Breaking News
Home / ತಾಲ್ಲೂಕು / ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನ

ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನ

Spread the love

*ಮೂಡಲಗಿ, ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರವನ್ನು ಸಸಿಗೆ ನೀರು ಹಾಕಿ ಗಣ್ಯರು ಉದ್ಘಾಟಿಸಿದರು.*

ಮೂಡಲಗಿ :-ಯುವಕರಿಗೆ ತಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಜಿ.ಪಂ ಸದಸ್ಯೆ ಶ್ರೀಮತಿ ವಾಸಂತಿ ತೇರದಾಳ ಹೇಳಿದರು.
ಅವರು ಶನಿವಾರದಂದು ಕರುನಾಡು ಸೈನಿಕ ತರಬೇತಿ ಕೇಂದ್ರ ಇವರ
ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿ ಜಿಲ್ಲಾ ಯುವ ಸಮನ್ವಯ ಅಧಿಕಾರಿ ರೋಹಿತ ಕಲರಾ ಮಾತನಾಡಿದರು .

ಅತಿಥಿ ಬಾಲಶೇಖರ ಬಂದಿ ಮಾತನಾಡಿ,ಯುವಕರಿಂದ ಜಲ ಸಂರಕ್ಷಣೆಗೆ ಸಾಕ್ಷರತೆ ಕುರಿತು ಅರಿವು ಮೂಡಿಸುವ ಜವಾಬ್ದಾರಿ ಬಹಳಷ್ಠಿದ್ದು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪೌಷ್ಟಿಕ ಆಹಾರ, ಆರೋಗ್ಯ ಮತ್ತು ಶಿಕ್ಷಣ ಪ್ರಮುಖವಾಗಿದೆ. ಯುವಕರು ಸದೃಢ ದೇಶ ಕಟ್ಟುವುದರ ಜೊತೆಗೆ ಸದೃಢ ಶರೀರವನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಪ್ರೋ, ಸಂಜಯ ಖೋತ ಮಾತನಾಡಿ, ದೇಶದ ಬೆಳೆವಣ ಗೆಗೆ ಯುವಕರ ಪಾತ್ರ ಪ್ರಮುಖವಾಗಿದ್ದು ಅವರಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯೂ ಅಷ್ಟೇ ಪ್ರಮುಖವಾಗಿದ್ದು ಆ ನಿಟ್ಟಿನಲ್ಲಿ ಈ ತರಬೇತಿ ಕೇಂದ್ರವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.
ಜಾತಿ,ಧರ್ಮಗಳ ಮದ್ಯೆ ಕಿಚ್ಚು ಹಚ್ಚಿ ಅಶಾಂತಿ ನಿರ್ಮಾಣ ಮಾಡುವವರನ್ನು ಮಟ್ಟ ಹಾಕಲು ಸೈನಿಕರಿಗೆ ಕಿವಿಮಾತು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂಧಿ ಶಿವಲಿಂಗಪ್ಪ ಪಾಟೀಲ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದ ಕರೋನಾ ವೈರಸ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಹೇಳುವ ಮೂಲಕ ದೇಶ ವಾಸಿಗಳು ಕರೋನಾ ವೈರಸ ಬಗ್ಗೆ ಭೀತಿಗೊಳ್ಳುವ ಅವಶ್ಯಕತೆಯಿಲ್ಲ,ಪ್ರಾಚೀನ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಯು ಶ್ರೇಷ್ಟವಾಗಿದೆ ಮುನ್ನೆಚ್ಚರಿಕೆ ಅನುಸರಿಸಿದರೆ ಒಳ್ಳಯದು ಎಂದರು.
ಸ್ಥಳೀಯ ಆರಕ್ಷಕ ಠಾಣೆಯ ಪಿಎಸ್‍ಐ ಎಮ್,ಎನ್,ಸಿಂಧೂರ ಮಾತನಾಡಿ ಸ್ವಾಮಿ ವಿವೇಕಾನಂದರ ತತ್ವಗಳನ್ನು ಯುವಜನತೆ ಅಳವಡಿಸಿ ಸದೃಡ ಭಾರತ ನಿರ್ಮಾಣ,ಸ್ವಚ್ಚ ಭಾರತ,ಜಲ ಸಂಸರಕ್ಷಣೆ ಮಾಡುವಲ್ಲಿ ಕಾರ್ಯ ಪ್ರವೃತರಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಅತಿಥಿಗಳನ್ನು ಸತ್ಕರಿಸಿ ಮಾತನಾಡಿ, ಜೀವಜಲ ಅತ್ಯಮೂಲ್ಯವಾಗಿದ್ದು ನೀರು ಸಮುದಾಯ ಸಂಪನ್ಮೂಲ ಮತ್ತು ಅದರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಆ ನಿಟ್ಟಿನಲ್ಲಿ ಯುವ ಶಕ್ತಿ ಜಲ ಭದ್ರತೆಗೆ ಮುಂದಾಗಿ ಮಾರಕ ರೋಗಗಳು,ದೇಶ ವಿರೋಧಿ ಚಟುವಟಿಕೆಗಳನ್ನು ತಡೆಯುವಲ್ಲಿ ಸಾಮಾಜಿಕ ಕಳಕಳಿ ಹೊಂದಬೇಕೆಂದರು.
ಶ್ರೀಶೈಲ ತಡಸನ್ನವರ ,ಸತೀಶ ಬಿ ಮಾತನಾಡಿದರು.
ಹಳ್ಳೂರ ಪಿ.ಕೆ.ಪಿ.ಎಸ್.ಸದಸ್ಯ ಹನುಮಂತ ತೇರದಾಳ ಧಾರವಾಡ ಬಾಲ ವಿಕಾಸ ನಿರ್ದೇಶಕ ಗುರು ಪಾಟೀಲ,ಮಾಂತೇಶ ರಡ್ಡೇರಹಟ್ಟಿ,ಎಎಸ್‍ಐ ಚಂದ್ರಶೇಖರ,ಸೇವಾ ನಿರತ ಸೈನಿಕರಾದ ಮಹಾದೇವ ಡಬ್ಬನ್ನವರ ಉಪಸ್ಥಿತರಿದ್ದರು.

*ಹೀನಾ ಪಟೇಲ ಸ್ವಾಗತಿಸಿ ವಂದಿಸಿದರು.*

*ವರದಿ : ಈಶ್ವರ* *ಢವಳೇಶ್ವರ* *ಮೂಡಲಗಿ*


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ