ಮೂಡಲಗಿ : ಮೂಡಲಗಿ ತಾಲೂಕಿನ ಶಿವಾಪೂರ ಹ ಗ್ರಾಮದ ಶ್ರೀ ಬಸವ ಆಶ್ರಮ ಹೂಲಿಕಟ್ಟಿ-ಶಿವಾಪೂರ ಹ ದಲ್ಲಿ ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮಮದಾಪೂರದ ಶ್ರೀ ಚರಮೂರ್ತೇಶ್ವರ ಮಠದ ಡಾ. ವೇ. ಮೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ವರಗುಣವಾವುದೆಂದರೆ ಉದಾರ. ಪ್ರಪಂಚ ಜೀವನದ ಜೊತೆಗೆ ಪಾರಮಾರ್ಥಿಕ ಚಿಂತನೆ ಅವಶ್ಯಕವಾಗಿದ್ದು ಉದಾರವಾದಿ ಯಾಗಿ ಬದುಕಬೇಕು ಎಂದು ಹೇಳಿದರು. ಸಾನಿಧ್ಯದಲ್ಲಿರುವ ರನ್ನ ತಿಮ್ಮಾಪೂರದ ಶ್ರೋ. ಬ್ರ …
Read More »Daily Archives: ಅಕ್ಟೋಬರ್ 9, 2024
ತಿಗಡಿ, ಅವರಾದಿಗೆ ಪದವಿ ಪೂರ್ವ ಮಹಾವಿದ್ಯಾಲಯ ಮಂಜೂರು ಮಾಡಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ತಿಗಡಿ ಮತ್ತು ಅವರಾದಿ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಿ ಕೇಂದ್ರ ಸರ್ಕಾರ ಮಂಜೂರು ನೀಡಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬುಧವಾರದಂದು ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಈ ಬಾರಿ ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಮೂರು ಹೊಸ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಲಾಗಿದ್ದು, ಅದರಲ್ಲಿ ಮೂಡಲಗಿ ವಲಯದಲ್ಲಿ ಎರಡು ಹೊಸ ಸರ್ಕಾರಿ ಪ್ರೌಢಶಾಲೆಗಳು …
Read More »ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ
ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಉದ್ಘಾಟಿಸಿದರು. ಮೂಡಲಗಿ: ‘ಭಾವನೆಗಳಿಂದ ಹುಟ್ಟಿದ ಕವಿತೆಯನ್ನು ಪದಪುಂಜಗಳ ಮೂಲಕ ಅರ್ಥವತ್ತಾಗಿ ಸೃಜನಾತ್ಮಕವಾಗಿ ಕಟ್ಟಿಕೊಡುವ ಕಲೆಯನ್ನು ಕವಿಯು ಸಿದ್ಧಿಸಿಕೊಳ್ಳಬೇಕು’ ಎಂದು ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ ಹೇಳಿದರು. ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಬಸವ ಆಶ್ರಮದಲ್ಲಿ ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು …
Read More »