ಇಂಜಿನೀಯರಿಂಗ್ ಮತ್ತು ಮೆಡಿಕಲ್ ಪದವಿ ಕಲಿಯಲಿಕ್ಕೆ ಕಳೆದ ವರ್ಷದಲ್ಲಿ ವಿದ್ಯಾಪೋಷಕದಿಂದ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿಗಳು
ಮೂಡಲಗಿ: ಧಾರವಾಡದ ವಿದ್ಯಾಪೋಷಕ ಸಂಸ್ಥೆಯು 2025-26ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪ್ರವೇಶಕ್ಕೆ ಕರ್ನಾಟಕದ ಅರ್ಹ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಿದೆ.
ವಿದ್ಯಾರ್ಥಿಗಳು 2024-25ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಶೇ.80ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಇಂಜಿನೀಯರಿಂಗ ಮತ್ತು ಮೆಡಿಕಲ್ ಪದವಿಗಳಿಗೆ ಪ್ರವೇಶ ಪಡೆಯಬಯಸುವವರು ಅರ್ಜಿ ಹಾಕಲು ಅರ್ಹರಿರುತ್ತಾರೆ. ಕರ್ನಾಟಕದಲ್ಲಿ ಇಂಜಿನೀಯರಿಂಗ್ ಸೇರಬಯಸುವ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ 25000ಕ್ಕಿಂತ ಕಡಿಮೆ ರ್ಯಾಂಕ್ ಹಾಗೂ ಮೆಡಿಕಲ್ ಸೇರಬಯಸುವವರು ನೀಟ್ ಪರೀಕ್ಷೆಯಲ್ಲಿ 3000ಕ್ಕಿಂತ ಕಡಿಮೆ ರ್ಯಾಂಕ್ ಹಾಗೂ ಅಖಿಲ ಭಾರತ ನೀಟ್ ರ್ಯಾಂಕಿಂಗ್‍ದಲ್ಲಿ 60,000ಕ್ಕಿಂತ ಕಡಿಮೆ ರ್ಯಾಂಕ್ ಪಡೆದಿರಬೇಕು. ಕುಟುಂಬದ ವರಮಾನ ಮಾಸಿಕ ರೂ.15 ಸಾವಿರಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ವಿದ್ಯಾಪೋಷಕದ www.vidyaposhak.ngo ವೆಬ್‍ಸೈಟ್‍ದಲ್ಲಿರುವ ಅರ್ಜಿಯನ್ನು ಆನ್‍ಲೈನದಲ್ಲಿ ಇದೇ ಜೂನ್ 30ರ ಒಳಗಾಗಿ ಸಲ್ಲಿಸಬೇಕು. ಅಧಿಕ ಮಾಹಿತಿಗಾಗಿ ಬೆಳಗಾವಿ ಜಿಲ್ಲಾ ವಿದ್ಯಾಪೋಷಕ ಸಂಸ್ಥೆಯ ಕಾರ್ಯನಿರ್ವಾಹಕಿ ರೇಣುಕಾ ಐರಾಣಿ (ದೂರವಾಣಿ ಸಂಖ್ಯೆ: 0836-2747357/8861201828) ಅವರನ್ನು ಸಂಪರ್ಕಿಸಲು ಮೂಡಲಗಿಯ ವಿದ್ಯಾಪೋಷಕ ಸಂಸ್ಥೆಯ ಹಿರಿಯ ಸ್ವಯಂಸೇವಕ ಬಾಲಶೇಖರ ಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.