ಮೂಡಲಗಿ: ಬೇಸಿಗೆ ರಜೆ ಮುಗಿಸಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವ ಪ್ರಾರಂಭೋತ್ಸವ ಕಾರ್ಯಕ್ರಮ ದಿನದಂದೇ ವಿದ್ಯಾರ್ಥಿಗಳು ತುಕ್ಕಾನಟ್ಟಿ ಸರಕಾರಿ ಮಾದರಿ ಶಾಲೆಯಲ್ಲಿ ಉತ್ಸಾಹದಿಂದ ಹಾಜರಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಸಿಹಿ ನೀಡಿ ಸ್ವಾಗತಿಸಿದರು. ಮಕ್ಕಳು ಖುಷಿಯಿಂದ ಶಾಲೆಗೆ ಹಾಜರಾಗಿದ್ದಾರೆ ಎಂದು ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಉಚಿತವಾಗಿ ಬಂದ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಯಿತು. ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 8 ನೇತರಗತಿಯ ಸುಮಾರು 700ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಈ ಶೈಕ್ಷಣಿಕ ವರ್ಷಾರಂಬ ದಿನದಂದೇ 1 ನೇ ತರಗತಿಗೆ 60 ಮಕ್ಕಳು ದಾಖಲಾಗಿದ್ದಾರೆ.
ಈಗಾಗಲೇ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಬೇಸಿಗೆ ಶಿಭಿರ ಕೂಡ ನಡೆಸಲಾಗಿದ್ದು ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ದಾಖಲಾತಿಗೆ ಹಾಗೂ ಹಾಜರಾತಿಗೆ ಇಲಾಖೆಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಈ ಭಾಗದ ಶಾಸಕರ ಅಧಿಕಾರಿಗಳ ಶೈಕ್ಷಣಿಕ ಕಾರ್ಯವೈಖರಿಯೇ ಕಾರಣ ಎಂದು ಹೆಳಿದರು.
ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂ. ಅಧ್ಯಕ್ಷರಾದ ಗಾಯತ್ರಿ ಬಾಗೇವಾಡಿ, ಉಪಾಧ್ಯಕ್ಷರಾದ ಸುನಂದಾ ಭಜಂತ್ರಿ, ಮಾಜಿ ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ, ಯಲ್ಲವ್ವಾ ಬಿಳಿಗೌಡ್ರ, ಗ್ರಾಪಂ ಸದಸ್ಯ ಸತ್ತೆಪ್ಪಾ ಮಲ್ಲಾಪೂರ ರೈತ ಸಂಘದ ಸದಸ್ಯರಾದ ಮಂಜುನಾಧ ಗದಾಡಿ ಕಲ್ಲೋಳಿ ಸಿ.ಆರ್.ಪಿ ಬಸವರಾಜ ಅಂಗಡಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ, ಸುಜಾತಾ ಕೋಳಿ, ಪುಷ್ಪಾ ಭರಮಧೆ, ಲಕ್ಷ್ಮೀ ಹೆಬ್ಬಾಳ, ರೂಪಾ ಹೂಲಿಕಟ್ಟಿ, ವಾಸಂತಿ ಬೋರಗುಂಡಿ, ಪ್ರಿಯಾಂಕ ಡಿ.ಕೆ., ಮಹಾದೇವ ಗೋಮಾಡಿ, ಸಿ.ಎಸ್. ಸೀರಿ, ಬಸವರಾಜ ನಾಯ್ಕ, ಸೋಮಶೇಖರ ವಾಯ್.ಆರ್., ಹೊಳೇಪ್ಪ ಗದಾಡಿ, ಪವಿತ್ರಾ ಬಡಿಗೇರ, ಅನ್ನಪೂಣಾ ಹುಲಕುಂದ, ಶಿವಲೀಲಾ ಹಣಮನ್ನವರ, ಯಮುನಾ ಹಮ್ಮನವರ, ಖಾತೂನಬಿ ನದಾಫ ಭಾಗವಹಿಸಿದ್ದರು.