ಅರಳಿಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಮಠದಲ್ಲಿ ಭಜನಾ ಕಾರ್ಯಕ್ರಮ ದಿ.15 ಮತ್ತು 16 ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ರವಿವಾರ ದಿ.15 ರಂದು ರಾತ್ರಿ 8 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭವಾಗುವುದು, ಸೋಮವಾರ ದಿ.16 ರಂದು ಬೆಳಿಗೆ ಶ್ರೀ ಸದಾಶಿವ ಮುತ್ಯಾನ ಕರ್ತೃ ಗದ್ದುಗೆಗೆ ಮತ್ತು ಚಂದ್ರಗಿರಿದೇವಿಗೆ ಅಭಿಷೇಕ …
Read More »Daily Archives: ಸೆಪ್ಟೆಂಬರ್ 14, 2024
ಸಾಂಸ್ಕøತಿಕವಾಗಿ ಬೆಳೆಸುವಲ್ಲಿ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯು ಪ್ರಮುಖ ಪಾತ್ರವಹಿಸುತ್ತದೆ’ – ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ
ಮೂಡಲಗಿಯ ಉಮಾಬಾಯಿ ಪ್ರೌಢ ಶಾಲೆಯ ಆತಿಥ್ಯದಲ್ಲಿ ಶನಿವಾರ ಜರುಗಿದ ವಲಯ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಖುರಶಾದ ನದಾಫ ಹಾಗೂ ಉಪಾಧ್ಯಕ್ಷೆ ಭೀಮವ್ವ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಿದರು. ‘ಪ್ರತಿಭಾ ಕಾರಂಜಿಯು ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸುತ್ತದೆ” ಮೂಡಲಗಿ: ‘ಮಕ್ಕಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಾಂಸ್ಕøತಿಕವಾಗಿ ಬೆಳೆಸುವಲ್ಲಿ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯು ಪ್ರಮುಖ ಪಾತ್ರವಹಿಸುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು. …
Read More »ಶ್ರೀ ಮಹಾಲಕ್ಷ್ಮೀ ಸೊಸೈಟಿಯ 32 ನೇ ವಾರ್ಷಿಕ ಸರ್ವ ಸಾಧಾರಣ ಸಭೆ
ಸಾಲಗಾರರು ಅವಶ್ಯಕತೆ ತಕ್ಕಂತೆ ಸಾಲ ಪಡೆಯಬೇಕು-ಗಾಣಿಗೇರ ಮೂಡಲಗಿ: ಸಹಕಾರ ಸಂಘಗಳು ಬೆಳೆಯಲು ಸಾಲಗಾರರ ಪಾತ್ರ ಬಹಳ ಮುಖ್ಯ, ಸಾಲಗಾರರು ಅವಶ್ಯಕತೆವಿದ್ದಷ್ಟು ಸಾಲ ಪಡೆದು ತಾವೂ ಆರ್ಥಿಕ ಪ್ರಗತಿ ಹೊಂದುವುದರ ಜೊತೆಗೆ ಸೊಸಾಯಟಿಯ ಪ್ರಗತಿಗೆ ಪಾತ್ರರಾಗಬೇಕು ಎಂದು ಮೂಡಲಗಿಯ ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಟಿಯ ಅಧ್ಯಕ್ಷ ಮಲ್ಲಪ್ಪ ಗು.ಗಾಣಿಗೇರ ಹೇಳಿದರು. ಅವರು ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ 32ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ …
Read More »ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಸೇವಾ ಮನೋಭಾವ ಅವಶ್ಯಕ-ಸತೀಶ ಕಡಾಡಿ
ಮೂಡಲಗಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಂಕಲ್ಪ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಈಡೇರಬೇಕಾದರೆ ಸಹಕಾರ ರಂಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದರ ಜೊತೆಗೆ ಬಡವರ, ದೀನದಲಿತರ ಆರ್ಥಿಕ ಅಭ್ಯುದಯ ಮಾಡುವುದರ ಮೂಲಕ ಆರ್ಥಿಕವಾಗಿ ಸಶಕ್ತ ಭಾರತವನ್ನು ನಿರ್ಮಿಸಲು ಸಹಕಾರ ಸಂಸ್ಥೆಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಹಕಾರಿಯ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು. ಶನಿವಾರ ಕಲ್ಲೋಳಿ ಪಟ್ಟಣದ …
Read More »