Breaking News
Home / Recent Posts / ಶ್ರೀ ವೇಮನ್ ಸೋಸಾಯಿಟಿಗೆ 1.83 ಕೋಟಿ ರೂ. ಲಾಭ

ಶ್ರೀ ವೇಮನ್ ಸೋಸಾಯಿಟಿಗೆ 1.83 ಕೋಟಿ ರೂ. ಲಾಭ

Spread the love

ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶ್ರೀ ವೇಮನ್ ಕೋ-ಆಪ್ ಕ್ರೆಡಿಟ್ ಸೋಸಾಯಿಟಿಯು ಕಳೆದ 2023 ಮಾರ್ಚ್ ಅಂತ್ಯಕ್ಕೆ 1.83 ಕೋಟಿ ರೂ ಲಾಭ ಗಳಿಸಿ ಪ್ರಗತಿಯತ್ತ ಸಾಗಿದೆ ಎಂದು ಸೊಸಾಯಿಟಿ ಅಧ್ಯಕ್ಷ ಸಂತೋಷ ಸೋನವಾಲ್ಕರ ತಿಳಿಸಿದರು.

ಪಟ್ಟಣದ ವೇಮನ್ ಸೋಸಾಯಿಟಿಯ ಸಭಾಭವನದಲ್ಲಿ ಪ್ರಗತಿ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು. ಆಡಳಿತ ಮಂಡಳಿಯ ನಿಶ್ವಾರ್ಥ ಸೇವೆ ಮತ್ತು ಸಿಬ್ಬಂದಿವರ್ಗದವರ ಸತತ ಪ್ರಯತ್ನದಿಂದ ಹಾಗೂ ಗ್ರಾಹಕರ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದರಿಂದ ಸೋಸಾಯಿಟಿಯು ಪ್ರಗತಿ ಪಥದತ್ತ ಸಾಗಿದ್ದು ಸೋಸಾಯಿಟಿಯು ಈಗಾಗಲೇ 6 ಶಾಖೆಗಳನ್ನು ಹೊಂದಿದ್ದು ಇನ್ನು ಎರಡು ಶಾಖೆಗಳನ್ನು ಪ್ರಾರಂಭಿಸಲು ಸಹಕಾರ ಇಲಾಖೆಗೆ ಪ್ರಸ್ತಾವಣೆ ಕಳುಹಿಸಲಾಗಿದೆ ಎಂದರು.
ಸೋಸಾಯಿಟಿ ಉಪಾಧ್ಯಕ್ಷ ಹಣಮಂತ ಪ್ಯಾಟಿಗೌಡರ ಮಾತನಾಡಿ ಸೋಸಾಯಿಟಿಯು ಕಳೆದ ಮಾರ್ಚ ಅಂತ್ಯಕ್ಕೆ 3457 ಶೇರುದಾರರಿಂದ 2.96 ಕೋಟಿ ರೂ ಶೇರು, 7.51 ಕೋಟಿ ರೂ ನಿಧಿಗಳು, 120.25 ಕೋಟಿ ಠೇವು ಸಂಗ್ರಹಿಸಿ, ವಿವಿಧ ತರಹದ 80.16 ಕೋಟಿ ರೂ ಸಾಲಗಳನ್ನು ನೀಡಲಾಗಿದೆ. ವಿವಿಧ ಬ್ಯಾಂಕುಗಳಲ್ಲಿ 44.41 ಕೋಟಿ ರೂ ಗುಂತಾವಣಿಗಳನ್ನು ಹೊಂದಿ ಒಟ್ಟು136.98 ಕೋಟಿ ರೂ ದುಡಿಯುವ ಬಂಡವಾಳದೊಂದಿಗೆ ಒಟ್ಟು613.50 ಕೋಟಿ ರೂ ವಾರ್ಷಿಕ ವಹಿವಾಟು ಮಾಡಿ 1.83 ಕೋಟಿ ರೂ ನಿವ್ವಳ ಲಾಭ ಹೊಂದಿ, ಅಡಿಟ್ ವರ್ಗಿಕರಣದಲ್ಲಿ ಅ ಶ್ರೇಣಿ ಪಡೆದುಕೊಂಡಿದೆ ಎಂದರು.
ಸಭೆಯಲ್ಲಿ ಸೋಸಾಯಿಟಿಯ ನಿರ್ದೇಶಕರಾದ ವಿಜಯಕುಮಾರ ಸೋನವಾಲ್ಕರ, ಯಮನಪ್ಪ ಮಂಟನವರ, ಹಣಮಂತ ದಂಟಪ್ಪನವರ, ಸಚೀನ ಸೋನವಾಲ್ಕರ, ಪಾಂಡಪ್ಪ ಸೋನವಾಲ್ಕರ, ತಮ್ಮಣ್ಣಾ ಝಂಡೇಕುರಬರ, ಸಿದ್ದಪ್ಪ ಪೂಜೇರಿ, ಲತಾ ಸತರಡ್ಡಿ, ಲಕ್ಷ್ಮೀಬಾಯಿ ಸಂತಿ, ರಾಮಪ್ಪ ಹಾದಿಮನಿ, ಪ್ರಧಾನ ವ್ಯವಸ್ಥಾಪಕ ಪರಶುರಾಮ ಕುಟರಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ