Breaking News
Home / ಬೆಳಗಾವಿ / 1.14 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

1.14 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

Spread the love

1.14 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮೂಡಲಗಿ ಪಟ್ಟಣದ ಪೋಲಿಸ್ ಠಾಣೆ ಹತ್ತಿರದಿಂದ ಎಸ್‍ಎಸ್‍ಆರ್ ಕಾಲೇಜ ವರೆಗಿನ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ಖುರಶಾದ ಅನ್ವರ ನದಾಫ ಅವರು ಭೂಮಿ ಪೂಜೆ ನೇರವೆರಿಸಿ ಚಾಲನೆ ನೀಡಿದರು.
ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿ ಮೇರೆಗೆ ಪುರಸಭೆಯ ವಿವಿಧ ಯೋಜನೆ ಅಡ್ಡಿಯಲಿ 1.14 ಕೋಟಿ ರೂ ಅನುದಾನದಲ್ಲಿ ಮೂಡಲಗಿ ಪಟ್ಟಣದ ಪೋಲಿಸ್ ಠಾಣೆ ಹತ್ತಿರದಿಂದ ಎಸ್‍ಎಸ್‍ಆರ್ ಕಾಲೇಜ ವರೆಗಿನ ರಸ್ತೆ ಡಾಂಬರೀಕರಣ ಮತ್ತು ಎಸ್‍ಎಸ್‍ಆರ್ ಕಾಲೇಜ ದಿಂದ ಗೋಕಾಕ ಕ್ರಾಸ್ ವರೆಗೆ ಗುಂಡಿ ಮುಚ್ಚುವ (ಪ್ಯಾಚ್‍ವರ್ಕ) ಕಾಮಗಾರಿ ಮಾಡಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಸಿ.ಪಿ.ಯಕ್ಷಂಬಿ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ರವಿ ಸಣ್ಣಕ್ಕಿ, ಹನುಮಂತ ಗುಡ್ಲಮನಿ, ಗಫಾರ ಡಾಂಗೆ, ಆನಂದ ಟಪಾಲ, ರವಿ ಮೂಡಲಗಿ, ಸಲೀಂ ಇನಾಮದಾರ, ವೀರುಪಾಕ್ಷ ಮೂಗಳಖೋಡ, ಲಕ್ಕಪ್ಪ ಶಾಬನ್ನವರ, ಅಭಿಯಂತರ ಬಿ.ಬಿ.ಪಟಾಣ, ಮುಖಂಡರಾದ ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ, ಪ್ರಕಾಶ ಮುಗಳಖೋಡ, ಬಸು ಝಂಡೇಕುರಬರ, ಮತ್ತಿತರರು ಇದ್ದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ