ಪಟ್ಟಣ ಬಸವೇಶ್ವರ ಸೋಸೈಟಿಯ ಸಭಾ ಭವನದಲ್ಲಿ ಪತ್ತಿನ (ಕ್ರೆಡಿಟ್) ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಏರ್ಪಡಿಸಿದ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮತ್ತಿತರರು ಉದ್ಘಾಟಿಸಿದರು. ಮೂಡಲಗಿ: ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಮತ್ತು ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ದಿನಗಳಲ್ಲಿ ಬಹಳ ಜಾಗೃತದಿಂದ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ …
Read More »Yearly Archives: 2024
ಸ.2 ಮತ್ತು3 ರಂದು ಪ್ರವಚನ ಮಂಗಲೋತ್ಸವ
ಸ.2 ಮತ್ತು3 ರಂದು ಪ್ರವಚನ ಮಂಗಲೋತ್ಸವ ಮೂಡಲಗಿ: ತಾಲೂಕಿನ ಅಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ 24 ವರ್ಷಗಳಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸ.2 ಮತ್ತು 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಮಂಡಳಿಯ ಮುರಿಗೆಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ. ಸೋಮವಾರ ಸ.2 ರಂದು ರಾತ್ರಿ 10 ಗಂಟೆಗೆ ಭಜನಾ …
Read More »ಶವಸಂಸ್ಕಾರಕ್ಕೆ ಸಹಾಯ ಧನದ ಚೆಕ್ ವಿತರಣೆ
ಶವಸಂಸ್ಕಾರಕ್ಕೆ ಸಹಾಯ ಧನದ ಚೆಕ್ ವಿತರಣೆ ಕುಲಗೋಡ: ಇತ್ತಿಚ್ಚಿಗೆ ಮರಣ ಹೊಂದಿದ್ದ ಪರಿಶಿಷ್ಟ ಜಾತಿಯ ಯಲ್ಲವ್ವ ಯಲ್ಲಪ್ಪ ಸಮಗಾರ ಇವರು ಬುಧವಾರ ನಿಧನರಾಗಿದ್ದು ಇವರ ಶವ ಸಂಸ್ಕಾರಕ್ಕೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯಿಂದ ಇಂದು ಸಹಾಯಧನ ಚಕ್ ನೀಡಲಾಯಿತು. ನಿಧನರಾದ ಯಲ್ಲವ್ವ ಅವರ ಪುತ್ರ ಕಲ್ಲಪ್ಪÀ್ಪ ಸಮಗಾರ ಅವರಿಗೆ ಸಹಾಯ ಧನದ 5 ಸಾವಿರ ರೂಗಳ ಚೆಕ್‍ನ್ನು ಕುಲಗೋಡ ಗ್ರಾಮ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ದೇವರ ಹಾಗೂ ಗ್ರಾಪಂ …
Read More »ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕ -ರಾಜೇಂದ್ರ ಸಣ್ಣಕ್ಕಿ
ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕ -ರಾಜೇಂದ್ರ ಸಣ್ಣಕ್ಕಿ ಬೆಟಗೇರಿ: ನಾಡಿನ ಭವ್ಯ ಪ್ರತಿಮೆಗಳು ವೀರ ತ್ಯಾಗ ಆದರ್ಶಗಳ ಸಂಕೇತಗಳಾಗಿದ್ದು, ಇಂತಹ ಭವ್ಯ ಶಿಲ್ಪಗಳನ್ನು ತಯಾರಿಸುವಲ್ಲಿ ಹಲವಾರು ಶ್ರಮಜೀವಿಗಳು ಎಲೆಯ ಮರೆಯ ಕಾಯಿಯಂತೆ ದುಡಿದಿರುತ್ತಾರೆ. ಈ ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕವಾಗಿದೆ ಎಂದು ಕೌಜಲಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು. ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಆಶ್ರಯದಲ್ಲಿ …
Read More »ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ: ಡಿವೈಎಸ್‍ಪಿ ಡಿ.ಎಚ್.ಮುಲ್ಲಾ
ಬೆಟಗೇರಿ:ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವದರಿಂದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸ್ಥಳೀಯ ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಗೋಕಾಕ ಡಿವೈಎಸ್‍ಪಿ ಡಿ.ಎಚ್.ಮುಲ್ಲಾ ಹೇಳಿದರು. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಮೂಡಲಗಿ ಪೊಲೀಸ್ ಠಾಣೆ ಸಿಪಿಐ ವೃತ್ತ ಕಛೇರಿ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ …
Read More »ಶಾಂತಿ, ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಬೇಕು: ಪಿಎಸ್‍ಐ ಬಿ.ಆನಂದ
ಬೆಟಗೇರಿ:ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿಪಾಲನಾ ಸಭೆಯಲ್ಲಿ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಮಾತನಾಡುತ್ತಿರುವದು. ಬೆಟಗೇರಿ:ಗ್ರಾಮದ ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಹೇಳಿದರು. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಆ.30ರಂದು …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎನ್‌ಎಸ್‌ಎಫ್ ಆವರಣದಲ್ಲಿ ಮೂಡಲಗಿ ಪುರಸಭೆಗೆ ನೂತನವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಖುರ್ಷಾದಾ ನದಾಫ ಮತ್ತು ಭೀಮವ್ವ ಪೂಜೇರಿ ಅವರು ಸತ್ಕರಿಸಿ ಗೌರವಿಸಿದರು. ಮೂಡಲಗಿ: ಮೂಡಲಗಿ ಪುರಸಭೆಯ ನೂತನ ಅಧ್ಯಕ್ಷೆಯನ್ನಾಗಿ ಮುಸ್ಲಿಂ ಮಹಿಳೆಗೆ ಅಧಿಕಾರ ನೀಡಲು ಕಾರಣಿಕರ್ತರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ ಸಲ್ಲಿಸಿದರು. ಮೂಡಲಗಿ ಪುರಸಭೆಗೆ ಬುಧವಾರದಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ …
Read More »‘ಆಧುನಿಕ ಕಾಲಘಟದಲ್ಲಿ ವಚನಾಧ್ಯಯನದ ಅವಶ್ಯವಿದೆ’
ಮೂಡಲಗಿ: ‘ಅಂತರಂಗವನ್ನು ಶುದ್ಧಗೊಳಿಸುವ ವಚನಾಧ್ಯನವನ್ನು ಆಧುನಿಕ ಕಾಲಘಟ್ಟದಲ್ಲಿ ಹೆಚ್ಚು ಪ್ರಚುರಪಡಿಸಬೇಕಾಗಿದೆ’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು. ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್‍ದಿಂದ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿದ್ದ ಡಾ. ಮಹಾದೇವ ಪೋತರಾಜರಿಂದ ರಚಿತವಾದ ಸುವರ್ಣದೀಪ ವಚನ ಸಂಕಲನ ಬಿಡುಗಡೆ ಮತ್ತು ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿದ ಅವರು 12ನೇ ಶತಮಾನದ ಶರಣ ವಚನಗಳಿಂದ ಪ್ರಭಾವಿತರಾಗಿರುವ ಡಾ. ಮಹಾದೇವ …
Read More »‘ಮಕ್ಕಳು ಒಲಿಂಪಿಕ್ಸ್ ಕ್ರೀಡಾಕೂಟದ ಕನಸು ಕಾಣುವಂತಾಗಬೇಕು’
ಮೂಡಲಗಿ: ‘ಮಕ್ಕಳು ಪಠ್ಯದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಸದೃಢತೆ ಮತ್ತು ದೈಹಿಕ ಸದೃಢತೆಯಿಂದೆ ಬೆಳೆಯುತ್ತಾರೆ’ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ಲೋಕನ್ನವರ ಹೇಳಿದರು. ತಾಲ್ಲೂಕಿನ ಖಾನಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಶಿವಾಪುರ ಸಿಆರ್‍ಸಿ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪ್ರಾಥಮಿಕ ಹಂತದಲ್ಲೆಯೇ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾಗವಹಿಸುವ ಕನಸು ಕಾಣಬೇಕು ಮತ್ತು ಸಾಧನೆಗೆ ಪರಿಶ್ರಮಪಡಬೇಕು ಎಂದರು. ಅತಿಥಿ ಸಾಹಿತಿ, …
Read More »ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರ
ಗೋಕಾಕ: ಬರುವ ಸೆಪ್ಟಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳತನಕ ನಡೆಯುವ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಮ್ಮ ಅರಭಾವಿ ಕ್ಷೇತ್ರದಿಂದಲೇ ಅತೀ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆಯಲು ಅಗತ್ಯವಿರುವ ಸಿದ್ಧತೆಗಳನ್ನು ನಡೆಸುವಂತೆ ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಎನ್‌ಎಸ್‌ಎಫ್ ಕಾರ್ಯಾಲಯದ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರವನ್ನು …
Read More »