Breaking News
Home / Recent Posts / ಯಾದವಾಡದಲ್ಲಿ ನ.7 ರಂದು ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಸಮಾರಂಭ

ಯಾದವಾಡದಲ್ಲಿ ನ.7 ರಂದು ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಸಮಾರಂಭ

Spread the love

ಯಾದವಾಡದಲ್ಲಿ ನ.7 ರಂದು ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಸಮಾರಂಭ

ಯಾದವಾಡ : ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ ಬೆಂಗಳೂರು ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಸಮಾರಂಭವು ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಶ್ರೀ ಹರಳಯ್ಯ ಕಲ್ಯಾಣ ಮಂಟಪದಲ್ಲಿ ದಿ.7ರಂದು ಮುಂಜಾನೆ 11 ಘಂಟೆಗೆ   ಜರುಗಲಿದೆ ಎಂದು ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ಸದಸ್ಯ ಶಂಕರೆಪ್ಪ ಬೆಳಗಲಿ ಹೇಳಿದರು.
ಅವರು ರವಿವಾರದಂದು ಯಾದವಾಡ ಗ್ರಾಮದ ಶ್ರೀ ಹರಳಯ್ಯ ಕಲ್ಯಾಣ ಮಂಟಪದ ಕಾರ್ಯಾಲಯದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಗೌರವ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ತೊಂಡಿಕಟ್ಟಿಯ ಶ್ರೀ ಅವಧೂತ ಗಾಳೇಶ್ವರ ಮಠದ ಪೂಜ್ಯ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು ಹಾಗೂ ಕೊಪದಟ್ಟಿಯ ಪೂಜ್ಯ ಶ್ರೀ ಶಿವಲಿಂಗಪ್ಪ ಅಜ್ಜನವರು ಹುಬ್ಬಳ್ಳಿ ವಹಿಸುವರು. ಸಮಾರಂಭದ ಉದ್ಘಾಟನೆಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ನೆರವೇರಿಸುವರು. ಅಧ್ಯಕ್ಷತೆ ಶ್ರೀ ಹರಳಯ್ಯ ಸಮಾಜದ ಹಿರಿಯರಾದ ಅಣ್ಣಪ್ಪ ಬೆಣಗಿ ವಹಿಸುವರು. ಅರಭಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಭೂತಾಳಿ ಉಪಸ್ಥಿತರಿರುವರು.
ಗೌರವ ಸನ್ಮಾನಿತರಾದ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ, ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಮದಲಭಾವಿ, ಕೋಶಾಧಿಕಾರಿ ಮಂಜುನಾಥ ಹಂಜಗಿ, ಉಪಾಧ್ಯಕ್ಷರುಗಳಾದ ಪರುಶರಾಮ ಅರಕೇರಿ, ಭೀಮರಾವ ಕಟ್ಟಿಮನಿ, ವಾಸು. ಬಿ,ಮಹಾದೇವ ಕಬಾಡಿ, ಉಪ ಕಾರ್ಯದರ್ಶಿ ನಾಗರಾಜ ಕಲಾದಗಿ, ಸಂಘಟನಾ ಕಾರ್ಯದರ್ಶಿ ಗಳಾದ ದೀಪಕ ಕುಡಾಲಕರ, ರಮೇಶ ವತನ, ಪ್ರವೀಣ ರಾಯಬಾಗ, ವಿನಾಯಕ ಕಾನಡೆ,ಈಶ್ವರ ಕನೇರಿ,ದಶರಥ ಅರಕೇರಿ, ಕೃಷ್ಣಪ್ಪ ಬೆಟಗೇರಿ,ಸರೋಜಾ ಸಂಪಗಾಂವ,ರಾಘವೇಂದ್ರ ಗಾಮನಗಟ್ಟಿ, ಸದಸ್ಯರುಗಳಾದ ಯಲ್ಲಪ್ಪ ಬೆಂಡಿಗೇರಿ,ಶಿವಾನಂದ ಮಬ್ರುಮಕರ್, ಯಲ್ಲಪ್ಪ ಸಾನಕೆನ್ನವರ, ಧರ್ಮಣ್ಣ ಸಾನಕೆನ್ನವರ, ಪರುಶರಾಮ ಹೋನಕೇರಿ,ರಾಘವೇಂದ್ರ ದೊಡಮನಿ,ಸುನೀಲ ಹೊಂಗಲ,ನಂದನ ಬೋರಕರ,ಆನಂದ ಮದಲಭಾಂವಿ,ಅಶೋಕ ಸೌದಾಗರ, ಸಂಗಮೇಶ ಬಾಲಾಗಾಂವಿ,ರಾಯಗೊಂಡ ಸಾಳೆ,ನಿರಂಜನ ಬಾಬು,ವಿದ್ಯಾಧರ ತೇರದಾಳ ಹಾಗೂ ನಿವೃತ್ತ ನೌಕರರಾದ ಶಿವಪ್ಪ ಬೆಣಗಿ,ಶಿವಪ್ಪ ಅರಳಿಮಟ್ಟಿ,ದುರ್ಗಪ್ಪ ಸವದತ್ತಿ, ಅನ್ನಕ್ಕ ಸವದತ್ತಿ,ವಿಠ್ಠಲ ಬೆಣಗಿ, ಭಾರತಿ ಬೆಣಗಿ, ಮುತ್ತಪ್ಪ ಅರಳಿಮಟ್ಟಿ ಇವರುಗಳಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಶಂಕರೆಪ್ಪ ಬೆಳಗಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಯಾದವಾಡ ಹರಳಯ್ಯ ಸಮಾಜದ ಮುಖಂಡರಾದ ಪಾಂಡಪ್ಪ ಅರಳಿಮಟ್ಟಿ, ಶ್ರೀಶೈಲ ತೋರಗಲ್, ಹಣಮಂತ ಬಾಗಲಕೋಟ, ರಾಮಪ್ಪ ಸಣ್ಣಕ್ಕಿ, ವಿಠ್ಠಲ ಬೆಣಗಿ, ಪರಮೇಶ್ವರ ದೊಡಮನಿ, ಸತ್ಯಪ್ಪ ಬೆಳಗಲಿ,ಶೇಖರ ಮದ್ದಾಪೂರ, ರಾಜು ರಾಯಬಾಗ, ಬಸಪ್ಪ ಬೆಳಗಲಿ,ನಿಂಗಪ್ಪ ಮಡ್ಡೆನ್ನವರ ಸೇರಿದಂತೆ ಸಮಾಜದ ಹಿರಿಯರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ