Breaking News
Home / Recent Posts / ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ 29 ನೇ ವರ್ಷದ ಮಹಾಪೂಜೆ

ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ 29 ನೇ ವರ್ಷದ ಮಹಾಪೂಜೆ

Spread the love

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ 29ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆಯ ಉತ್ಸವದ ಮೆರವಣಿಗೆಗೆ ಸೋಮವಾರ ಯಲ್ಲದೇವಸ್ಥಾನದ ಹತ್ತಿರ ಅಯ್ಯಪ್ಪ ಸ್ವಾಮಿ ಸನ್ನಿಧಾನ ಮುಂದೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಪಟ್ಟಣದ ಅಯ್ಯಪ್ಪ ಸನ್ನಿಧಾನದ ರವಿ ಗುರುಸ್ವಾಮಿ, ಬೈಂದೂರದ ರಾಜು ಶೆಟ್ಟಿ ಗುರುಸ್ವಾಮಿ, ಹುಬ್ಬಳಿಯ ಮೋಹನ ಗುರುಸ್ವಾಮಿ, ಬೆಳಗಾವಿಯ ಮಾರುತಿ ಗುರುಸ್ವಾಮಿ ಮತ್ತಿತರರು ಸೇರಿದಂತೆ ಆನೆಯ ಅಂಬಾರಿಗೆ ಪುಷ್ರ್ಪಾಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯ ಜಂಬೂ ಸವಾರಿಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡ ನಾಡು-ನುಡಿ ಸಂಸ್ಕøತಿ ಅನಾವರಣಗೊಳಿಸುವ ಕಲಾತಂಡಗಳು, ಒಂಟೆ ಕುರುರೆ ಮೇರವಣಿಗೆ, ಝಾಂಜಪಥಕ, ಸಾರವಾಡ ಗೊಂಬೆಗಳ ಕುಣಿತ ವಿವಿಧ ವಾದ್ಯ ಮೇಳೆ, ಅಯ್ಯಪ್ಪ ಕನ್ನಿ ಸ್ವಾಮಿಗಳ ಕುಂಭಮೇಳದೊಂದಿಗೆ ಅಯ್ಯಪ್ಪ ಸ್ವಾಮಿಯ ವೈಭವದ ಉತ್ಸವಕಕ್ಕೆ ಮೆರಗು ನೀಡಿದವು. ಮೆರವಣಿಗೆಯು ಪಟ್ಟಣದ ಶ್ರೀ ಶಿವಬೋಧರಂಗ ಮಠ, ಯಲ್ಲಪ್ಪ ದೇವಸ್ಥಾನ, ಸಂಗಪ್ಪನ ವೃತ್ತ, ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೇಮ್ಮಾದೇವಿ ವೃತ್ತಗಳ ಮಾರ್ಗವಾಗಿ ಬಸವೇಶ್ವರ ವೃತ್ತದ ಹತ್ತಿರದ ಬಸವ ಮಂಟಪದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಧಾನಕ್ಕೆ ತಲುಪಿತ್ತು.
ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿಉ ಜೂಂಬೂ ಸವಾರಿ ವಿಕ್ಷಣೆಗೆ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಪಟ್ಟಣದ ಜನರು ತಂಡೋಪ ತಂಡವಾಗಿ ಆಗಮಿಸಿ ಜಂಬೂ ಸವಾರಿ ವೀಕ್ಷಿಸಿದರು. ಮಂಜುನಾಥ ಸೈನಿಕ ತರಬೇತಿ, ಕರುನಾಡು ಸೈನಿಕ ಕೇಂದ್ರ ಶಿಬಿರಾಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆ ಸುಗಮವಾಗಿ ಸಾಗಲು ಮತ್ತು ಅನ್ನ ಸಂತರ್ಪಣೆಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ