Breaking News
Home / 2025 / ಆಗಷ್ಟ್ (page 7)

Monthly Archives: ಆಗಷ್ಟ್ 2025

ವಿಶೇಷ ಅಲಂಕಾರಗೊಂಡ ಬೆಟಗೇರಿ ವೀರಭದ್ರೇಶ್ವರ ದೇವರು

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಆ.9ರಂದು ವೀರಭದ್ರೇಶ್ವರ ದೇವರ ಗದ್ದುಗೆ ವಿವಿಧ ಹೂ ಮಾಲೆಗಳಿಂದ ವಿಶೇಷ ಅಲಂಕಾರಗೊಂಡು ಎಲ್ಲರ ಭಕ್ತರ ಭಕ್ತಿಯ ಕಣ್ಮನ ಸೆಳೆಯಿತು.  

Read More »

‘ರಕ್ಷಾ ಬಂಧನವು ಸೋದರತೆಯನ್ನು ಬಲಪಡಿಸುತ್ತದೆ’- ರೇಖಾ ಅಕ್ಕನವರು

  ಮೂಡಲಗಿ: ‘ರಕ್ಷಾ ಬಂಧನವು ಸೋದರತೆ, ಸೌಹಾರ್ದತೆಯನ್ನು ಬಲಪಡಿಸುವುದು, ಸಂಬಂಧಗಳನ್ನು ಗಟ್ಟಿಗೊಳಿಸುವುದು‘ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ರೇಖಾ ಅಕ್ಕನವರು ಹೇಳಿದರು. ಇಲ್ಲಿಯ ಲಕ್ಷ್ಮೀ ನಗರದ ವಿಸ್ತೀರ್ಣ ಭಾಗದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಕೇಂದ್ರದಲ್ಲಿ ಶನಿವಾರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ಹಬ್ಬ, ಹರಿದಿನಗಳಲ್ಲಿ ಸಂಸ್ಕೃತಿ, ಆಚರಣೆಗಳು ಇದ್ದು, ಇವು ಮಾನವ ಬದುಕಿಗೆ ಶ್ರೇಷ್ಠವಾಗಿವೆ. ಪರಮಾತ್ನನನ್ನು ನಿತ್ಯ ಧ್ಯಾನಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು …

Read More »

ಬೆಟಗೇರಿಯಲ್ಲಿ ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲರ ಮನೆಗಳಲ್ಲಿ ಶನಿವಾರಆ.9ರಂದು ರಕ್ಷಾ ಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಬೆಟಗೇರಿ ಗ್ರಾಮದ ಎಲ್ಲರ ಮನೆ-ಮನಗಳಲ್ಲಿ ಸಂಭ್ರಮದ ವಾತಾರಣ ತುಂಬಿ ತುಳುಕುತ್ತಿತ್ತು. ಗಂಡನ ಮನೆಯಿಂದ ಸಹೋದರಿಯರು ತವರು ಮನೆಗೆ ಖುಷಿ-ಖುಷಿಯಾಗಿ ಬಂದು ತಮ್ಮ ಮನೆಗಳಲ್ಲಿರುವ ಅಣ್ಣ-ತಮ್ಮಂದಿರಿಗೆ ಹಣೆಗೆ ವಿಭೂತಿ, ಕುಂಕುಮದ ತಿಲಕವಿಟ್ಟು, ಆರತಿ ಬೆಳಗಿ, ರಾಖಿ ಕಟ್ಟಿ ಈ ಮಹತ್ವಪೂರ್ಣ ರಕ್ಷಾ ಬಂಧನ ಹಬ್ಬ ಆಚರಿಸಿ ಸಂಭ್ರಮಿಸಿದರು. ಈ ಹಿಂದಿನಿಂದಲೂ ಆಚರಿಸುವ …

Read More »

ಅಧರ್ಮದ ನಾಶಕ್ಕಾಗಿ ವೀರಭದ್ರೇಶ್ವರರು ಅವತರಿಸಿದರು- ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು

ಬೆಟಗೇರಿ:ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು. ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದು ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಇದೇ ಶುಕ್ರವಾರ ಆ.8 ಮತ್ತು ಶನಿವಾರ ಆ.9ರಂದು ನಡೆದ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ …

Read More »

*ಮೂಡಲಗಿ:ಗೆಳೆಯರ ಬಳಗದಿಂದ ಕಂಚಿನ ಪದಕ ವಿಜೇತೆ ಲಕ್ಷ್ಮೀ ರಡರಟ್ಟಿ ಗೆ ಸನ್ಮಾನ*

ಮೂಡಲಗಿ : ಮಲೇಷಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯಿನಷಿಪ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಡಿರುವ ಕು. ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಅವರಿಗೆ ಮೂಡಲಗಿ ಗೆಳೆಯರ ಬಳಗದಿಂದ ಸತ್ಕರಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಪತ್ರಕರ್ತ ಈಶ್ವರ ಢವಳೇಶ್ವರ, ಮಂಜುನಾಥ ರೇಳೆಕರ, ಅಜ್ಜಪ್ಪ ಅಂಗಡಿ, ಮಲ್ಲಿಕಾರ್ಜುನ ನಿಡಸೋಸಿ, ಮಲೀಕ ಪಾಶ್ಛಾಪೂರ, ಅನೀಲ ಮುಧೋಳ ಹಾಗೂ ಲಕ್ಷ್ಮೀ ಪಾಲಕರು ಇದ್ದರು.

Read More »

ಪದಕ ಪಡೆದ ಲಕ್ಷ್ಮೀ ರಡರಟ್ಟಿ ಹಾಗೂ ಬಾಗಲಕೋಟೆ ಜಿಲ್ಲೆಗೆ ಡಿಡಿಪಿಐ ಆಗಿ ಬಡ್ತಿಯಾದ ಅಜೀತ ಮನ್ನಿಕೇರಿ ಅವರಿಗೆ ಸತ್ಕಾರ

ಮೂಡಲಗಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಎಜ್ಯುಕೇಶನ್ ಮತ್ತು ಸೋಶಿಯಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಲಕ್ಷ್ಮೀ ರಡರಟ್ಟಿ ಹಾಗೂ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಪಾರವಾದ ಸೇವೆ ಸಲ್ಲಿಸಿ ಬಾಗಲಕೋಟೆ ಜಿಲ್ಲೆಗೆ ಡಿಡಿಪಿಐ ಆಗಿ ಬಡ್ತಿ ಹೊಂದಿ ವರ್ಗಾವಣೆ ಆಗಿರುವ ಅಜೀತ ಮನ್ನಿಕೇರಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕಮಿಟಿ ಅಧ್ಯಕ್ಷ ಮಲೀಕ ಹುಣಶಾಳ ಅವರು ಮಾತನಾಡಿ, ಈ …

Read More »

ಉದ್ಯೋಗ ಅವಕಾಶಗಳನ್ನು ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು- ರವಿ ಕಟಗೇರಿ

ಮೂಡಲಗಿ : ಪದವಿ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶಗಳು ಹೆಮ್ಮರವಾಗಿದ್ದು ಅನೇಕ ಇಲಾಖೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದು ಸರಿಯಾದ ಮಾರ್ಗದರ್ಶನ ಪಡೆದುಕೊಂಡು ವಿವಿಧ ಇಲಾಖೆಗೆ ಸೇರಿಕೊಳ್ಳಲು ಪೂರ್ವ ತಯಾರಿಯನ್ನು ಪದವಿ ಹಂತದ ಅಧ್ಯಯನದ ಜೊತೆಗೆ ಪ್ರಯತ್ನಿಸಬೇಕೆಂದು ಮೂಡಲಗಿಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರವಿ ಕಟಗೇರಿ ಹೇಳಿದರು. ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ & ವಿಜ್ಞಾನ ಪದವಿ …

Read More »

ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೂಡಲಗಿ: ಪಟ್ಟಣದ ಎಪಿಎಂಸಿ ರಸ್ತೆಯಲ್ಲಿರು ವೆಂಕಟೇಶ ಕ್ಲಿನಿಕ್ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದ ನಿಮಿತ್ಯ ಶನಿವಾರ ಆ.9 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮುಂಜಾನೆ 11 ರಿಂದ ಸಂಜೆ 4 ಗಂಟೆವರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಸ್.ಎಸ್.ದಂಡಪ್ಪನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆ.9 ರಂದು ಮುಂಜಾನೆ 10 ಗಂಟೆಗೆ ಶ್ರೀ ಮಹಾಲಕ್ಷ್ಮೀ ಶ್ರೀ ಮಹಾಸರಸ್ವತಿ ಹಾಗೂ ಧನ್ವಂತರಿ ಪೂಜೆಯೊಂದಿಗೆ ನೆರವೇರುವುದು. ದಿವ್ಯ ಸಾನ್ನಿಧ್ಯವನ್ನು ಶ್ರೀ ದತ್ತಾತ್ರೆಯಬೋಧ ಸ್ವಾಮೀಜಿ ವಹಿಸುವರು, ಜಮಖಂಡಿಯ ಚಿಕ್ಕಮಕ್ಕಳ …

Read More »

ಮಲೇಷಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯಿನಷಿಪ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಡಿರುವ ಕು. ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಇತಳಿಗೆ ಸತ್ಕಾರ

ಮೂಡಲಗಿ : ಮಲೇಷಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯಿನಷಿಪ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಡಿರುವ ಕು. ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಇತಳನ್ನು ಪಟ್ಟಣದ ಕಾಶೀಮಲಿ ಅರ್ಬನ್ ಸೊಸೈಟಿಯಿಂದ ಸತ್ಕರಿಸಿದರು. ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ ಹಾಗೂ ಸೊಸೈಟಿ ಅಧ್ಯಕ್ಷ ಅನ್ವರ ನದಾಫ, ಇಸಾಕ ನದಾಫ. ಎಮ್.ಎ.ನದಾಫ, ಮಲೀಕಜಾನ ನದಾಫ, ಮಹ್ಮದಇರ್ಪಾನ್ ನದಾಫ, ರಾಜೇಂದ್ರ ಸಣ್ಣಕ್ಕಿ, ಮಲ್ಲಪ್ಪ ರಡರಟ್ಟಿ ಮೀರಾಸಾಬ ನದಾಫ ಉಪಸ್ಥಿತರಿದ್ದರು.

Read More »

ಖಂಡ್ರಟ್ಟಿ, ತುಕ್ಕಾನಟ್ಟಿ ಮತ್ತು ಹಳ್ಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು 8 ನೇ ವರ್ಗದಿಂದ 9 ನೇ ವರ್ಗದವರೆಗೆ ಪ್ರೌಢಶಾಲೆಗಳನ್ನಾಗಿ ಉನ್ನತೀಕರಣಗೊಳಿಸಿ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ – ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಖಂಡ್ರಟ್ಟಿ, ತುಕ್ಕಾನಟ್ಟಿ ಮತ್ತು ಹಳ್ಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು 8 ನೇ ವರ್ಗದಿಂದ 9 ನೇ ವರ್ಗದವರೆಗೆ ಪ್ರೌಢಶಾಲೆಗಳನ್ನಾಗಿ ಉನ್ನತೀಕರಣಗೊಳಿಸಿ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಈ ಮೂರು ಶಾಲೆಗಳು ಪ್ರೌಢಶಾಲೆಗಳಾಗಿ ಪರಿವರ್ತನೆಗೊಂಡಿವೆ ಎಂದವರು ಹೇಳಿದರು. ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೆರಿರುವ ಖಂಡ್ರಟ್ಟಿ, ತುಕ್ಕಾನಟ್ಟಿ, ಹಳ್ಳೂರ ಶಾಲೆಗಳ ಮೂರು ವರ್ಷಗಳ …

Read More »