ಬೆಟಗೇರಿ:ಗ್ರಾಮೀಣ ವಲಯದಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಸಮಗ್ರ ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು. ಸಮೀಪದ ಬಿಲಕುಂದಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನ.5ರಂದು ಕಟ್ಟಡ ಉದ್ಘಾಟನೆ ನೆರವೇರಿಸಿ, ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿವೆ …
Read More »Yearly Archives: 2021
ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಗೋವುಗಳಿಗೆ ಪೂಜಿ ಸಲ್ಲಿಸಿ ಜನಜಾಗೃತಿ ಮೂಡಿಸುವ ಸರ್ಕಾದರ ನಿರ್ಧಾರ ಸ್ವಾಗತಾರ್ಹ
ಮೂಡಲಗಿ: ಸರ್ಕಾರದ ನಿರ್ದೇಶನದಂತೆ ನಮ್ಮ ಧಾರ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಮುಂದುನರೆಸಿಕೊಂಡು ಹೋಗುವುದಕ್ಕೆ ಹಾಗೂ ಗೋವುಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಂತೆ ಗೋಮಾತೆಯನ್ನು ಪೂಜಿಸುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ತಹಸೀಲ್ದಾರ ಡಿ ಜಿ ಮಹಾತ ಹೇಳಿದರು. ಶುಕ್ರವಾರ ಪಟ್ಟಣದ ಲಕ್ಷ್ಮೀ ನಗರ ವಾರ್ಡ ನಂ 5ರಲ್ಲಿನ ಶ್ರೀ ಕರೆಮ್ಮ ದೇವಿ ಹಾಗೂ ಹನುಮಂತ ದೇವರ ದೇವಸ್ಥಾನ ಆವರಣದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋ …
Read More »ಚಿನ್ನದ ಪದಕ ಪಡೆದ ಪುಂಡಲೀಕ ಲಕಾಟಿ ಸಾಧನೆ ಮೆಚ್ಚುವಂತದ್ದಾಗಿದೆ: ಮಲ್ಲಿಕಾರ್ಜುನ ನೀಲಣ್ಣವರ
ಚಿನ್ನದ ಪದಕ ಪಡೆದ ಪುಂಡಲೀಕ ಲಕಾಟಿ ಸಾಧನೆ ಮೆಚ್ಚುವಂತದ್ದಾಗಿದೆ: ಮಲ್ಲಿಕಾರ್ಜುನ ನೀಲಣ್ಣವರ ಬೆಟಗೇರಿ:ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪುಂಡಲೀಕ ಲಕಾಟಿ ಚಿನ್ನದ ಪದಕ ಪಡೆದು ದೇಶದ ಮತ್ತು ನಾಡಿನ ಹಾಗೂ ಹುಟ್ಟೂರಿನ ಕೀರ್ತಿ ಹೆಚ್ಚಿಸಿದ ಸಾಧನೆ ಮೆಚ್ಚುವಂತದ್ದಾಗಿದೆ ಎಂದು ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ನೀಲಣ್ಣವರ ಹೇಳಿದರು. ನೇಪಾಳ ದೇಶದ ಪೋಖರಾ ನಗರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತ …
Read More »ಗೋವುಗಳಿಗೆ ವಿಶಿಷ್ಠವಾದ ಸ್ಥಾನವಿದೆ, ದೇಶಿಯ ಗೋ ತಳಿಗಳನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
ಮೂಡಲಗಿ: ನಮ್ಮ ಧಾರ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಯಲ್ಲಿ ಗೋವುಗಳಿಗೆ ವಿಶಿಷ್ಠವಾದ ಸ್ಥಾನವಿದೆ, ಗ್ರಾಮೀಣ ಪ್ರದೇಶದಲ್ಲಿ ಗೋವುಗಳು ರೈತರ ಜೀವನಾಧಾರವಾಗಿದೆ. ದೇಶಿಯ ಗೋ ತಳಿಗಳನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ನ.05 ರಂದು ಕಲ್ಲೋಳಿ ಪಟ್ಟಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಮಾರುತಿ ದೇವರ ದೇವಸ್ಥಾನದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು …
Read More »ಆಧ್ಯಾತ್ಮಿಕ ಚಿಂತನೆಗಳನ್ನು ಹುಟ್ಟುಹಾಕಲು ಆಶ್ರಮವು ಸಹಕಾರಿಯಾಗಲಿದೆ – ಸಂಸದ ಈರಣ್ಣ ಕಡಾಡಿ
ಮೂಡಲಗಿ: ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸಾಮೀಜಿಯವರ ಗುರುಗಳಾದ ವೇದಾಂತ ಕೇಸರಿ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಆಶ್ರಮದಲ್ಲಿ ಜ್ಞಾನ ಪ್ರಸಾರಕ್ಕಾಗಿ ಭಾರತೀಯ ಸಂಸ್ಕøತಿಯನ್ನು ಪ್ರತಿಪಾದಿಸುವ ಚಿಂತನೆಗಳನ್ನು ಪ್ರಸಾರ ಮಾಡಲಿಕ್ಕೆ ಮತ್ತು ಈ ಭಾಗದ ಜನರ ಮನದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹುಟ್ಟುಹಾಕಲು ಈ ಆಶ್ರಮವು ಸಹಕಾರಿಯಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ನ.05 ರಂದು ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ …
Read More »ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.
ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ಗೋಕಾಕ: ದೀಪಾವಳಿ ಬಲಿ ಪಾಡ್ಯಮಿ ದಿನವಾದ ಇಂದು ಶುಕ್ರವಾರದಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿಯಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು. ಅರಭಾವಿಯ ಬಲಭೀಮ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು ದೈವಿ …
Read More »ದೀಪಾವಳಿಗೆ ಮೂಡಲಗಿಯಲ್ಲಿ ಮಹಾರಾಷ್ಟ್ರ ಮಾದರಿ ಕಿಲ್ಲಾ ನಿರ್ಮಾಣ
ದೀಪಾವಳಿಗೆ ಮೂಡಲಗಿಯಲ್ಲಿ ಮಹಾರಾಷ್ಟ್ರ ಮಾದರಿ ಕಿಲ್ಲಾ ನಿರ್ಮಾಣ ಮೂಡಲಗಿ: ನೆರೆಯ ಮಾಹಾರಾಷ್ಟ್ರ ರಾಜ್ಯದಲ್ಲಿ ದೀಪಾವಳಿ ಪ್ರಯುಕ್ತ ಮಣ್ಣಿನಿಂದ ಪುಟ್ಟ ಕಿಲ್ಲಾ ನಿರ್ಮಿಸಿ ಹಬ್ಬವನ್ನು ಸಂಭ್ರಮಿಸುವ ವಾಡಿಕೆಯಂತೆ ಇಲ್ಲಿನ ಪುಟ್ಟ ಬಾಲಕ ಶ್ರೇಯಸ್ ಸೋಮಶೇಖರ ಹಿರೇಮಠ ತನ್ನ ಕೈ ಛಳಕದಿಂದ ಕಿಲ್ಲಾ ಮಾದರಿಯಂತೆ ತಮ್ಮ ಮನೆಯ ಉದ್ಯಾನದಲ್ಲಿ ಪುಟ್ಟ ಕಿಲ್ಲಾ ನಿರ್ಮಿಸಿ ಅದರ ಮುಂದೆ ವಿವಿಧ ಬಗೆಯ ಬೊಂಬೆ ಮತ್ತು ಪ್ರಾಣಿಗಳನ್ನು ಇರಿಸಿ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿರುವುದು ಎಲ್ಲರೂ ಈತನ …
Read More »ಇ ಕೆವೈಸಿಗೆ ನ.10 ಕೊನೆ ದಿನ
ಇ ಕೆವೈಸಿಗೆ ನ.10 ಕೊನೆ ದಿನ ಮೂಡಲಗಿ: ತಾಲೂಕಿನ ಎಲ್ಲ ಅಂತ್ಯೋದಯ ಹಾಗೂ ಬಿಪಿಎಲ್,ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನವೆಂಬರ 10 ರೊಳಗೆ ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಇ ಕೆವೈಸಿ ನೀಡಲು ತಹಸೀಲ್ದಾರ್ ಡಿ.ಜಿ.ಮಹಾತ್ ತಿಳಿಸಿದ್ದಾರೆ. ಸರ್ಕಾರವು ಇ ಕೆವೈಸಿ ಮಾಡಿಕೊಳ್ಳದ ಸದಸ್ಯರಿಗೆ ಮತ್ತೊಮ್ಮೆ ಕಾಲವಕಾಶ ನೀಡಿದ್ದು ಬಾಕಿ ಉಳಿದ ಪಡಿತರ ಸದಸ್ಯರುಗಳಿಗೆ ಈ ಬಾರಿ ಕೊನೆಯ ಅವಕಾಶವಿದ್ದು ಈ ಅವಧಿಯಲ್ಲಿ ಕಡ್ಡಾಯವಾಗಿ ಕೆವೈಸಿ …
Read More »ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿಗೆ ಸನ್ಮಾನ
ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿಗೆ ಸನ್ಮಾನ ಬೆಟಗೇರಿ:ಗ್ರಾಮದ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ವತಿಯಿಂದ ಸೋಮವಾರ ನ.1ರಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸ್ಥಳೀಯ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಕೋಣಿ ಮಾತನಾಡಿ, ನೇಪಾಳ ದೇಶದÀ ಪೋಖರಾ ನಗರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ …
Read More »ವಿಶ್ವದಲ್ಲಿಯೇ ಶ್ರೀಮಂತ ಭಾಷೆ ಕನ್ನಡ: ಪಿಡಿಒ ಎಚ್.ಎನ್.ಭಾವಿಕಟ್ಟಿ
ವಿಶ್ವದಲ್ಲಿಯೇ ಶ್ರೀಮಂತ ಭಾಷೆ ಕನ್ನಡ: ಪಿಡಿಒ ಎಚ್.ಎನ್.ಭಾವಿಕಟ್ಟಿ ಬೆಟಗೇರಿ: ಪ್ರತಿಯೊಬ್ಬರೂ ನಮ್ಮ ನಾಡಿನ ಭಾಷೆ, ನೆಲ, ಸಂಸ್ಕøತಿ, ಸಾಹಿತ್ಯದ ಬಗ್ಗೆ ಅಭಿರುಚಿ, ಅಭಿಮಾನ ಬೆಳಸಿಕೊಳ್ಳಬೇಕು ಎಂದು ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಭಾವಿಕಟ್ಟಿ ಹೇಳಿದರು. ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸೋಮವಾರ ನ.1ರಂದು ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ವಿಶ್ವದಲ್ಲಿಯೇ ಶ್ರೀಮಂತ ಭಾಷೆ ಕನ್ನಡ, ಕನ್ನಡಕ್ಕೆ ಅದರದೇಯಾದ …
Read More »