Breaking News
Home / 2020 (page 36)

Yearly Archives: 2020

ಲಾಕ್ ಡೌನ್ ಸಮಯ ನಿಗದಿ ಪಡಿಸಲು ಮಂಗಳವಾರದಂದು ಕೊರೋನಾ ಬಗ್ಗೆ ಪೂರ್ವಭಾವಿ ಸಭೆ

*ಮಂಗಳವಾರದಂದು ಕೊರೋನಾ ಬಗ್ಗೆ ಪೂರ್ವಭಾವಿ ಸಭೆ* ಮೂಡಲಗಿ ಪಟ್ಟದಲ್ಲಿ _ಕೊರೋನಾ ವೈರಸ್ ದಿನದಿಂದ ದಿನಕ್ಕೆ_ ಹೆಚ್ಚಾಗುತ್ತಿದೆ ಇದನ್ನು ಹತೋಟಿಗೆ ತರಲು ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿದೆ ಈ ಬಗ್ಗೆ ಚರ್ಚಿಸಲು ಕಿರಾಣಿ ,ಅರಿವೆ, ಟೆಲ್ರಿಂಗ, ಬಂಗಾರ, ಹೊಟೇಲ ಜೆರಾಕ್ಸ್ ಮತ್ತು ಆನ್ಲೈನ್ ಸೆಂಟರ್ ಇನ್ನಿತರ ಎಲ್ಲ ಬಗೆಯ ವ್ಯಾಪಾರಸ್ಥರ ಪೂವ೯ಭಾವಿ ಸಭೆಯನ್ನು ಗಾಂಧಿ ಚೌಕದಲ್ಲಿರುವ ಹನುಮಂತ ದೇವರ ದೇವಸ್ಥಾನದ ನಾಳೆ ಮಂಗಳವಾರ ದಿನಾಂಕ 11/08/2020 ರಂದು ಬೆಳಿಗ್ಗೆ …

Read More »

ವಿದ್ಯಾರ್ಥಿನಿಯ ಪ್ರತಿಭೆಗೆ ಅಡ್ಡಿಯಾಗಲಿಲ್ಲ ಬಡತನ,  ಅನಾಥೆಯಾದರೂ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿ ಸಾಧನೆ

ವಿದ್ಯಾರ್ಥಿನಿಯ ಪ್ರತಿಭೆಗೆ ಅಡ್ಡಿಯಾಗಲಿಲ್ಲ ಬಡತನ  ಅನಾಥನಾದರೂ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿ ಸಾಧನೆ ಮೂಡಲಗಿ : ತೀರ ಆರ್ಥಿಕ ಮುಗ್ಗಟ್ಟಿನಲ್ಲಿ ಹಾಗೂ ಈ ಮಾಹಾಮಾರಿ ಕೊರೋನಾದಿಂದ ಬಡ ಕುಟುಂಬದವರಿಗೆ ತುಂಬಾ ಕಷ್ಟವಾಗಿದೆ ಹೀಗಿರುವಾಗ ಬಡ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ,95.68 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಸ್ಥಳೀಯ ಮೇಘಾ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ತನ್ನ ಅನಾಥನಾದರೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದುದನ್ನು …

Read More »

ಶೃತಿ ಬಸನಗೌಡ ಪಾಟೀಲ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ

ಮೂಡಲಗಿ: ವಲಯದ ಘಟಪ್ರಭದ ಕೆ.ಆರ್ ಹುಕ್ಕೇರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಶೃತಿ ಬಸನಗೌಡ ಪಾಟೀಲ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಹಾಗೂ ಕನ್ನಡ ಮಾದ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ 621 ಅಂಕಗಳನ್ನು ಕಲ್ಲೋಳ್ಳಿ ಎಮ್.ಡಿ.ಆರ್.ಎಸ್‍ನ ಸತ್ಯಕನಾಯಣ ಖಂಡ್ರಟ್ಟಿ 5 ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಅಕ್ಷತಾ ಸಾಯನ್ನವರ ತಾಲೂಕಿಗೆ 3 ನೇ ಸ್ಥಾನ ಪಡೆದಿದ್ದು, ಮೂಡಲಗಿ ವಲಯದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಗುರ್ತಿಸುವಂತೆ ಮಾಡಿದ್ದಾರೆ …

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಸೋಮವಾರ ರಂದು ಮತ್ತೆ ಕೊರೋನಾ ಸೋಂಕು ದೃಢ

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಸೋಮವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 10, ಜನರಿಗೆ ಮತ್ತು ಕಲ್ಲೋಳಿ 02, ಸೂಣಧೋಳಿ, 01 ಮಕ್ಕಳಗೇರಿ, 01 ಹಳ್ಳೂರ. 0 ಧೂಪದಾಳ. 01 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,

Read More »

ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ: ಡಾ.ವೈ.ಎಮ್.ಭಜಂತ್ರಿ

ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ: ಡಾ.ವೈ.ಎಮ್.ಭಜಂತ್ರಿ ಗೋಕಾಕ: ಗೋಕಾವಿಯ ದೇಶೀಯ ಭಾಷೆ ವೈವಿಧ್ಯಮಯವಾದುದು, ನಮ್ಮ ಆಡು ಭಾಷೆಯೇ ಬದುಕಿನ ಭಾಷೆಯಾಗಿದೆ. ಭಾಷೆ ದೀಪವಿದ್ದಂತೆ ಮತ್ತು ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡೆಕೇಟ ಸದಸ್ಯರು ಮತ್ತು ಹುಬ್ಬಳ್ಳಿ ಸರಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ.ವೈ.ಎಮ್. ಭಜಂತ್ರಿ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ …

Read More »

ಸೊಸೈಟಿಯಲ್ಲಿ ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಿ ಗೌರವ

ಮೂಡಲಗಿ: ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ತಾಲ್ಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಅವರಿಗೆ ಪಟ್ಟಣದ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷತೆವಹಿಸಿದ್ದ ಸೊಸೈಟಿ ಅಧ್ಯಕ್ಷ ಬಿ.ಬಿ. ಬೆಳಕೂಡ ಮಾತನಾಡಿ ‘ಗ್ರಾಮೀಣ ಭಾಗದಲ್ಲಿ ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಅವರು ಕಲ್ಲೋಳಿ ಪಟ್ಟಣಕ್ಕೆ ಬಹದೊಡ್ಡ ಗೌರವ ತಂದಿದ್ದಾರೆ’ ಎಂದರು. ಈರಣ್ಣ ಕಡಾಡಿ ಅವರು ರಾಜ್ಯಸಭಾ ಸದಸ್ಯತ್ವದೊಂದಿಗೆ ರಾಜ್ಯ ರೈತ ಮೋರ್ಚಾದ ಅಧ್ಯಕ್ಷತೆಗೆ ನೇಮಕವಾಗಿದ್ದಾರೆ. ಕಡಾಡಿ ಅವರು …

Read More »

ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ಬೆಟಗೇರಿ ಗ್ರಾಮದ ಜನರು ಹಾಗೂ ವ್ಯಾಪಾರಸ್ಥರು

ಬೆಟಗೇರಿ:ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದರೂ ಸಹ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಪ್ರತಿ ರವಿವಾರ ಸೇರುವ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಶನಿವಾರದಂದು ಅಪಾರ ಜನಸಂದಣಿಯೊoದಿಗೆ ಸಂತೆ ನಡೆದು, ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾದ ಘಟನೆ ಆ.8 ರಂದು ನಡೆದಿದೆ. ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿನ ಜನರ ವ್ಯಾಪಾರ ವಹಿವಾಟದ ಕೇಂದ್ರ ಸ್ಥಳವಾಗಿದ್ದರಿಂದ ನಿತ್ಯ ನೂರಾರು ಜನ ಇಲ್ಲಿಗೆ ಬಂದು …

Read More »

ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ

ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ ಗೋಕಾಕ- ಅಗಷ್ಟ್ ೮: ಚಂದ್ರಶೇಖರ ಕಂಬಾರರ ಕಾವ್ಯ, ಕಥೆ, ಕಾದಂಬರಿ ನಾಟಕ ಕೃತಿಗಳಲ್ಲಿ ಅಡ್ಡಾಡಿದರೆ ದೇಶಿಯ ನೆಲದಲ್ಲೇ ಎಡವಿದಂತೆ, ಎಬ್ಬಿಸಿದಂತೆ, ಕೆಣಕಿದಂತೆ, ಭಾಸವಾಗುತ್ತದೆ. ಅದೇ ವಾಸನೆ ನೀಡುವ “ಸಿರಿಸಂಪಿಗೆ ” ಜಾನಪದ ನೆಲದ ಸುವಾಸನೆ ಬೀರುವ ಹೂವಾಗಿದೆ ಎಂದು ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ …

Read More »

ಪ್ರಕಟಣೆ

ಮೂಡಲಗಿ 08/08/2020 – ಸುಹಾಸಿನಿ ಬಾಳಪ್ಪ ಬಕರೆ(ಭಸ್ಮೆ) ನಾನು ದಿನಾಂಕ 28/೦7/2020 ರಂದು ಸಿದ್ದಾಪುರ ಮತ್ತು ರಾಣೇಬೆನ್ನೂರ್ ಗೆ ಪ್ರಯಾಣಿಸುವಾಗ ನನ್ನ ಬ್ಯಾಗ್ ನಲ್ಲಿದ್ದ ಚೆಕ್, ಖಾಲಿ ಹಾಳೆಗಳು ಮತ್ತು ಪಾಸ್ಬೂಕ್ ಮಾರ್ಗ ಮಾಧ್ಯದಲ್ಲಿ ಬ್ಯಾಗ್ ಹರಿದ ಕಾರಣ ಎಲ್ಲೊ ಕಳೆದುಹೋಗಿವೆ. ಆದ ಕಾರಣ ದಯವಿಟ್ಟು ಯಾರಿಗಾದರೂ ಸಿಕ್ಕರೆ ನನ್ನ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ. ( ಸುಹಾಸಿನಿ ಬಾಳಪ್ಪ ಬಕರೆ @ಭಸ್ಮೆ, ಲಕ್ಶ್ಮಿ ನಗರ ಮೂಡಲಗಿ 591312 ಜಿಲ್ಲೆ- ಬೆಳಗಾವಿ …

Read More »

ಮೂಡಲಗಿ ಪಟ್ಟಣದಲ್ಲಿ ಇಂದು ಮತ್ತೆ ಕೊರೋನಾ ಕೇಸ್ ಪತ್ತೆ;

ಮೂಡಲಗಿ ಪಟ್ಟಣದಲ್ಲಿ ಇಂದು 1 ಕೊರೋನಾ ಕೇಸ್ ಪತ್ತೆ; ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಲಕ್ಷ್ಮಿ ನಗರದ ಮಹಿಳೆಗೆ ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ನಗರಕ್ಕೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ. ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ …

Read More »