Breaking News

Daily Archives: ಆಗಷ್ಟ್ 30, 2024

ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ: ಡಿವೈಎಸ್‍ಪಿ ಡಿ.ಎಚ್.ಮುಲ್ಲಾ

  ಬೆಟಗೇರಿ:ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವದರಿಂದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸ್ಥಳೀಯ ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಗೋಕಾಕ ಡಿವೈಎಸ್‍ಪಿ ಡಿ.ಎಚ್.ಮುಲ್ಲಾ ಹೇಳಿದರು. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಮೂಡಲಗಿ ಪೊಲೀಸ್ ಠಾಣೆ ಸಿಪಿಐ ವೃತ್ತ ಕಛೇರಿ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ …

Read More »

ಶಾಂತಿ, ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಬೇಕು: ಪಿಎಸ್‍ಐ ಬಿ.ಆನಂದ

ಬೆಟಗೇರಿ:ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿಪಾಲನಾ ಸಭೆಯಲ್ಲಿ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಮಾತನಾಡುತ್ತಿರುವದು. ಬೆಟಗೇರಿ:ಗ್ರಾಮದ ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಹೇಳಿದರು. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಆ.30ರಂದು …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎನ್‌ಎಸ್‌ಎಫ್ ಆವರಣದಲ್ಲಿ ಮೂಡಲಗಿ ಪುರಸಭೆಗೆ ನೂತನವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಖುರ್ಷಾದಾ ನದಾಫ ಮತ್ತು ಭೀಮವ್ವ ಪೂಜೇರಿ ಅವರು ಸತ್ಕರಿಸಿ ಗೌರವಿಸಿದರು. ಮೂಡಲಗಿ: ಮೂಡಲಗಿ ಪುರಸಭೆಯ ನೂತನ ಅಧ್ಯಕ್ಷೆಯನ್ನಾಗಿ ಮುಸ್ಲಿಂ ಮಹಿಳೆಗೆ ಅಧಿಕಾರ ನೀಡಲು ಕಾರಣಿಕರ್ತರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ ಸಲ್ಲಿಸಿದರು. ಮೂಡಲಗಿ ಪುರಸಭೆಗೆ ಬುಧವಾರದಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ …

Read More »

‘ಆಧುನಿಕ ಕಾಲಘಟದಲ್ಲಿ ವಚನಾಧ್ಯಯನದ ಅವಶ್ಯವಿದೆ’

ಮೂಡಲಗಿ: ‘ಅಂತರಂಗವನ್ನು ಶುದ್ಧಗೊಳಿಸುವ ವಚನಾಧ್ಯನವನ್ನು ಆಧುನಿಕ ಕಾಲಘಟ್ಟದಲ್ಲಿ ಹೆಚ್ಚು ಪ್ರಚುರಪಡಿಸಬೇಕಾಗಿದೆ’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು. ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್‍ದಿಂದ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿದ್ದ ಡಾ. ಮಹಾದೇವ ಪೋತರಾಜರಿಂದ ರಚಿತವಾದ ಸುವರ್ಣದೀಪ ವಚನ ಸಂಕಲನ ಬಿಡುಗಡೆ ಮತ್ತು ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿದ ಅವರು 12ನೇ ಶತಮಾನದ ಶರಣ ವಚನಗಳಿಂದ ಪ್ರಭಾವಿತರಾಗಿರುವ ಡಾ. ಮಹಾದೇವ …

Read More »