ಜನಮನ ಸೆಳೆದ ಎತ್ತುಗಳ ಒಂದು ನಿಮಿಷದ ಬಂಡಿ ಸ್ಫರ್ಧೆ
ಮೂಡಲಗಿ: ತಾಲೂಕಿನ ಯಾದವಾಡದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ರವಿವಾರ ಜರುಗಿದ ಒಂದು ನಿಮಿಷದ ಎತ್ತುಗಳ ಬಂಡಿ ಸ್ಪರ್ಧೆಯು ಜನಮನ ಸೆಳೆಯಿತು
ಸ್ಪರ್ಧೆಯ ಚಾಲನಾ ಕಾರ್ಯಕ್ರಮದಲ್ಲಿ ಯುವ ಮುಖಂಡ ಸುನಿಲ್ ನ್ಯಾಮಗೌಡ ಗ್ರಾಮ ಪಂಚಾಯತ ಉಪಾಧ್ಯಕ್ಷ ಕಲ್ಮೇಶ್ ಗಾಣಿಗಿ ಈರಣ್ಣ ಮುದ್ದಾಪುರ್ ರಮೇಶ್ ಸಾವಳಗಿ ಹನುಮಂತ ಚಿಕೆಗೌಡರು ಗುರುನಾಥ್ ರಾಮದುರ್ಗ ಹನಮಂತ ಗೋಲ್ಲಪ್ಪ ಕಾಗವಾಡ ಮತ್ತು ಜಾತ್ರಾ ಕಮಿಟಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು
ಸ್ಫರ್ಧೆಯಲ್ಲಿ ಮಹಾರಾಷ್ಟ್ರ ಮತ್ತು ರಾಜ್ಯದ ಬೆಳಗಾವಿ, ಬಾಗಲಕೋಟ, ವಿಜಯಪೂರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 21 ಜೋಡಿ ಎತ್ತುಗಳು ಭಾಗವಹಿಸಿದವು, ಸ್ಫರ್ಧೆಯಲ್ಲಿ ಬೆಳವಟಿಗಿ, ಗೋವಿನಕೋಪ್ಪ, ಬೆಂಡಿಗೇರಿ, ದೇವರಕೊಂಡ, ತಿರಲಾಪೂರ, ದಾದನಟ್ಟಿ, ಕುದರಿಮನಿ, ಅಜರಾ, ಮರಿಕಟ್ಟಿ, ಮಾಡಕನೂರ, ಗೋರಬಾಳ, ಸಂಗಾಂವ, ಮರಿಕಟ್ಟಿ ಕ್ರಮವಾಗಿ ಒಂದರಿಂದ ಹದಿಮೂರವರಿಗೆ ಬಹುಮಾನಗಳನ್ನು ಪಡೆದುಕೊಂಡವು.