ಮೂಡಲಗಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದ 2024- 29ನೇ ಅವಧಿಗೆ ವಿವಿಧ ಇಲಾಖೆಯ ಒಟ್ಟು 24 ಸದಸ್ಯರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ವಡೇರಟ್ಟಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಗುಡಸಿ ಪತ್ರಿಕಾ ಪ್ರಕಣೆಯ ಮೂಲಕ ತಿಳಿಸಿದ್ದಾರೆ. ರಾಜ್ಯ ಚುನಾವಣಾಧಿಕಾರಿಗಳ ಅಧಿಸೂಚನೆ ಅನ್ವಯ ಚುನಾವಣಾ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ತಾಲೂಕು ಶಾಖೆಯ ನಿರ್ದೇಶಕರ ಸ್ಥಾನದ ಚುನಾವಣೆಗಳು 2024ರ …
Read More »Daily Archives: ಅಕ್ಟೋಬರ್ 10, 2024
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜರುಗಿದ, ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆ
ಮೂಡಲಗಿ : ಹೆಣ್ಣು ಮಕ್ಕಳು ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳ ಅಂತಹ ಕೃತ್ಯಗಳ ತಡೆಗಟ್ಟಿ, ಹೆಣ್ಣು ಮಕ್ಕಳು ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಯೊಂದು ಮನೆಯ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಸಸಿಗನ್ನು ನೆಟ್ಟುವಂತಾಗಬೇಕು ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ …
Read More »ಬೆಟಗೇರಿ ಗ್ರಾಪಂಗೆ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಚಂದರಗಿ ಆಯ್ಕೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅ.10ರಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಲಕ್ಷ್ಮಣ ಚಂದರಗಿ ಆಯ್ಕೆಗೊಂಡಿದ್ದಾರೆ. ಒಟ್ಟು 13 ಸದಸ್ಯರ ಬಲ ಹೊಂದಿದ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆದು ಪ್ರತಿಸ್ಪರ್ದಿ ಅಭ್ಯರ್ಥಿಯಾಗಿ ಸದಾಶಿವ ಕುರಿ 6 ಮತಗಳನ್ನು ಪಡೆದು ಪರಾಭವಗೊಂಡರು. ಯಲ್ಲವ್ವ ಲಕ್ಷ್ಮಣ ಚಂದರಗಿ 7 ಮತಗಳನ್ನು ಪಡೆದು ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ ಎಂದು …
Read More »ಅಗಲಿದ ರತನ್ ಟಾಟಾ
ಬೆಳಗಾವಿ- ಭಾರತಾಂಬೆಯ ಹೆಮ್ಮೆಯ ಸುಪುತ್ರ, ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಟಾಟಾ ಅವರು ಅಪ್ಪಟ ರಾಷ್ಟ್ರಭಕ್ತ, ದೂರದೃಷ್ಟಿಯ ನಾಯಕ, ಭಾರತೀಯ ಕೈಗಾರಿಕೆ ಉದ್ಯಮದಲ್ಲಿ ಅಪ್ರತಿಮ ಸಾಧಕರಾಗಿದ್ದರು. ಟಾಟಾ ಅವರು ಕೇವಲ ಉದ್ಯಮಿಯಾಗಿರಲಿಲ್ಲ. ಸಮಗ್ರತೆ, ಅಚಲವಾದ ಬದ್ಧತೆ, ಭಾರತದ ಆತ್ಮವನ್ನು ಸಾಕಾರಗೊಳಿಸಿದ ದಂತಕತೆಯಾಗಿದ್ದರು. ಸಮಾಜದ ಒಳತಿಗಾಗಿ ಶ್ರಮಿಸಿದ ಮಹಾನ್ ಚೇತನ. ಟಾಟಾ …
Read More »