Breaking News
Home / ತಾಲ್ಲೂಕು / ಮುಗಳಖೋಡ : ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ರದ್ದು

ಮುಗಳಖೋಡ : ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ರದ್ದು

Spread the love

ಮುಗಳಖೋಡ: ಪಟ್ಟಣದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾನೆ ೭ರಿಂದ ಜನತಾ ಕರ್ಫ್ಯೂ ದಿನ ಭಾನುವಾರ ಎಲ್ಲಾ ರಸ್ತೆಗಳು ಖಾಲಿ ಇರುವುದು ಕಂಡು ಬಂತು. ರಸ್ತೆಯ ಅಕ್ಕಪಕ್ಕದಲ್ಲಿ ಇರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಮತ್ತು ಸುತ್ತಮುತ್ತಲಿನ ಖಣದಾಳ, ಸಸಾಲಟ್ಟಿ, ಹಿಡಕಲ್ ಗ್ರಾಮಗಳು ಹಾಗೂ ನೀರಲಖೋಡಿಯಲ್ಲಿ ಕೂಡಾ ಸಂಪೂರ್ಣ ಬಂದ್ ಇದ್ದವು.

ಎಪ್ರೀಲ್ ೧ ರಿಂದ ೩ರ ರವರೆಗೆ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಅಗ್ನಿ ಕೊಂಡದಲ್ಲಿ ಹಾಯುವ ಹಾಗೂ ಭವ್ಯರಥೋತ್ಸವವನ್ನು ರದ್ದುಗೋಳಿಸಲಾಗಿದೆ.

ಭಕ್ತರಿಗೆ ದರ್ಶನ ಭಾಗ್ಯವಿಲ್ಲ:- ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಭಕ್ತರಿಗೆ ಕಳೆದ ೪-೫ ದಿನಗಳಿಂದ ದರ್ಶನ ಭಾಗ್ಯ ನೀಡದೆ ಮುಖ್ಯಮಹಾದ್ವಾರ ಪೂರ್ವ ಹಾಗೂ ಉತ್ತರ ದಿಕ್ಕಿಗೆ ಇರುವ ಬಾಗಿಲುಗಳನ್ನು ಬಂದ ಮಾಡಿ ಬೀಗ ಹಾಕಲಾಗಿದೆ ಶ್ರೀಮಠದ ಅರ್ಚಕರು ಪ್ರತಿನಿತ್ಯ ಪೂಜೆ ನೇರವೇರಿಸಿ ಮಂತ್ರ ಘೋಷಗಳು ನಡೆಯುತ್ತದೆ.
ಸಂತೆ :- ಪಟ್ಟಣದಲ್ಲಿ ಬುಧವಾರ ಹಾಗೂ ಶನಿವಾರ ಎಂದಿನoತ್ತೆ ಸಂತೆ ನಡೆಯಿತು ರೈತರು ಬೆಳೆದ ತರಕಾರಿಯನ್ನು ತಂದು ಮಾರಾಟ ಮಾಡಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ