲ. ಇದನ್ನು ನಾವೇ ಕಠಿಣ ಪರಿಶ್ರಮದ ಮೂಲಕ ಸಾಧಿಸಿಕೊಳ್ಳಲು ಭಗವಂತ ನೀಡಿದ್ದಾನೆ. ಉತ್ತಮ ಆರೋಗ್ಯದ ಮೂಲಕ ಶರೀರವನ್ನು ಸುಂದರವಾಗಿಟ್ಟುಕೊಂಡು ಸುಸಂಸ್ಕøತ ವ್ಯಕ್ತಿತ್ವ ರೂಪಿಸುಕೊಳ್ಳಬೇಕು. ಸಂಸ್ಕೃತಿಯಿಂದ ಸಾಗುವ ಮಾರ್ಗವನ್ನು ಮಹಾನ್ ಶ್ರೀಗಳು ತಿಳಿಸಿಕೊಟ್ಟಿದ್ದಾರೆ.
ತೊಂಡಿಕಟ್ಟಿಯಲ್ಲಿ ಪ್ರಾರಂಭವಾದ ವಿದ್ಯಾಲಯದಿಂದ ಇಲ್ಲಿನ ಮಕ್ಕಳಿಗೆ ಉಪಯೋಗವಾಗಲಿ ಎಂದು ಹಾರೈಸುವೆ ಎಂದರು.
ಮಧ್ಯಪ್ರದೇಶದ ಏಮ್ ಫಾರ್ ಸೇವಾ ಸಂಸ್ಥೆಯ ಶ್ರೀ ಸ್ವಾಮಿ ಐಶ್ವರ್ಯಾನಂದ ಸರಸ್ವತಿ ಶ್ರೀಗಳು ಮಾತನಾಡಿ, ತಮ್ಮ ಸರಳತೆ ಮೂಲಕ ಪ್ರತಿಯೊಬ್ಬರನ್ನೂ ಆಕರ್ಷಿಸುವ ಶಕ್ತಿ ವೆಂಕಟೇಶ್ ಮಹಾರಾಜರಿಗಿದೆ. ದೇಶದ ವಿವಿಧ ಭಾಗಗಳಿಂದ ಸಂತರ ಸಮಾಗಮ ಮಾಡುವ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಸಾರ ತಿಳಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಭಗವಂತ ಸ್ವರೂಪವನ್ನು ಪಡೆಯಲು ಬದುಕಿನುದ್ದಕ್ಕೂ ಶ್ರೇಷ್ಠ ಕಾಯಕ ಮಾಡುವತ್ತ ಗಮನಹರಿಸಬೇಕು. ಬರುವ ವರ್ಷದಿಂದ ಶಿಕ್ಷಣ ಸಂಸ್ಥೆ ಕಾರ್ಯ ಪ್ರಾರಂಭಿಸಿದ್ದು, ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ಸೌಲಭ್ಯ ಲಭಿಸುವ ಭರವಸೆ ವ್ಯಕ್ತಪಡಿಸಿದರು.
ಹಂದಿಗುಂದದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ತೊಂಡಿಕಟ್ಟಿಯಲ್ಲಿ ಜರುಗುತ್ತಿರುವು ಸಮಾರಂಭ ವಿಷ್ಟವಾದದ್ದು, ಗುರುವಿನ ಕೈ ಶಿಷ್ಯನ ಮೇಲೆ ಇದ್ದರೆ ನಿಜಯಾದ ಶಕ್ತಿ ಶಿಷ್ಯನನ್ನುದು, ಉತ್ತರ ಕರ್ನಾಟಕದ ಮಕ್ಕಳು ಬಹಳ ವಿದ್ಯಾವಂತರಿದ್ದಾರೆ, ಪೂಜ್ಯ ನಿರ್ಮಿಸಿದ್ದ ವಿದ್ಯಾ ಸಂಸ್ಥೆಯನ್ನು ಅಗರವಾಗಿ ತೆಗೆದುಕೊಳ್ಳದೆ ಅವರೊಂದಗೆ ಕೈ ಜೋಡಿಸಿದರೆ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಆರಂಭವಾಗುತ್ತದೆ ಎಂದರು.
ಪಂಚಾಯನಕಟ್ಟಿಯ ಶ್ರೀ ಕೇಶವಾನಂದ ಶ್ರೀಗಳು ಮಾತನಾಡಿ, ಜ್ಞಾನ ಇದ್ದವರು ಪ್ರಪಂಚದ ಯಾವುದೇ ಮೂಲೆಗೆ ಹೋದರು ಗೌರವ ಸಿಗುವುದು, ಶಿಕ್ಷಣ ಕಡ್ಡಾಯವಲ್ಲ ಅವಶ್ಯಕತೆ ಇದೆ, ವೆಂಕಟೇಶ್ವರ ಮಹಾರಾಜರು ಮಕ್ಕಳಲ್ಲಿ ಸಂಸ್ಕಾರ ನೀಡಬೇಕೆಂಬ ಕನಸಿನೊಂದಿಗೆ ಶಾಲೆಯನ್ನು ಆರಂಭಿಸಿದ್ದಾರೆ, ವಿದ್ಯೆಯಿಂದ ವಿನಯ-ಯೋಗ್ಯತೆ ದೊರೆಯುವುದು ಎಂದರು
ಧಾರವಾಡದ ಏಮ್ ಫಾರ್ ಸೇವಾ ಸಂಸ್ಥೆಯ ಮಾತೋಶ್ರೀ ಸ್ವಾಮಿ ಸ್ವಾತ್ಮನಿಷ್ಠಾನಂದ ಸರಸ್ವತಿ ಅವರು ಏಮ್ ಫಾರ್ ಸೇವಾ ಸಂಸ್ಥೆಯು 17 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯ ಚಟುವಟಕೆಯನ್ನು ವಿವರಿಸಿದರು
ಶ್ರೀ ವೆಂಕಟೇಶ್ವರ ಮಹಾರಾಜರು, ಜಾರಕಿಹೊಳಿಯ ಶ್ರೀ ಕೃಪಾನಂದ ಶ್ರೀಗಳು, ಡಾ.ಕೆ.ವಿ.ಪಾಟೀಲ ಹಾಗೂ ವಿವಿಧ ಮಠಾಧೀಶರು ಮಾತನಾಡಿದರು.
ವೇದಿಕೆಯಲ್ಲಿ ಏಮ್ ಫಾರ್ ಸೇವಾ ಸಂಸ್ಥೆಯ ಶ್ರೀ ಸ್ವಾಮಿ ಚಿತ್‍ಪ್ರಕಾಶಾನಂದ ಸರಸ್ವತಿ(ಬೆಳಗಾವಿ), ಶ್ರೀ ವಿಷ್ಣುಸ್ವರೂಪಾನಂದ ಸರಸ್ವತಿ ಪೂಜ್ಯರು (ನಾಗಪೂರ), ಶ್ರೀ ಸ್ವಾಮಿ ಮೋಕ್ಷಾನಂದ ಸರಸ್ವತಿ ಪೂಜ್ಯರು (ಉಡುಪಿ), ರನ್ನ ಬೆಳಗಲಿಯ ಋಷಿಯೋಗಾಶ್ರಮದ ಶ್ರೀ ಯೋಗಿರಾಜ ಸದಾಶಿವ ಗೂರೂಜಿ, ಭರತ ಜ್ಯೋಷಿ, ಸಂದೀಪ ದೇಶಪಾಂಡೆ ವಿವಿಧ ಮಠಾಧೀಶರು ಮತ್ತಿತರರು ಉಪಸ್ಥಿತರಿದ್ದರು.