ಮೂಡಲಗಿ : ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ನಾಗಮಂಗಲ ಹರ್ಷ ಇಂಟರನಿಷನಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡದ ಮಾತೃಭೂಮಿ 30 ನೇ ವಾರ್ಷಿಕೋತ್ಸವದ ಸಾಧಕರ ಸಂಭ್ರಮ ಸಮಾವೇಶದಲ್ಲಿ ಸಂಘಟನೆಯ ಸರದಾರ ಸಿದ್ದಣ್ಣ ದುರದುಂಡಿ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌದರಿ, ಸಂಸ್ಥಾಪಕರಾದ ಡಾ. ಎಸ್ ಬಾಲಾಜಿ, …
Read More »Daily Archives: ಸೆಪ್ಟೆಂಬರ್ 16, 2025
*ನಿಡಸೋಸಿಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಪ್ರಚಾರಾರ್ಥ ಸಭೆ*
ಸಂಕೇಶ್ವರ: ದಿ. ಅಪ್ಪಣ್ಣಗೌಡ ಪಾಟೀಲರ ಪೆನೆಲ್ ಬೆಂಬಲಿಸಿ ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಹಕಾರಿ ಸಂಘವು ಅಭಿವೃದ್ಧಿ ಪಥದತ್ತ ಸಾಗುವುದಲ್ಲದೇ ಗ್ರಾಹಕರಿಗೆ ಉತ್ತಮ ದರ್ಜೆಯ ಸೇವೆಯನ್ನು ನೀಡಲಿಕ್ಕೆ ನಾವೆಲ್ಲರೂ ಬದ್ಧತೆಯಿಂದ ಕಾರ್ಯವನ್ನು ಮಾಡುತ್ತೇವೆ ಎಂದು ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಭರವಸೆಯನ್ನು ನೀಡಿದರು. ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದಲ್ಲಿ ಸೋಮವಾರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ತವಾಗಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, …
Read More »ಓಝೋನ್ ಪದರು ಪ್ರಕೃತಿಯ ಜೀವ ರಕ್ಷಕ ಪ್ರಾಧ್ಯಾಪಕ ಆರ್ ಎಸ್ ಗೌರಿ
ಮೂಡಲಗಿ : ಓಜೋನ್ ಪದರವು ಪ್ರಕೃತಿಯಲ್ಲಿರುವ ಜೀವ ರಕ್ಷಕವಾಗಿದ್ದು ಮಾನವನ ಜೀವನದ ಸಕಲ ಕಾರ್ಯದ ಮೇಲೆ ಓಜೋನ್ ಪದರಿನ ಪಾತ್ರಬಹುಮುಖ್ಯವಾಗಿದ್ದು ಇಂದು ಓಜೋನ್ ಪದರಿನ ನಾಶಕ್ಕೆ ಮಾನವನ ಸ್ವಾರ್ಥ ಕಾರಣವಾಗಿರುತ್ತದೆ ತಂಪು ಪಾನಿಗಳನ್ನು ತಯಾರಿಸಿಕೊಳ್ಳಲು ಬಳಸುವ ಫ್ರಿಡ್ಜ್ ಬೃಹತ್ ಕೈಗಾರಿಕೆಗಳು ಹಾಗೂ ಕಾರುಗಳಲ್ಲಿ ಬಳಸುವ ಎಸಿ ಗಳಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ಅಂಶಗಳು ಓಝೋನ ನಾಶಕ್ಕೆ ಕಾರಣವಾಗಿದ್ದು ನಾವೆಲ್ಲರೂ ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಅಥಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ …
Read More »‘ಬಸವೇಶ್ವರ ಕೋ.ಅಪ್ ಕ್ರೆಡಿಟ್ ಸೊಸೈಟಿಗೆ ರೂ.5.05 ಕೋಟಿ ಲಾಭ’- ಮಲ್ಲಿಕಾರ್ಜುನ ಢವಳೇಶ್ವರ
ಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೊಸಾಯಿಟಿಯು 2024-25 ಆರ್ಥಿಕ ವರ್ಷದ ಕೊನೆಯಲ್ಲಿ ರೂ.5.05 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸಾಯಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಹೇಳಿದರು. ಇಲ್ಲಿಯ ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯ 30ನೇ ವರ್ಷದ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸೊಸೈಟಿಯು ರೂ.6.41 ಕೋಟಿ ಶೇರು ಬಂಡವಾಳ, ರೂ.240.38 ಕೋಟಿ ಠೇವುಗಳು, ರೂ.23.40 ಕೋಟಿ ನಿಧಿಗಳು, ರೂ.71.79 ಕೋಟಿ …
Read More »ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ (ಹುಕ್ಕೇರಿ): ನಾನಾಗಲೀ, ನನ್ನ ಕುಟುಂಬವಾಗಲಿ. ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಜನರ ಪ್ರೀತಿ, ಆಶೀರ್ವಾದದಿಂದ ನಾವು ಒಂದೇ ಕುಟುಂಬದಲ್ಲಿ ಬೇರೇ ಬೇರೇ ಕ್ಷೇತ್ರಗಳಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಜನರಿಂದ ಆಯ್ಕೆಯಾಗಿದ್ದೇವೆ. ವಿರೋಧಿಗಳ ಆರೋಪದಲ್ಲಿ ಯಾವುದೇ ನಿಜಾಂಶವಿಲ್ಲ ಎಂದು ಅರಭಾವಿ ಶಾಸಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು. ಹುಕ್ಕೇರಿ ತಾಲೂಕಿನ ಎಲೆಮುನೋಳಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ …
Read More »
IN MUDALGI Latest Kannada News