Breaking News
Home / ಬೆಳಗಾವಿ / ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ

ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ

Spread the love

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ಜರಗುವುದು. ಮೆರವಣಿಗೆಯಲ್ಲಿ ಅನೇಕ ಕಲಾವಿದರು, ತಲಾ ತಂಡಗಳು ಹಾಗೂ ಸುತ್ತಮುತ್ತಿನ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ನಮ್ಮ ಕರವೇ ಸಂಸ್ಥಾಪಕ ಕಲ್ಮೇಶ ಗಾಣಿಗಿ ಹೇಳಿದರು.

ಬುಧುವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿ ವರ್ಷವೂ ಕೂಡಾ ಯಾದವಾಡ ಗ್ರಾಮದಲ್ಲಿ “ಯಾದವಡ ಸಾಂಸ್ಕøತಿಕ ಉತ್ಸವ” ಕಾರ್ಯಕ್ರಮದ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ಮಾಡಲಾಗುತ್ತಿದೆ. ಆದರೆ ದೀಪಾವಳಿ ಹಬ್ಬ ಮತ್ತು ಸ್ಥಳೀಯ ಗ್ರಾಪಂ ಉಪ ಚುನಾವಣೆ ಇರುವುದರಿಂದ ಈ ಬಾರಿ ನ.1ರಂದು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಕನ್ನಡಾಂಬೆಯ ಭ್ಯವ ಮೆರವಣಿಯೊಂದಿಗೆ ಆಚರಿಸಿ, ನವೆಂಬರ ತಿಂಗಳ ಕೊನೆಯ ವಾರದಲ್ಲಿ “ಯಾದವಡ ಸಾಂಸ್ಕøತಿಕ ಉತ್ಸವ” ಎಂಬ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಲಾಗುತ್ತಿದೆ ಎಂದರು.

ನಮ್ಮ ಕರವೇ ಯಾದವಾಡ ಘಟಕದ ಅಧ್ಯಕ್ಷ ಅಜಯ ಜಾಧವ್ ಮಾತನಾಡಿ, ಕಳೆದ 15 ವರ್ಷದಿಂದ ನಮ್ಮ ಕರವೇ ಸಂಘಟನೆಯಿಂದ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದ್ದು, ನ.1ರಂದು ಮುಂಜಾನೆ 9 ಗಂಟೆಗೆ ಗ್ರಾಮದ ಪೇಟೆ ಆವರಣದಲ್ಲಿರುವ ಧ್ವಜಸ್ಥಂಬಕ್ಕೆ ಕನ್ನಡ ಧ್ವಜಾರೋಹಣ ನೆರವೇಸುವುದರ ಮೂಲಕ ಮೆರವಣಿಗೆಗೆ ಗ್ರಾಮದ ಹಿರಿಯರಿಂದ ಚಾಲನೆ ನೀಡುವವರು. ಮತ್ತು ಮೆರಣಿಗೆಯಲ್ಲಿ ಗ್ರಾಮದ ಎಲ್ಲ ಶಾಲಾ ಮಕ್ಕಳು ಹಾಗೂ ದೇಶದ ಮಹಾನ್ ವ್ಯಕ್ತಿಗಳ ವೇಷಭೂಷಯೊಂದಿಗೆ ಜರಗುವುದು ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಮಲ್ಲಿಕಜಾನ್ ಜಾರೆ, ವೆಂಕಟೇಶ ಇಟ್ಟನ್ನವರ ಇದ್ದರು.

 


Spread the love

About inmudalgi

Check Also

ಅರಳಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ

Spread the loveಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಭಜನಾ ಕಾರ್ಯಕ್ರಮ ಹಾಗೂ ಸಮುದಾಯ ಭವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ