ಸರಕಾರಿ ಶಾಲೆಗಳಲ್ಲಿ ಕಲಿತು ಬದುಕು ಕಟ್ಟಿಕೊಳ್ಳಿ- ಗಿರೆಣ್ಣವರ
ಮೂಡಲಗಿ: ಸರಕಾರಿ ಶಾಲೆಯಲ್ಲಿಯ ಶಿಕ್ಷಣ ಇಲಾಖೆಯ ಸೌಲಭ್ಯಗಳನ್ನು ಹಾಗೂ ಅನುಕೂಲತೆಗಳನ್ನು ಉಪಯೋಗಿಸಿಕೊಂಡು ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮುಖ್ಯಾದ್ಯಾಪಕ ಎ.ವ್ಹಿ ಗಿರೆಣ್ಣವರ ಹೇಳಿದರು.
ಅವರು ಬೆಳಗಾವಿ ಜಿ.ಪಂ. ಕಾರ್ಯನಿರ್ವಾಹಕರ ಆದೇಶದಂತೆ ನಡೆದ ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆ ಸಂಘಟಿಸಿ ಮಾತನಾಡಿ, ಸರಕಾರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಕೌಟುಂಬಿಕ ಸಮಸ್ಯೆಗಳಿಗೆ ಹಾಗೂ ಆರ್ಥಿಕವಾಗಿ ಸ್ಪಂದಿಸಲು ಹಲವಾರು ಯೋಜನೆಗಳೊಂದಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಉಚಿತ ಪಠ್ಯಪುಸ್ತಕ ಸಮವಸ್ತ್ರ, ಶೂ ಸಾಕ್ಸ ಅಕ್ಷರದಾಸೋಹ, ಕ್ಷೀರಬಾಗ್ಯ, ಆರೋಗ್ಯಭಾಗ್ಯ ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವದರಿಂದ ಪಾಲಕರು ಹಾಗೂ ಸಮಾಜ ಇವುಗಳನ್ನು ಉಪಯೋಗಿಸಿಕೊಂಡು ಮಕ್ಕಳು ಸತ್ಪ್ರಜೆಯಾಗಲು ಸಹಕರಿಸಬೇಕು. ಸರಕಾರಿ ಶಾಲೆಗೆ ತಮ್ಮ ಮಗುವನ್ನು ಸೇರಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ಸ್ವಂತಿಕೆಯಿಂದ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಸುಧಾಕರ ಗದಾಡಿ, ಶಾನೂರ ಹಿರೇಹೊಳಿ, ಅಪ್ಪಯ್ಯ ಅರಬಾಂವಿ, ಗುರುನಾಥ ಹುಕ್ಕೇರಿ, ಗುರುನಾಥ ಗದಾಡಿ, ಅಲ್ಲಪ್ಪ ಗದಾಡಿ ಸೇರಿದಂತೆ ನೂರಾರು ಪಾಲಕರು, ತಂದೆ-ತಾಯಿಗಳು, ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆಯಾ ತರಗತಿಗಳಲ್ಲಿ ಪ್ರತಿ ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ಶಿಕ್ಷಕರು ಪಾಲಕರೊಂದಿಗೆ ಚರ್ಚಿಸಿದರು.
ಶಿಕ್ಷಕರಾದ ವಿಮಲಾಕ್ಷಿ ತೋರಗಲ್ಲ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಪ್ರಿಯಾಂಕಾ ಡಿ.ಕೆ. ಸುಜಾತಾ ಕೋಳಿ, ಖಾತೂನ ನದಾಫ ಶಿವಲೀಲಾ ಹುಕಲುಂದ, ಅನ್ನಪೂರ್ಣಾ ಹುಲಕುಂದ ಎಮ್.ಡಿ ಗೋಮಾಡಿ, ಬಿ.ಎನ್. ಬಿನಾಯ್ಕ, ಸೋಮಶೇಖರ ವಾಯ್.ಅರ್. ಸಿ.ಎಸ್. ಸೀರಿ, ಹೊಳೆಪ್ಪಾ ಗದಾಡಿ ಪಾಲ್ಗೊಂಡಿದ್ದರು.