Breaking News
Home / Recent Posts / ಅಧ್ಯಕ್ಷರಾಗಿ ಮಾಯನ್ನವರ, ಉಪಾಧ್ಯಕ್ಷರಾಗಿ ವ್ಯಾಪಾರಿ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ಮಾಯನ್ನವರ, ಉಪಾಧ್ಯಕ್ಷರಾಗಿ ವ್ಯಾಪಾರಿ ಅವಿರೋಧ ಆಯ್ಕೆ

Spread the love

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾಗಿ ಲಕ್ಕಪ್ಪ ಭೀ.ಮಾಯನ್ನವರ ಮತ್ತು ಉಪಾಧ್ಯಕ್ಷರಾಗಿ ಬಸಪ್ಪ ಶಿ.ವ್ಯಾಪಾರಿ ಅವಿರೋಧ ಆಯ್ಕೆಗೊಂಡರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಘದ ಆಡಳಿತ ಮಂಡಳಿ ಮತ್ತು ಸಮಾಜ ಹಿರಿಯರು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಬಸಪ್ಪ ಯಾದಗೂಡ ಪಿಕೆಪಿಎಸ್ ಸದಸ್ಯ ಸಿದ್ದಪ್ಪ ವ್ಯಾಪಾರಿ, ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ, ತಾ.ಪಂ ಮಾಜಿ ಅಧ್ಯಕ್ಷ ಉಮೇಶ ಬೂದಿಹಾಳ, ಸಂಘದ ಸದಸ್ಯರಾದ ಲಗಮಪ್ಪ ಬೆಳಕೂಡ, ಬೀರಪ್ಪ ಉದ್ದನ್ನವರ, ವಿಠ್ಠಲ ಕಟ್ಟಿಕಾರ, ಕಲ್ಲಪ್ಪ ಮಾಯನ್ನವರ, ಗುರುಸಿದ್ದ ಜಾಲರ, ಬೀಮಪ್ಪ ಪುಲಗಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ಪುಲಗಡ್ಡಿ ಹಾಗೂ ಸಮಾಜದ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ

Spread the loveಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ ಬೆಟಗೇರಿ:ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಸಮಗ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ