Breaking News
Home / 2020 / ಡಿಸೆಂಬರ್

Monthly Archives: ಡಿಸೆಂಬರ್ 2020

ಹಳ್ಳೂರ ಗ್ರಾಪಂ ಚುನಾವಣೆ : ಭೀಮಶಿ ಮಗದುಮ ನೇತೃತ್ವವದ ಗುಂಪಿಗೆ ಜಯ

ಹಳ್ಳೂರ ಗ್ರಾಪಂ ಚುನಾವಣೆ : ಭೀಮಶಿ ಮಗದುಮ ನೇತೃತ್ವವದ ಗುಂಪಿಗೆ ಜಯ ಮೂಡಲಗಿ: ತಾಲೂಕಿನಲ್ಲಿಯೇ ತೀವ್ರ ಜಿದ್ದಾ ಜಿದ್ದಿಯೊಂದಿಗೆ ಕುತೂಹಲಕ್ಕೆ ಕಾರಣವಾಗಿದ್ದ ಹಳ್ಳೂರ ಗ್ರಾಮ ಪಂಚಾಯತ್ ಚುನಾವಣೆಯು ನೇರವಾಗಿ ಹನಮಂತ ತೇರದಾಳ ಹಾಗೂ ಮಾಜಿ ಜಿಪಂ ಸದಸ್ಯ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ ಗುಂಪುಗಳ ನಡುವೆ ನಡೆದಿತ್ತು. ಫಲಿತಾಂಶದಲ್ಲಿ 25 ಸದಸ್ಯರಲ್ಲಿ ಭೀಮಶಿ ಬೆಂಬಲಿತ 18 ಸದಸ್ಯರು ಹಾಗೂ ಹನಮಂತ ತೇರದಾಳ ಬೆಂಬಲಿತ 7 ಜನ ಆಯ್ಕೆಯಾಗುವ …

Read More »

ಆಶುಭಾಷಣ ಸ್ಪರ್ಧೆಯಲ್ಲಿ ವೀಣಾ ಪೂಜಾರಿಗೆ ತೃತೀಯ ಸ್ಥಾನ.

ಆಶುಭಾಷಣ ಸ್ಪರ್ಧೆಯಲ್ಲಿ ವೀಣಾ ಪೂಜಾರಿಗೆ ತೃತೀಯ ಸ್ಥಾನ. ಕಲ್ಲೋಳಿ: ಮಂಗಳವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ ೨೦೨೦-೨೧ರ ಆಶುಭಾಷಣ ಸ್ಪರ್ಧೆಯಲ್ಲಿ ಕಲ್ಲೋಳಿ ಶ್ರೀ ರಾಮಲಿಂಗೇಶ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಎನ್.ಎಸ್.ಎಸ್. ಸ್ವಯಂಸೇವಕಿ ಕು. ವೀಣಾ ಪೂಜಾರಿ ತೃತೀಯ ಸ್ಥಾನ …

Read More »

ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಎಲ್ಲ 33 ಗ್ರಾಮ ಪಂಚಾಯತಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಮುನ್ನಡೆಯಲ್ಲಿ

ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಎಲ್ಲ 33 ಗ್ರಾಮ ಪಂಚಾಯತಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಮುನ್ನಡೆಯಲ್ಲಿ ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ …

Read More »

ಧರ್ಮೇಗೌಡರ ನಿಧನಕ್ಕೆ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ

ಧರ್ಮೇಗೌಡರ ನಿಧನಕ್ಕೆ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ ಗೋಕಾಕ: ವಿಧಾನ ಪರಿಷತ್ತಿನ ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರ ನಿಧನಕ್ಕೆ ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದ ಧರ್ಮೇಗೌಡರು ವಿಧಾನ ಪರಿಷತ್ತಿನ ಉಪಸಭಾಪತಿಗಳಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನದಿಂದ ಒಬ್ಬ ಆತ್ಮೀಯ ಗೆಳೆಯನೊಬ್ಬನನ್ನು ಕಳೆದುಕೊಂಡಂತಾಗಿದೆ. ಧರ್ಮೇಗೌಡರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲಿ. ಅವರ ಕುಟುಂಬದವರಿಗೆ ಅಗಲಿಕೆಯ ದು:ಖವನ್ನು …

Read More »

ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಆಯ್ಕೆ

ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ ಆಯ್ಕೆ ಮೂಡಲಗಿ: ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಸಭೆ ಗುಲಾರ್ಪೂರದಲ್ಲಿ ನಡೆಯಿತು. ಈ ವೇಳೆ ಸಂಘದ ಪದಾಧಿಕಾರಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ, ಉಪಾಧ್ಯಕ್ಷರಾಗಿ ಮಹಾದೇವ ನಡುವಿನಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಮಗದಮ್ಮ, ಸಹಕಾರ್ಯದರ್ಶಿಯಾಗಿ ಶಿವಾನಂದ ಹಿರೇಮಠ, ಖಜಾಂಚಿಯಾಗಿ ಅಲ್ತಾಫ್ ಹವಾಲ್ದಾರ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸುಧಾಕರ ಉಂದ್ರಿ, ಶಿವಾನಂದ ಮರಾಠೆ, ಹಾಗೂ ಸಂಘದ …

Read More »

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಧ್ಯೇಯ ವ್ಯಾಖ್ಯೆವಾಗಿರುವಂತಹ ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯ – ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ

ಮೂಡಲಗಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಧ್ಯೇಯ ವ್ಯಾಖ್ಯೆವಾಗಿರುವಂತಹ ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಮೂರು ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದ್ದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಡಿ. 27 ರಂದು ಶ್ರೀ ಮಾರುತಿ ದೇವರ ಮಂದಿರದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಭಜರಂಗದಳ …

Read More »

ಬನವಾಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ.79.13ರಷ್ಟು ಮತದಾನ

ಬನವಾಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ.79.13ರಷ್ಟು ಮತದಾನ ಬನವಾಸಿ: ಬನವಾಸಿ ಗ್ರಾಮ ಪಂಚಾಯತ್‍ನ 5 ವಾರ್ಡ್‍ಗಳ 18ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆಯಿತು. ಪಟ್ಟಣದಲ್ಲಿ ಒಟ್ಟು 5597 ಮತದಾರರಲ್ಲಿ 4429 ಮತದಾರರು ಮತ ಚಲಾಯಿಸಿದ್ದು ಶೇ 79.13ರಷ್ಟು ಮತದಾನವಾಗಿದೆ. ಮುಂಜಾನೆ 7 ಕ್ಕೆ 7 ಬೂತ್‍ಗಳಲ್ಲಿ ಪ್ರಾರಂಭವಾದ ಮತದಾನವೂ ಆರಂಭದಲ್ಲಿಯೇ ಚುರುಕುಗೊಂಡು ಮಧ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿ ಮಧ್ಯಾಹನದ ನಂತರ ವೇಗ ಪಡೆಯಿತು. ಮತದಾರು ಸರತಿಸಾಲಿನಲ್ಲಿ ನಿಂತು ಮತದಾನದ …

Read More »

‘ನಿಸ್ವಾರ್ಥದ ಸಮಾಜ ಸೇವೆಯು ಅಮೂಲ್ಯವಾದದ್ದು’

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಕಾರ್ಯಚಟುವಟಿಕೆಗಳ ಪರಿವೀಕ್ಷಣೆ ಭೇಟ್ಟಿ ನೀಡಿದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ ಮಾತನಾಡಿದರು ‘ನಿಸ್ವಾರ್ಥದ ಸಮಾಜ ಸೇವೆಯು ಅಮೂಲ್ಯವಾದದ್ದು’ ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಲ್ಲಿ ದೊರೆಯುವ ಸಂತೋಷಕ್ಕೆ ಬೆಲೆಕಟ್ಟಲಿಕ್ಕಾಗದು’ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ ಹೇಳಿದರು. ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರಕ್ಕೆ ಭೇಟ್ಟಿ ನೀಡಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ನಂತರ ಶಿವಬೋಧರಂಗ ಕೋ.ಆಫ್. ಕ್ರೆಡಿಟ್ …

Read More »

ಮೂಡಲಗಿಯಲ್ಲಿ ಯಶಸ್ಸಿಗೊಂಡ ಚುನಾವಣೆ ಪ್ರಕ್ರಿಯೆ ತಹಶೀಲ್ದಾರ್ ಡಿ.ಜಿ. ಮಹಾತ್ ಅವರ ಪರಿಶ್ರಮ

ಮೂಡಲಗಿ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಚುನಾವಣೆಯ ಮಸ್ಟರಿಂಗ್ ದಿನದಂದು ಮತಗಟ್ಟೆಗಳಿಗೆ ತೆರಳಲು ಸಜ್ಜಾಗಿ ಸಾಲಾಗಿ ನಿಂತಿರುವ ಬಸ್‍ಗಳು ತಹಶೀಲ್ದಾರ್ ಡಿ.ಜಿ. ಮಹಾತ್ ಅವರ ಹಗಲಿರಳು ಪರಿಶ್ರಮ ಮೂಡಲಗಿಯಲ್ಲಿ ಯಶಸ್ಸಿಗೊಂಡ ಚುನಾವಣೆ ಪ್ರಕ್ರಿಯೆ ಮೂಡಲಗಿ: ಮೂಡಲಗಿ ತಾಲ್ಲೂಕಿನ ಗ್ರಾಮ ಪಂಚಾಯ್ತಿಯ ಚುನಾವಣೆಯ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನು ಮೂಡಲಗಿಯಲ್ಲೆಯೇ ಸ್ಥಾಪಿಸಿದ್ದು, ಈ ಬಾರಿ ಗಮನಸೆಳೆಯಿತು. ಹೊಸ ತಾಲ್ಲೂಕು ನಿರ್ಮಾಣವಾದ ಮೇಲೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮೂಡಲಗಿಯ ತಹಶೀಲ್ದಾರ್ ಕಚೇರಿಯಿಂದ ಯಶಸ್ಸಿಯಾಗಿ ನಡೆಯಿತು. …

Read More »

ರೈತಪರ ಕಾಳಜಿಯುಳ್ಳ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿಕೆ

ರೈತಪರ ಕಾಳಜಿಯುಳ್ಳ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿಕೆ ಮೂಡಲಗಿ: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತಂದಿದ್ದು ರೈತರು ಭಯ ಪಡುವ ಅಗತ್ಯವಿಲ್ಲ, ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನ ಶ್ಲಾಘೀಸಿದ್ದಾರೆ. ಅರಭಾವಿ ಪಟ್ಟಣದಲ್ಲಿ ಶನಿವಾರ ಡಿ. 26 ರಂದು ಹನುಮಂತ ದೇವರ ದರ್ಶನ ಪಡೆದು, …

Read More »