Breaking News
Home / 2022 / ಡಿಸೆಂಬರ್ (page 3)

Monthly Archives: ಡಿಸೆಂಬರ್ 2022

ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ – ಸರ್ವೋತ್ತಮ ಜಾರಕಿಹೊಳಿ

ಮೂಡಲಗಿ: ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ತಾಲೂಕಾ ಪಂಚಾಯತ್ ಮೂಡಲಗಿ ಗ್ರಾಮ ಪಂಚಾಯತ ವಡೇರಹಟ್ಟಿ, ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘ ವಡೇರಹಟ್ಟಿ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ …

Read More »

ಹೆಸ್ಕಾಂ ಜಾಗೃತಿ ಸಭೆ

 ಹೆಸ್ಕಾಂ ಜಾಗೃತಿ ಸಭೆ ಮೂಡಲಗಿ: ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್‍ಇಡಿ ಬಳಕೆಯ ಪ್ರಯೋಜನಗಳು, ಕೇಂದ್ರ ಸರಕಾರದ ಸೌರ ಚಾವಣಿ ಯೋಜನೆ ಹಂತ-2, ಪ್ರಧಾನ ಮಂತ್ರಿ ಕಿಸಾನ ಉರ್ಜಾ ಸುರಕ್ಷಾ ಉತ್ಥಾನ ಮಹಾಭಿಯಾನ (ಪಿಎಂ ಕುಸುಮ) ಇವಿ ಚಾರ್ಜಿಂಗ ಸೆಂಟರ್ ಇತ್ಯಾದಿಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮೂಡಲಗಿ ಹೆಸ್ಕಾಂ ಉಪ ವಿಭಾಗದ ವತಿಯಿಂದ ವಿವಿಧ ಗ್ರಾಮಗಳಲ್ಲಿ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಡಿ.19 ರಂದು ಮೂಡಲಗಿ-2 ಗುಜನಟ್ಟಿಯಲ್ಲಿ …

Read More »

ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಂದೆಂದಿಗೂ ಬೆಳಗಾವಿ ನಮ್ಮದೇ : ಶಾಸಕ ಬಾಲಚಂದ್ರ ಜಾರಕಿಹೊಳಿ

ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಂದೆಂದಿಗೂ ಬೆಳಗಾವಿ ನಮ್ಮದೇ : ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಟಗೇರಿಯಲ್ಲಿ ಜರುಗಿದ ಗೋಕಾಕ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೆರವಣಿಗೆ ಜಾಥಾಕ್ಕೆ ಚಾಲನೆ ನೀಡಿದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಗೋಕಾಕ(ಡಾ.ಬೆಟಗೇರಿ ಕೃಷ್ಣಶರ್ಮ ವೇದಿಕೆ, ಬೆಟಗೇರಿ) : ಬೆಳಗಾವಿ ಎಂದೆಂದಿಗೂ ನಮ್ಮದೇ. ಗಡಿ ವಿವಾದ ಮುಗಿದ ಅಧ್ಯಾಯ. ಗಡಿ ವಿಷಯದಲ್ಲಿ ಪ್ರತಿ ಚುನಾವಣೆ ಬಂದಾಗೊಮ್ಮೆ …

Read More »

ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ವಿಶಿಷ್ಟ ಉತ್ಪನ್ನಗಳು

ಮೂಡಲಗಿ: ಕೇಂದ್ರೀಯ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್  ಎಂಟರ್‍ಪ್ರೈಸಸ್ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ವಿಶಿಷ್ಟ ಉತ್ಪನ್ನಗಳನ್ನು ಅನುಮೋದಿಸಲಾಗಿದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ ಸಚಿವ ಪಶುಪತಿ ಕುಮಾರ ಪರಸ ಅವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಹೇಳಿದರು. ರಾಜ್ಯ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‍ಪ್ರೈಸಸ್ …

Read More »

ತೊಂಡಿಕಟ್ಟಿ ಶಾಲೆಗೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ

ರಾಮದುರ್ಗ: ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಮಾರ್ಪಡಿಸುವಂತೆ ಮತ್ತು ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಶಾಲೆಯ ಮುಖ್ಯ ಶಿಕ್ಷಕ ಎಂ.ಎ.ಬನ್ನೂರ ಅವರು ಮನವಿ ಸಲ್ಲಿಸಿದರು. ಶುಕ್ರವಾರದಂದು ತೊಂಡಿಕಟ್ಟಿ ಶಾಲಾ ಆವರಣದಲ್ಲಿ ಜರುಗಿದ ರಾಕೇಶ ಚಿಕ್ಕೂರ ಅವರ ಮಧುವೆಗೆ ಆಗಮಿಸದ ಸಚಿವ ಗೋವಿಂದ ಕಾರಜೋಳ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತೊಂಡಿಕಟ್ಟಿ …

Read More »

ಸ್ಕೌಟ್ಸ್‍ವು ಮಕ್ಕಳಲ್ಲಿ ಶಿಸ್ತು, ಸಂಯಮತೆ, ಸೌಹಾರ್ದತೆ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವುದರೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತದೆ- ಗಜಾನನ ಮನ್ನಿಕೇರಿ

ಸ್ಕೌಟ್ಸ್‍ವು ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಮೂಡಲಗಿ: ‘ಸ್ಕೌಟ್ಸ್‍ವು ಮಕ್ಕಳಲ್ಲಿ ಶಿಸ್ತು, ಸಂಯಮತೆ, ಸೌಹಾರ್ದತೆ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವುದರೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತದೆ” ಎಂದು ಧಾರವಾಡ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಪರ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು. ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್‍ಎಸ್‍ಆರ್ ಪ್ರೌಢ ಶಾಲೆಯಲ್ಲಿ ಸೋಮವಾರ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಮತ್ತು ವಿವಿಧ ವಿಭಾಗಗಳ ಸ್ಕೌಟ್ಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ …

Read More »

ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ 29 ನೇ ವರ್ಷದ ಮಹಾಪೂಜೆ

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ 29ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆಯ ಉತ್ಸವದ ಮೆರವಣಿಗೆಗೆ ಸೋಮವಾರ ಯಲ್ಲದೇವಸ್ಥಾನದ ಹತ್ತಿರ ಅಯ್ಯಪ್ಪ ಸ್ವಾಮಿ ಸನ್ನಿಧಾನ ಮುಂದೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಪಟ್ಟಣದ ಅಯ್ಯಪ್ಪ ಸನ್ನಿಧಾನದ ರವಿ ಗುರುಸ್ವಾಮಿ, ಬೈಂದೂರದ ರಾಜು ಶೆಟ್ಟಿ ಗುರುಸ್ವಾಮಿ, ಹುಬ್ಬಳಿಯ ಮೋಹನ ಗುರುಸ್ವಾಮಿ, ಬೆಳಗಾವಿಯ ಮಾರುತಿ ಗುರುಸ್ವಾಮಿ ಮತ್ತಿತರರು ಸೇರಿದಂತೆ ಆನೆಯ ಅಂಬಾರಿಗೆ ಪುಷ್ರ್ಪಾಚನೆ …

Read More »

ಹನುಮಂತ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀ

ಹನುಮಂತ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀ ಬೆಟಗೇರಿ:ಮನುಷ್ಯನ ಮನಸ್ಸು ಸದಾ ಪರಿಶುದ್ದವಾಗಿದ್ದರೆ ಆತನ ಮನೆ-ಮನ ನಿತ್ಯ ನಂದಾದೀಪದಂತೆ ಬೆಳಗುತ್ತಿರುತ್ತದೆ. ಹನುಮಂತ ದೇವರು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವನಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹನುಮಂತ ದೇವರ ದೇವಾಲಯದಲ್ಲಿ ಶನಿವಾರ ಡಿ.10 ರಂದು ನಡೆದ ಕಾರ್ತಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಅವರು ದೀಪ …

Read More »

*ಡಿ.12ರಂದು ಮೂಡಲಗಿಯಲ್ಲಿ ೨೯ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ*

 *ಡಿ.12 ರಂದು ಮೂಡಲಗಿಯಲ್ಲಿ ೨೯ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ* ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ೨೯ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಸೋಮವಾರ ಡಿ.೧೨ ರಂದು ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ. ಸೋಮವಾರ ಮಧ್ಯಾಹ್ನ ೨ ಘಂಟೆಯಿಂದ ಶ್ರೀ ಶಿವಬೋಧರಂಗ ಮಠದ ರಸ್ತೆಯ ಯಲ್ಲಮ್ಮದೇವಿ ದೇವಸ್ಥಾನದ …

Read More »

ಹಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ಕಲಿಕಾ ಹಬ್ಬ

ಮೂಡಲಗಿ : ಮಕ್ಕಳ ಕಲಿಕೆ ಮೇಲೆ ಕರೊನಾ ಮಹಾಮಾರಿಯಿಂದ ದುಷ್ಪಪರಿಣಾಮ ಉಂಟಾಗಿತ್ತು. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನೂತನ ಶೈಲಿಯಲ್ಲಿ ರೂಪಿಸುತ್ತಾ ಬಂದಿದೆ. ಸದ್ಯ ಕಲಿಕಾ ಹಬ್ಬ ಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆ ಸಹಾಯಕವಾಗುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಂಡಿದೆ ಎಂದು ಬಿಇಓ ಅಜೀತ ಮನ್ನಿಕೇರಿ ಹೇಳಿದರು. ಶನಿವಾರದಂದು ತಾಲೂಕಿನ ಹಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ …

Read More »