ಬ್ಯಾಂಕ್ ನೌಕರರು ಮತ್ತೆ ಎರಡನೇ ಹಂತದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹಾಗಾಗಿ ಪುನಃ ಮೂರು ದಿನ ಬ್ಯಾಂಕ್ ಸೇವೆ ಇರುವುದಿಲ್ಲ. ಬ್ಯಾಂಕ್ ನೌಕರರ ಸಂಘಟನೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದಾದ್ಯಂತ ಮುಷ್ಕರ ನಡೆಸಲು ಸಜ್ಜಾಗಿದೆ. ಎಐಬಿಇಎ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಟಿ, ಐಎನ್ಬಿಇಎಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯು ಮತ್ತು ಎನ್ಒಬಿಒ ಒಳಗೊಂಡ ಬ್ಯಾಂಕ್ ಯೂನಿಯನ್ ವಿವಿಧ ಹಂತಗಳಲ್ಲಿ ಮುಷ್ಕರಕ್ಕೆ ನಿರ್ಧಾರ ಮಾಡಿದೆ.
ಮಾರ್ಚ್ 11, 12,13ರಂದು ಮೂರು ದಿನಗಳ ಮುಷ್ಕರ ಕೈಗೊಳ್ಳಲಿದ್ದು, ಏಪ್ರಿಲ್ 1 ರಿಂದ ಅನಿರ್ದಿಷ್ಟವಧಿ ಮುಷ್ಕರಕ್ಕೆ ಕರೆ ಕೈಗೊಳ್ಳಲು ನಿರ್ಧರಿಸಿವೆ. ವೇತನ ಪಟ್ಟಿಯ ಅಂಶಗಳ ಮೇಲೆ ಶೇ. 20 ರಷ್ಟು ಹೆಚ್ಚಳ ಮಾಡಬೇಕು, 5 ದಿನಗಳ ಬ್ಯಾಂಕಿಂಗ್ ಸೇವೆ ನೀಡಬೇಕು, ಪಿಂಚಣಿ ಪರಿಷ್ಕರಣೆ, ಕುಂಟುಂಬ ಪಿಂಚಣಿಯಲ್ಲಿ ಹೆಚ್ಚಳ, ಅಧಿಕಾರಿಗಳ ಕೆಲಸದ ನಿಗದಿತ ಅವಧಿ ನೀಡಬೇಕು ಸೇರಿದಂತೆ ವಿವಿಧ 12 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಿವೆ
ವರದಿ ಈಶ್ವರ ಢವಳೇಶ್ವರ