ಶಾಸಕರ ನಿಧಿಯಿಂದ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಗ್ರಾಮದ ಮುಖಂಡರು. ಕುಲಗೋಡ: ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಾಯಕ್ಕಾಗಿ, ಹಾಗೂ ಕುಲಗೋಡ ಸುತ್ತಮುತ್ತಲಿನ ಜನರಿಗೆ ಈ ಆರೋಗ್ಯ ಕವಚ ಸಂಜೀವಿನಿಯಾಗಲಿದೆ. ನಮ್ಮ ಶಾಸಕರು ಪ್ರತಿ ಸಂಕಷ್ಟದಲ್ಲಿ ಜನರಿಗೆ ಹೆಗಲಾಗಿದ್ದಾರೆ ಎಂದು ಗ್ರಾಮ ಮುಖಂಡ ಗ್ರಾ.ಪಂ ಸದಸ್ಯ ಬಸನಗೌಡ ಪಾಟೀಲ ಹೇಳಿದರು. ಅವರು ಸೋಮವಾರ ಮೂಡಲಗಿ ತಾಲೂಕಿನ ಕುಲಗೋಡ …
Read More »Yearly Archives: 2021
ರಂಗವ್ವ ಬಾಲನಾಯಿಕ. ನಿಧನ
ನಿಧನ ವಾರ್ತೆ ರಂಗವ್ವ ಬಾಲನಾಯಿಕ ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದ ನಿವಾಸಿ ಹಾಗೂ ಮೂಡಲಗಿ ತಾಲೂಕಾ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಸುಭಾಸ ಬಾಲನಾಯಿಕ ಅವರ ತಾಯಿ ಶ್ರೀಮತಿ ರಂಗವ್ವ ಕಲ್ಲಪ್ಪ ಬಾಲನಾಯಿಕ (77) ರವಿವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Read More »ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ
ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ, ಹಸಿರೇ ನಮ್ಮೆಲ್ಲರಿಗೂ ಉಸಿರಾಗಿದೆ ಎಂದು ಹೊಸಟ್ಟಿ ಗ್ರಾಮದ ಬೀಟ್ ಪೊಲೀಸ್ ಪೇದೆ ಬಸಪ್ಪ ಕ್ವಾನ್ಯಾಗೋಳ ಹೇಳಿದರು. ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಶನಿವಾರದಂದು ಹೊಸಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು, ನೀರು ಹಾಕಿ ಮಾತನಾಡಿ, ಅರಣ್ಯ ಸಂಪತ್ತು ಉಳಿಸಿ, …
Read More »ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ
ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ವೆಂಬಂತೆ ಶಿವಾಪೂರ(ಹ) ಗ್ರಾಮದಲ್ಲಿ ನೆಲೆಸಿದ್ದ ಆಧ್ಯಾತ್ಮ ಜೀವಿಗಳು ವಾಸ್ತು ತಜ್ಞರು ದೇವಿ ಆರಾಧಕರು ಆದಂತಹ ಶ್ರೀ ಮಲ್ಲಿಕಾರ್ಜುನ ಶರಣರು ಬಸವಾಶ್ರಮ (ಮಲ್ಲಪ್ಪ ವೆಂಕಪ್ಪ ಹೂಗಾರ, ಹೂಲಿಕಟ್ಟಿ, ಶಿವಾಪೂರ(ಹ) ಇವರು ಶಿವಾಧೀನರಾಗುವದರೊಂದಿಗೆ ಪುರದ ಪುಣ್ಯವೇ ಪುರುಷ ರೂಪದಿಂದ ಹೊರಟಂತೆ ಅಭಾಸವಾಯಿತು. ಶ್ರೀಯುತರು ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಸುಸಂಸ್ಕೃತದ ಮನೆತನದ ಶರಣ ದಂಪತಿಗಳಾದ ಶ್ರೀ ವೆಂಕಪ್ಪ ಹೂಗಾರ …
Read More »ತಳಕಟನ್ನಾಳ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಮೂಡಲಗಿ: ತಳಕಟನ್ನಾಳ ಗ್ರಾ.ಪಂ ಗ್ರಾಮದ ಸರಕಾರಿ ಶಾಲೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲ್ಲಾಯಿತು. ಈರಪ್ಪ ಕೆಂಪಸತ್ತಿ, ಯಮನಪ್ಪ ಮಾದರ, ಕಲ್ಲಪ್ಪ ಪೂಜೇರಿ, ಪುಂಡಲೀಕ ಹುಕ್ಕೇರಿ, ರಾಮಸಿದ್ದ ಗುಡದನ್ನವರ, ಬಸಪ್ಪ ಸೋಂಟನ್ನವರ, ನಿಂಗಪ್ಪ ಗೋಟುರ, ಕಾಡಪ್ಪ ಬಾನಿ, ರಮೇಶ ಭಜಂತ್ರಿ ಇದ್ದರು.
Read More »ಚೈತನ್ಯ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಮೂಡಲಗಿ: ಪಟ್ಟಣದ ಚೈತನ್ಯ ವಸತಿ ಶಾಲೆಯಲ್ಲಿ ಪುಟ್ಟ ಬಾಲಕ ಮಹಾಂತೇಶ ಸಸಿ ನೇಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದನು, ಈ ಸಮಯದಲ್ಲಿ ವಾಯ್.ಬಿ.ಪಾಟೀಲ, ವಿಜಯ ಹೊರಟ್ಟಿ, ಎಸ್.ಎಸ್.ಪಾಟೀಲ ಮತ್ತಿತರು ಇದ್ದರು.
Read More »ಅರಭಾವಿ ಪಟ್ಟಣದಲ್ಲಿ ಅರಭಾವಿ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ವಿಶ್ವ ಪರಿಸರ ದಿನಾಚರಣೆ
ಮೂಡಲಗಿ: ಅರಭಾವಿ ಪಟ್ಟಣದಲ್ಲಿ ಅರಭಾವಿ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗಾನಟ್ಟಿ ನೇತೃತ್ವದಲ್ಲಿ ಆಚರಿಸಲ್ಲಾಯಿತು. ಮಂಜು ಜಲ್ಲಿ, ಶಿವು ದೊಡಗೋಣಿ, ಶ್ರೀಧರ ಸಲಬನ್ನವರ, ಇಕ್ಬಾಲ್ ಸರ್ಕಾವಸ್. ಕುಮಾರ ಪೂಜೇರಿ, ಕೃಷ್ಣಾ ಬಂಡಿವಡ್ಡರ, ಉದಯ ಗುಡದನ್ನರ ಮತ್ತಿತರು ಇದ್ದರು.
Read More »ಸ್ವಯಂಸೇವಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾರಣೆ
ಕಲ್ಲೋಳಿ: ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಎಲ್ಲ ಸ್ವಯಂ ಸೇವಕರಿಗೆ ಸಂಸ್ಥೆ ಅಧ್ಯಕ್ಷರಾದ ಶ್ರೀ ಬಸಗೌಡ ಪಾಟೀಲ, ಆಡಳಿತ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ, ಪ್ರಾಚಾರ್ಯರು ಹಾಗೂ ಅಧ್ಯಾಪಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Read More »ಪೋಲಿಸ್ ಸಿಬ್ಬಂದಿಗೆ ಆಹಾರ ವ್ಯವಸ್ಥೆ
ಪೋಲಿಸ್ ಸಿಬ್ಬಂದಿಗೆ ಆಹಾರ ವ್ಯವಸ್ಥೆ ಮೂಡಲಗಿ: ಕೊರೋನಾ ವೈರಸ್ ಸೋಂಕು ನಿಯಂತ್ರಣದ ಲಾಕ್‍ಡೌನ್ ಸಮಯದಲ್ಲಿ ಬಿಸಿಲು,ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗಳಿಗೆ ಶನಿವಾರ ಮಧ್ಯಾಹ್ನ ಇಲ್ಲಿಯ ಕಲ್ಪವೃಕ್ಷ ಹೊಟೇಲ ಮಾಲಿಕ ವೆಂಕಟೇಶ ಕುದರಿ ಊಟದ ವ್ಯವಸ್ಥೆ ಮಾಡಿಸಿ ಮಾನವೀಯತೆ ಮೆರೆದರು. ಠಾಣೆಯ ಆವರಣದಲ್ಲಿ ಸಿಬ್ಬಂದಿಗಳಿಗೆ ಅಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ಕೊರೋನಾ ಯೋಧರಾಗಿ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದರು. …
Read More »ಮಾನವನ ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ- ಸಿದ್ದಣ್ಣ ದುರದುಂಡಿ
ಮೂಡಲಗಿ: ಮಾನವನ ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮನ್ನು ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹನಿಸುವ ಮೂಲಕ ಚಾಲನೆ ನೀಡೀ ಮಾತನಾಡುತ್ತಾ ಗೀಡಗಳನ್ನು ಮಕ್ಕಳಂತೆ ಪಾಲನೆ ಪೋಷನೆ ಮಾಡಿ ವರ್ಷ ಪೂರ್ತಿ ಬೇಳೆಸುವ ಸಂಕಲ್ಪ ಮಾಡಬೇಕು. ಹಸಿರೆ …
Read More »