ಶಾಸಕರ ನಿಧಿಯಿಂದ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಗ್ರಾಮದ ಮುಖಂಡರು.
ಕುಲಗೋಡ: ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಾಯಕ್ಕಾಗಿ, ಹಾಗೂ ಕುಲಗೋಡ ಸುತ್ತಮುತ್ತಲಿನ ಜನರಿಗೆ ಈ ಆರೋಗ್ಯ ಕವಚ ಸಂಜೀವಿನಿಯಾಗಲಿದೆ. ನಮ್ಮ ಶಾಸಕರು ಪ್ರತಿ ಸಂಕಷ್ಟದಲ್ಲಿ ಜನರಿಗೆ ಹೆಗಲಾಗಿದ್ದಾರೆ ಎಂದು ಗ್ರಾಮ ಮುಖಂಡ ಗ್ರಾ.ಪಂ ಸದಸ್ಯ ಬಸನಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ಜರುಗಿದ ಶಾಸಕರ ಸ್ಥಳೀಯ ಪ್ರಾಧಿಕಾರ ಅಭಿವೃದ್ಧಿ ಯೋಜನೆಯಡಿಯಲ್ಲಿ ಕ್ಷೇತ್ರದ ಕುಲಗೋಡ ಆಸ್ಪತ್ರೆಗೆ ಅಂಬ್ಯುಲೇನ್ಸ ಚಾಲನೆ ನೀಡಿ ಮಾತನಾಡಿ, ಕೊರೋನಾ 2ನೇ ಅಲೆಯು ಗ್ರಾಮೀಣ ಭಾಗಕ್ಕೆ ಹೆಚ್ಚು ಹಬ್ಬಿದೆ. ಸೋಂತಿತರಿಗೆ ಹಾಗೂ ಸೋಂಕಿನ ಸ್ವಭಾವವಿರುವರಿಗೆ ಸರಿಯಾದ ರೋಗದ ಲಕ್ಷಣ, ಆರೈಕೆ ಕ್ರಮಗಳು, ಮುನ್ನೆಚ್ಚರಿಕೆಯ ಕೊರತೆಯಿಂದಾಗಿ ರೋಗದ ಭೀತಿ ಹೆಚ್ಚಾದಾಗ ಅಗತ್ಯ ವೈಧ್ಯಕೀಯ ಸೌಲಭ್ಯಗಳ ಕೊರತೆಯುಂಟಾಗುವದು. ಸೋಂಕಿತರಿಗೆ ತೊಂದರೆಯಾಗಬಾರದೆಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಕೊಡಿಸಿರುವ ಅಂಬ್ಯುಲೆನ್ಸನ್ನು ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂದರು.
ಚಾಲನಾ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ. ರಾಜು ಯಡಹಳ್ಳಿ. ಸುಭಾಸ ವಂಟಗೋಡಿ. ಭೀಮಶಿ ಪೂಜೇರಿ. ಪ್ರಾ.ಆ.ಕೇ ಡಾ. ಬಸವರಾಜ ಹೊರಟ್ಟಿ. ತಮ್ಮಣ್ಣಾ ದೇವರ. ಸತೀಶ ವಂಟಗೋಡಿ. ಶ್ರೀಪತಿ ಗಣಿ. ವೆಂಕಣ್ಣಾ ಚನ್ನಾಳ. ಅಶೋಕ ಪೂಜೇರಿ. ಪ್ರಶಾಂತ ವಂಟಗೋಡಿ. ಹಣಮಂತ ಚನ್ನಾಳ. ಮುದಕಪ್ಪಾ ನಾಯಿಕ. ಶಂಕರ ಹಾದಿಮನಿ. ವಿಜಯ ಜಡ್ಲಿ. ಸದಾಶಿವ ಗುಡಗುಡಿ, ಸೋಮಲಿಂಗ ಮಿಕಲಿ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿ ಆಶಾ ಕಾರ್ಯಕತ್ರರು. ಗ್ರಾಮ ಮುಖಂಡರು ಇದ್ದರು.