ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ
‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ ಅಸಂಖ್ಯಾತ ಸಿದ್ಧಸಾಧಕರು ರಸಋಷಿಗಳು ಅಜ್ಞಾತರಾಗಿಯೇ ಉಳಿದಿದ್ದಾರೆ. ಅಪರಂಜಿಗಿಂತ ರೋಲ್ಡ್‌ಗೋಲ್ಡ್‌ಗಳಿಗೇ ಜಾಸ್ತಿ ಹೊಳಪು. ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ. ಅಜ್ಞಾನಿಗಳಿಗೆ ಹಿರಿತನದ ಬಲವು (ಕೈವಲ್ಯ) ಈ ನಾಡಿನಲ್ಲಿ ಅಗಣಿತ ಕವಿಗಾಯಕ, ರಂಗಕಲಾವಿದರು, ಸಿದ್ಧ ಶಿವಯೋಗಿಗಳನ್ನು ಕಂಡಿದ್ದೇನೆ. ಹಿಂದಿನ ದಿಗ್ಗಜರು ಕಣ್ಮರೆಯಾಗಿದ್ದಾರೆ. ಕನ್ನಡಿಗ ಕುರಿತೊದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್! ಅದರಲ್ಲೂ ಉತ್ತರ ಕರ್ನಾಟಕ ಕಾವ್ಯ ರಂಗಕಲೆಯ ತಾಯ್ಕಾಡು ಜನ್ಮದತ್ತ ರಕ್ತಗತಮೈಗೂಡಿದೆ. ಉತ್ತೇಕ್ಷೆ ಮಾತಲ್ಲ.
‘ಆದಿಕವಿ’ ಪಂಪ ಮೊದಲ್ಗೊಂಡು, ರನ್ನ, ಜನ್ನ, ಪೊನ್ನ ರತ್ನತ್ರಯರು. ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಅಷ್ಟೂ ಮಹಾಕವಿಗಳು ಉ. ಕರ್ನಾಟಕದವರು. ಬಸವ, ಚೆನ್ನ ಬಸವ, ಅಲ್ಲಮಾದಿ ಶಿವಶರಣ, ವಚನಕಾರರು, ಕನಕ, ಪುರಂದರಾದಿ ಹರಿದಾಸರೆಲ್ಲರೂ ಇದು ಸಿದ್ಧಭೂಮಿಯೂ ಕ್ಷಾತ್ರಭೂಮಿಯೂ, ಕವಿಗಳೂ ಹೌದು. ಕಲಿಗಳೂ ಕೂಡ ಗಂಡು ಮೆಟ್ಟಿನ ನಾಡು!
ಮುಂಬೈ ಕರ್ನಾಟಕ ಗೋಕಾವಿ ನಾಡು “ವಿಶಿಷ್ಟ ರಂಗಪ್ರಕಾರ ಪಾರಿಜಾತ ಪರಿಚಯಿಸಿದ ಕುಲಗೋಡ ತಮ್ಮಣ್ಣ, ಕೌಜಲಗಿ ನಿಂಗಮ್ಮ, ಮೊದಲ ವೃತ್ತಿರಂಗಭೂಮಿ ಥೇಟರ್ ನೀಡಿದ ಶ್ರೇಯಸ್ಸು ಶ್ರೀ ಕಾಡಸಿದ್ಧೇಶ್ವರ ಸಂಗೀತ, ನಾಟಕ ಮಂಡಳಿ ಕಟ್ಟಿದ ರಂಗ ಪಿತಾಮಹ ಶಿವಮೂರ್ತಿ ಸ್ವಾಮಿ ಕಣಬರ್ಗಿ ಮಠ, ಅದನ್ನು ಇನ್ನೂ ಎತ್ತರಕೊಯ್ದು ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಗೋಕಾವಿಯ ತುಕಾರಾಮ ಹೊಸಮನಿ, ವಾರಿಧಿಯು ಮೈದೆರೆದರೆ ಮುತ್ತು, ರತ್ನಗಳೇ ಗೋಚರಿಸುವಂತೆ, ನಾನು ಬಾಯ್ದೆರೆದರೆ ಪುರಾಣ. ಕಾದಂಬರಿ ಶ್ರೀ ಕೃಷ್ಣಮೂರ್ತಿ ಪುರಾಣಿಕ (15 ಗ್ರಂಥ) ನಲ್ವಾಡುಗಳು ಬೆಟಗೇರಿಕೃಷ್ಣ ಶರ್ಮ, ಪ್ರೊ. ಕೆ.ಜಿ. ಕುಂದಣಗಾರ,
ಡಾ. ಸಿ. ಚ. ನಂದೀಮಠ, ಸೋವಿಯತ್ ಪುರಸ್ಕಾರದ ಬಸವರಾಜ ಕಟ್ಟಿಮನಿ, ಜ್ಞಾನಪೀಠ ಡಾ. ಚಂದ್ರಶೇಖರ ಕಂಬಾರ, ಗೋಕಾವಿ ಕಾವ್ಯರಂಗ ಕಲೆಗಳ ಕಣಜ ಡಾ. ಶ್ರೀರಾಮ ಇಟ್ಟಣ್ಣವರ, ಡಾ. ನಿಂ. ಸಣ್ಣಕ್ಕಿ, ಶ್ರೀ ಬಾಳೇಶ ಲಕ್ಷೆಟ್ಟಿ ಪ್ರಾಸಂಗಿಕವಾಗಿ ನಾನು ಮಹಾಲಿಂಗ ಮಂಗಿ, ಜಲಪಾತ ಪರಿಸರದ ಗೋಕಾಕ ಗಿರಣಿ ಕೂಲಿಕಾರ್ಮಿಕ ಬಹುತೇಕ ಪ್ರಕಾರದಲ್ಲಿ 150 ಪುಸ್ತಕ ಬರೆದು ಪ್ರಕಟಿಸಿದ್ದೇನೆ. ನನ್ನ ಸಣ್ಣ ಖಾತೆಯಲ್ಲಿ ಐದಾರು ಗ್ರಂಥಕರ್ತರು, ಹತ್ತಾರು ರಂಗ ಕಲಾವಿದರು ಈ ನೆಲದಲ್ಲಿ ಇವೆಲ್ಲ ಸಹಜ ಸಾಮಾನ್ಯಸಂಗತಿಗಳು.
ಇದೇ ಸಾಲಿನಲ್ಲಿ ದೇಸಿ ಗ್ರಾಮ್ಯ ಜವಾರಿ ಜಾನಪದ ಕಸುವಿನ ಹಾಡುಗಬ್ಬ, ನಾಡು ಪರಂಪರೆಯ ಸಾಹಿತ್ಯರತ್ನ ಮಹಾರಾಜ
ಸಿದ್ದು 6,600 ಗೇಯಗೀತೆ ರಚಿಸಿದ್ದಾರೆ. ಮುಸ್ಲಿಂ ಭಾಷೆಯ ಕನ್ನಡ ಕವಿ ಗಾಯಕ, ಮೂಡಲಗಿಯ ಶಬ್ಬಿರ ಡಾಂಗೆ, 3000 ಹಾಡುಗಬ್ಬ ಬರೆದು 8000 ಹಾಡುಗಳಿಗೆ ಧ್ವನಿ ನೀಡಿದ್ದಾರೆ. ನಂಬಲಾಗದು ಆದರೂ ಸತ್ಯ! ರೆಕಾರ್ಡಿಂಗ ಸ್ಟುಡಿಯೋ ಕೂಡ ಮಾಡಿದ್ದಾರೆ. ಇಂಥಹ ನೂರಾರು ಕವಿ, ಗಾಯಕ, ಗಾಯಕಿಯರು, ಸಂಸ್ಕೃತಿ ಶ್ರೀಮಂತಿಕೆ ಹೆಚ್ಚಿಸಿದ್ದಾರೆ.
ಇಷ್ಟು ಮಾತ್ರ ಅಲ್ಲ, ದೊಡ್ಡಾಟ, ಸಣ್ಣಾಟ, ಬಹುರೂಪಿ ಬಯಲು ನಾಟಕ, ಸೂತ್ರ, ತೊಗಲುಗೊಂಬೆ ಜಾತಿಗಾರರು,
ಗೊಂದಲಿಗರು, ದೊಂಬರು, ಕರಡಿ, ಮಂಗ, ಕೊಲೇ ಬಸವ ಕುಣಿತದವರು. ಕುರಮಾಮಾ, ಸಾರುವಯ್ಯ, ಕೊರವಂಜಿ, ಕರಡಿ,
ಹಲಗೆ, ಮದಾಲಸಿಗಳು, ವಾಲಗದ ಹಾಡು, ಕರ್ಬಲ ರಿವಾಯತ ಹಾಡು, ದಟ್ಟಆಟ, ಕರ್ಬಲ ಕುಣಿತ, ಶಾಹೀರ ಲಾವಣಿ, ಗೀಗೀ, ಗೋಕಾವಿ ನಾಡು ಜಾನಪದ ದೇಸಿ ಪ್ರದರ್ಶನ ಕಲೆಗಳು ಆಡುಂಬೊಲ ನಮಗೆ ಮನೆ ಮುಂದಿನ ರಂಗೋಲಿಯಷ್ಟೇ ಚಿರಪರಿಚಿತ ಊರೂರಿಗೂ ಓಣಿಗೂ ಬಯಲಾಟಮೇಳಗಳು, ಮನೆಮನೆಯಲ್ಲೂ ಸಂಗ್ಯಾಬಾಳ್ಯಾ, ಗಲಪೋಜಿ ಕಲಾವಿದರನ್ನು ಕಲಾರಸಿಕರನ್ನು ಕಾಣಬಹುದಿತ್ತು. ರಂಗಪರಂಪರೆ ಅಪಾರ ಅಪರಂಪಾರ,
ದೊಡ್ಡಾಟಗಳಲ್ಲಿ ಪೌರಾಣಿಕ ವೀರಪರಂಪರೆ, ಭಕ್ತಿಪ್ರಧಾನ ಸಣ್ಣಾಟಗಳು, ಸಾಮಾಜಿಕ ಸಣ್ಣಾಟ ಹುಟ್ಟಿದ್ದು ಬೆಳಗಾವಿ ಜಿಲ್ಲೆಯಲ್ಲಿ
ಬೈಲಹೊಂಗಲ, ಹುಕ್ಕೇರಿ, ಗೋಕಾಕ ಪರಿಸರದಲ್ಲಿ ದೇಶಿ ಮಹಾಕಾವ್ಯ, ಲಾವಣಿಗಳು, 3-4 ರಾತ್ರಿ ಸುದೀರ್ಘ ಕಾಲ ಹಾಡಲಾಗುತ್ತಿತ್ತು.
ಪಾರಿಜಾತವನ್ನು ಅಖಂಡ 3-4 ರಾತ್ರಿ ಪ್ರಸ್ತುತಪಡಿಸುವ ಅವುಗಳನ್ನು ಆಸ್ವಾದಿಸುವ ಕಲಾರಸಿಕರೂ ಇಲ್ಲಿದ್ದರು. ಡೊಳ್ಳಿನ ವಾಲಗದ
ಹಾಡು, ಕರ್ಬಲ ರಿವಾಯತಗಳಲ್ಲಿ ಸುಧೀರ್ಘ ಕಥನಕಾವ್ಯ ಪ್ರಸ್ತುತಪಡಿಸುವ ಕಲಿಗಳಿಗೂ ಬರವಿಲ್ಲ. ಚೀಲುಗಟ್ಟಲೇ ಕುಳು, ಗುರುದಕ್ಷಿಣೆ
ಕೊಟ್ಟು ಬಾಲ್ಯದಿಂದಲೇ ವರ್ಷಗಟ್ಟಲೇ ಮಹಾಲಾವಣಿ ಕಲಿಯುವ ಪರಂಪರೆ ಬಾಯಿಂದ ಬಾಯಿಗೆ ಹೇಳಿ-ಕೇಳಿ ಕಲಿಯುವ
ತಪಸ್ಸಾಧನೆ ಸಮರ್ಪಣೆ ಆಶ್ಚರ್ಯ ಆದರೂ ಸತ್ಯ. ಮೋಹರಂ ರಿವಾಯತ ಪದಗಳನ್ನು ವರ್ಷದಲ್ಲಿ ಕತ್ತಲ ರಾತ್ರಿ ಒಂದೇ ಒಂದು
ದಿನ ದೇವರ ಮುಂದೆ ಹಾಡಲಾಗುವದು. ಒಂದುದಿನ ರಾತ್ರಿ ಹಾಡಿಕೆಗೆ ಹಾಡು ಕಲಿತು ನೆನಪಿಟ್ಟು ಹಾಡುವ ಕಲಾವಿದರು. ಕೇಳುವ
ಸಹೃದಯಿಗಳು. ಅವರ ಮಹಾನತೆ ಮೆಚ್ಚಲೇಬೇಕು. ಬೇರೆ ದಿನ ಹಾಡಲು ನಿಷಿದ್ಧ!
1950-80 ದಶಕಗಳಲ್ಲಿ ಕೊಣ್ಣೂರ ಮರಡೀಮಠ ಕಾಡಸಿದ್ಧೇಶ್ವರ ಕಾರ್ತಿಕ ಮಹೋತ್ಸವ, ಒಂದು ರಾತ್ರಿ ದೀಪೋತ್ಸವದಲ್ಲಿ
30-40 ಸಣ್ಣಾಟ ಕಂಪನಿಗಳು ಸ್ವಯಂಪ್ರೇರಣೆಯಿಂದ ಆಗಮಿಸಿ ಸ್ವಂತ ಖರ್ಚಿನಲ್ಲಿ ಅಟ್ಟ ವೇದಿಕೆ, ಪ್ರಸಾದನ, ಧ್ವನಿ ವರ್ಧಕ,
ಲೈಟಿಂಗ್, ವಾದ್ಯಮೇಳದೊಂದಿಗೆ ಪ್ರಚಾರಾರ್ಥ ಉಚಿತ ಬಯಲು ರಂಗ ಸೇವೆ ಸಲ್ಲಿಸುವ ಪರಂಪರೆ ಪರಿಪಾಠ, ಗೋಕಾವಿ
ನಾಡಿನಲ್ಲಿ ರಂಗಕಲೆ, ಕಾವ್ಯಕಲೆ, ಧ್ಯಾನಿಸುವ ಆರಾಧಿಸುವ ಆಸ್ವಾದಿಸುವ ಸಹೃದಯಿಗಳ ದಿವ್ಯ ಪರಂಪರೆ ಕಾಣಬಹುದಿತ್ತು.
ಗಿರಣಿಊರಿನ ಮೊಹರಂ ಅಲಾಯಿ ಕರ್ಬಲ ವೀರಗಾಸೆ, ಸಮೂಹ ಕುಣಿತ ಕಲೆ, ಜಾನಪದ ಜಗತ್ತಿನ ತಜ್ಞ ವಿದ್ವಾಂಸರು
ಡಾ. ಎಚ್. ಎಲ್. ನಾಗೇಗೌಡರೆದುರು ಪ್ರದರ್ಶನ ಪ್ರಸ್ತುತಪಡಿಸಿದಾಗ ನಿಬ್ಬೆರಗಾದರು. ತಡಸಲೂರಿನ ಇದೇ ಕರ್ಬಲ ಮೋಹರಂ
ಹಂಪಿ ಕನ್ನಡ ವಿ.ವಿ ಸಂಶೋಧಕರು, ಡಾ. ರಹಮತ ತರಿಕೇರಿ ಕಂಡು ವಿಸ್ಮಿತರಾದರು. ಜಾನಪದ ನಾಡಕಲೆಗಳ ತಾತ್ಪಾಡು
ಜಿನಗಾರಿಕೆ, ಕಾಷ್ಟ ಶಿಲ್ಪಕ್ಕೂ ಗೋಕಾಕ ಖ್ಯಾತಿ! ಕರದಂಟಿನ ಪ್ರೀತಿ ಸವಿನಂಟಿನ ನಾಡು.
ಆನಂದಕಂದ, ಅಂಬಿಕಾತನಯದತ್ತ, ಡಾ. ಚಂದ್ರಶೇಖರ ಕಂಬಾರ…. ದೇಶಿ ಸೊಗಡಿನ ಕಾವ್ಯ ಪರಂಪರೆ, ಈಗಲೂ ಸತ್ವಪೂರ್ಣ ಸಮೃದ್ಧವಾಗಿ ಉಳಿದು ಬಂದಿದ್ದು ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಅಂದಿನ ಜಾನಪದರು ತಾವು ಕಂಡಂತೆ ಕಂಡಷ್ಟು ಹಾಡುಗಬ್ಬಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಕಂಡಿರಿಸಿದರು. ಇಂದಿನ ಅಕ್ಷರಸ್ಥರು ಸಮಕಾಲೀನ ದೇಸಿ ತುಡಳಿಗೆ ಧ್ವನಿಯಾಗುತ್ತಿದ್ದಾರೆ.
ಆಗ ಗ್ರಾಮಾ ಫೋನಗಳಿದ್ದವು. ಕೆಸೆಟ್ ಧ್ವನಿಸುರಳಿ ಬಂದವು. ಈಗ ಕಂಪ್ಯೂಟರ್ ಮೊಬೈಲ್, ಪೆನಡ್ರೈವ್‌ಗಳಲ್ಲಿ ಹರಿದಾಡುತ್ತವೆ.
ಈಗಲೂ ಸಾವಿರಾರು ಗೀತ ರಚನೆಕಾರರು, ಗಾಯಕ, ಗಾಯಕಿಯರು ವೇದಿಕೆಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ, ಟಿ.ವಿ ಶೋಗಳಲ್ಲಿ ಹಾಡುತ್ತಾರೆ,
ಕುಣಿಯುತ್ತಾರೆ. 1960 – 80 ದಶಕಗಳಲ್ಲಿ ಗುರುರಾಜ ಹೊಸಕೋಟಿ, ಗುರುರಾಜ ಕೆಂಧೂಳಿಯಂತ ಸ್ಟಾರ ಗಾಯಕರು ವೃತ್ತಿ
ಮಾಡಿಕೊಂಡಿದ್ದರು.
ಇಂದೀಗ ಶ್ರೀ ಮಹಾರಾಜ ಸಿದ್ದು ಹಳ್ಳೂರ ಮತ್ತು ಶಬ್ಬಿರ ಡಾಂಗೆ ನೂರಾರು ಕವಿ ಗಾಯಕರನ್ನು ಆನಂದಿಸುತ್ತಿದ್ದೇವೆ.
ಸಿದ್ದು ಮಾರಾಜಪ್ಪಗೋಳ ಏಕವ್ಯಕ್ತಿ 6,600 ಹಾಡುಗಬ್ಬ ರಚಿಸಿ ದಾಖಲೆ ಮಾಡಿದ್ದಾರೆ. ಅಷ್ಟೂ ಗೇಯಗೀತಗಳು ಪ್ರಾಸಾನುಪಾಸ,
ತಾಳಲಯಬದ್ಧ, ಸಾಹಿತ್ಯ ಶುದ್ಧ ಮಾಧುರ್ಯ ಸೌಂದರ್ಯದೊಂದಿಗೆ ಜನಮನ ರಂಜಿಸುತ್ತಿವೆ. ಅನುಪಮ ಸಾಧನೆ ಪೂರ್ಣ ಹೆಸರು ಸಿದ್ದಪ್ಪ, ಮಾಯಪ್ಪ ಮಾರಾಜಪ್ಪಗೋಳ ಹಳ್ಳಿ ಹಾಲುಮತ ಪಶುಪಾಲಕ, ಕೃಷಿ ಕುಟುಂಬ ತಾಯಿ ಸಾಂವಕ್ಕ-ಸಾಂಯವ್ವ, ಹಾಡುಗಾರ್ತಿ, ಜೋಗುಳ, ಗರತಿ, ಸಂಪ್ರದಾಯದ ಹಾಡುಗಳು, ಕೇಳುತ್ತ ಕವಿಯಾಗಿ ಬೆಳೆದವರು. ಸದ್ಯ 50ರ ಹರೆಯದ ಸಿದ್ದು ಶ್ರೀ ಹಳ್ಳದರಂಗ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಮ್ಯಾನೇಜರ್ ವೃತ್ತಿ, ಭಜನಾಪದ, ನಾಟಕ, ಸಾಹಿತ್ಯ, ಸತ್ಸಂಗ, ಗೀತರಚನೆ ಅವರ
ಪ್ರವೃತ್ತಿಗಳು ನವ್ಯಕವಿಗಳಂತೆ ಎತ್ತರೆ ಪತ್ತರೆ ಸಂತೆಗೆ ಮೂರು ಮೊಳ ನೇಯ್ದು ಗೀಚಿದವರಲ್ಲ, ತಾಳ, ಲಯಬದ್ಧ, ಮಧುರ ಗೇಯಗೀತೆಗಳು ನಾಡಿನ ನೂರಾರು ಖ್ಯಾತ ಗಾಯಕರು ಇವರ ಧ್ವನಿ ಸುರುಳಿಗೆ ಧ್ವನಿ ನೀಡಿದ್ದಾರೆ. ಕಾವ್ಯಧ್ವನಿಯಾಗಿದ್ದಾರೆ. ಸಾವಿರ
ಹಾಡಿನ ಸರದಾರ ಮಾತ್ರವಲ್ಲ, ಸೋಲಿಲ್ಲದ ಸಾವಿಲ್ಲದ ಅಮರ ಕವಿಗಾಯಕ ಸಿದ್ಧಕವಿ ಮಹಾರಾಜ ಸಿದ್ದು ಅವರ ಗೇಯಗೀತ
ಜಾನಪದ ಹಾಡುಗಬ್ಬಗಳಷ್ಟೂ, ಸಾಹಿತ್ಯದ ಮುದ್ರಣ ಕೃತಿಯಾಗಿ, ಕಾವ್ಯ ಸಂಪುಟಗಳಾಗಿ ಸಹೃದಯಿಗಳಿಗೆ ಒದಗಬೇಕೆಂದು ನನ್ನ
ಹಿರಿಯಾಸೆ. ಸಾಹಿತ್ಯ ಶಾರದೆಯ ಪೂರ್ಣ ಅನುಗ್ರಹ ಸಿದ್ದು ಮೇಲಾಗಿದೆ. ನಿಜಕ್ಕೂ ವರಕವಿ-ರಸಋಷಿ ಕೇವಲ ಓದು ವಿದ್ಯೆಯಿಂದ
ಸಿದ್ಧಿಸಿಕೊಳ್ಳಲಾಗದು. ಅಗಾದ ರಸಾನುಭವಗಳನ್ನು ರಸವತ್ತಾಗಿ ಅದ್ಭುತವಾಗಿ ಕಟ್ಟಿ ಕೊಡುವ ಸಿದ್ಧ ಹಸ್ತ.
ಅಂಬಿಕಾತನಯ, ಆನಂದಕಂದ, ಮಧುರಚೆನ್ನ, ಕಂಬಾರರ ದಿವ್ಯ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ. ಸಿದ್ದು ಮಾರಾಜ,
ಶಬ್ಬಿರಡಾಂಗೆ, ಅಶೋಕ ಬಾಬು ಅಂತವರು ಪರಂಪರೆ ಮುಂದುವರೆಸಿದ್ದಾರೆ. ಅನೇಕ ಹಿಟ್ ಗೀತೆಗಳನ್ನು ನೀಡಿದ್ದಾರೆ. ಘನ
ಸರಕಾರ ಸಂಸ್ಕೃತಿ ಇಲಾಖೆ, ಅಕಾಡೆಮಿಗಳು ಕಣ್ಣೆರೆದು ವರಕವಿಗಳನ್ನು ನೋಡಬೇಕು. ಸುತ್ತಮುತ್ತಲಿನ ಮಠಮಾನ್ಯರು, ರಸಿಕ
ಸಹೃದಯಿಗಳು, ಜಾತ್ರೆ-ಉತ್ಸವಗಳಲ್ಲಿ ಬಿರುದು, ಪ್ರಮಾಣಪತ್ರ, ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕವಿ ಸಿದ್ದು ಅವರನ್ನು ಕೇಳಿದೆ “ಗೀತಗಾಯನ ಕಾವ್ಯ ಬರೆದು ದಾಟಿ ಕೂಡಿಸುತ್ತೀರೋ? ಇಲ್ಲ ದಾಟಿ ಅನುಸರಿಸಿ ಪದಕರೋ?
‘ಮನದಲ್ಲಿ ದಾಟಿ ಅನುಸರಿಸಿ ಪದ ಸಂಯೋಜನೆ ಮಾಡುತ್ತೇನೆ’ ಅಂದರು. ಭಾವಲಹರಿ, ಪ್ರಾಸ, ಲಯ ಬದ್ಧವಾಗಿ
ಸಿದ್ಧಗೊಂಡಾಗ, ಸ್ಟುಡಿಯೋದಲ್ಲಿ ಸೂಕ್ತ ಗಾಯಕ ವಾದಕರೊಂದಿಗೆ ರಿಕಾರ್ಡಿಂಗ ಮಾಡುತ್ತಾರೆ. ಪಕ್ತ ಹವ್ಯಾಸ ಕಲಾಸೇವೆ ಪ್ರವೃತ್ತಿ
ವೃತ್ತಿಯಲ್ಲ. ರಿಕಾರ್ಡಿಂಗ ಕಂಪನಿಗೆ ನೀಡಿದಾಗ ಕಿರು ಸಂಭಾವನೆ ನೀಡುತ್ತಾರೆ. ಮೊಬೈಲ್ ಆ್ಯಪ್‌ಗಳಿಗೆ ಬಿಟ್ಟಾಗ ತುಸು ಸಂಭಾವನೆ
ಲಭಿಸುತ್ತದೆ. ಆತ್ಮ ಸಂತೋಷದ ಗೀಳು. ‘ಜಾನಪದ ಹಾಡುಹಕ್ಕಿಗೆ ಪ್ರಶಸ್ತಿ ಪದವಿಯ ಹಾರ ತುರಾಯಿ ಗರಿಯ ಹಂಗೇಕೆ? ಬರವಣಿಗೆ
ಜನಪದರಿಗೆ ಬಿಜಿನೆಸ್ಸು ಅಲ್ಲ, ವೀಕನೆಸ್ಸು ವರವೋ, ಶಾಪವೋ ಗೊಡವೆಯೇ ಇಲ್ಲ. ಜನರ ಪ್ರೀತಿ, ಅಭಿಮಾನ, ಮೆಚ್ಚುಗೆಯೊಂದಿಗೆ
‘ಸಾಹಿತ್ಯದತ್ತ’ ಸಾಹಿತ್ಯ ಭೂಷಣ, ಸರಸ್ವತಿ ಶ್ರೀ ಬಿರುದು ಬಂದಿವೆ. ಕೌಟುಂಬಿಕ ಸಮುದಾಯದ ನಿತ್ಯದ ಆಗು ಹೋಗು, ಭಾವನೆ ಸಂವೇದನೆ, ನೋವು-ನಲಿವು, ಸ್ಪಂದನೆ, ಸಂವೇದನೆಗಳು ಕಾವ್ಯದ ವಸ್ತು ತಾವೂ ಈಗ ನವೋದಯ, ನವ್ಯ ಮಾದರಿ, ಸಾಹಿತ್ಯ
ಸಂಕಲನ ಹೊರತರುವ ಹಂಬಲ ಅವರ ಸಾಧನೆ ಮುಂದೆ ಇದರಲ್ಲೇನು ವಿಶೇಷ?
ಹಿಂದೆ ಕೆಲವರು ಬರೆಯುತ್ತಿದ್ದರು ಹಲವರು ಓದುತ್ತಿದ್ದರು. ಮೊಬೈಲ್ ಬಂದ ಮೇಲೆ ಬರೆಯುವವರೇ ಉಪದೇಶ,
ಸಂದೇಶ ನೀಡುವವರೇ ಎಲ್ಲ. ಓದುವವರಿಲ್ಲ, ಕವಿ, ಕಾವ್ಯ ಗಾಯಕರ ಕುರಿತು ಟೀಕೆಗಳು. ‘ಪ್ರಜಾವಾಣಿ, ಸಂಯುಕ್ತ ಕರ್ನಾಟಕ
ಸಂಪಾದಕೀಯ ಹರಿದು ಮುರಿದು ಪದಗಳನ್ನು ಒಂದರ ಕೆಳಗೊಂದು ಜೋಡಿಸಿಟ್ಟರೆ ನವ್ಯ ಕವನ ಸಿದ್ಧವಾಯ್ತು’ ಕವಿಯಾದರು?
ಪರ್ಯಾಯವಾಗಿ ಪ್ರತಿಭಾವಂತ ಗಾಯಕ ಅದೇ ಸಂಪಾದಕೀಯ ಗದ್ಯವನ್ನೇ ಸುಶ್ರಾವ್ಯವಾಗಿ ಸಾದರಪಡಿಸಬಲ್ಲರು. ಗಾಯಕರು ಕವಿ
ಗಾಯಕರಿಗೆ ಇದಕ್ಕಿಂತ ಮಯ್ಯಾದೆ ಬೇಕೆ? ಇಂಥ ಟಿಪ್ಪಣಿ ಟೀಕೆಗಳು ಸಾಮಾನ್ಯ. ‘ಕುಣಿಯಲು ಬಾರದಾ ಅಂಗಳ ಟೊಂಕಅಂದಳಂತೆ. ಹಾಗೆ ಲೇಖಕನಾಗದೆ ವಿಫಲವಾಗಿ ಹತಾಸೆಯಿಂದ ವಿಮರ್ಶಕನಾದರಂತೆ! ನಮ್ಮ ಪಾಡು ನಮಗಿರಲಿ ಗೆಳೆಯ, ಕಾವ್ಯದ ಸವಿಯನ್ನಷ್ಟೇ ಉಣಬಡಿಸುತ್ತೇವೆನ್ನುವರು. ಕವಿಗಳು ಮಾತಿನಮಲ್ಲರು ಏನೆಲ್ಲ ಆಡುತ್ತಾರೆ. ಮಾತು ಬಲ್ಲ ಕವಿಗಳು ಹಾಗೆಲ್ಲ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆಡು ಮುಟ್ಟದ ಗಿಡವಿಲ್ಲ, ಸಿದ್ದು ಮಾರಾಜ ಬರೆಯದ ವಸ್ತು ವಿಷಯ ಉಳಿದಿಲ್ಲ. ಭಕ್ತಿಗೀತೆ, ತತ್ವಪದ,
ಕ್ಷೇತ್ರ, ಮಹಿಮೆ, ಸಂಸಾರಿಕ, ಸಾಮಾಜಿಕ, ನ್ಯಾಯ ನೀತಿ ಎಲ್ಲಕ್ಕೂ ಸ್ಪಂದಿಸಿದ್ದಾರೆ. ಚವಲದಾಗ ಡೌಲು ಮಾಡುವ ಡಂಬಾಚಾರಿಗಳು ನೂರು ರೂಪಾಯಿ ಬಡಾಯಿ ಬಡಿವಾರ ಮಾಡುತ್ತ, ಪದವಿ ಪ್ರಶಸ್ತಿಗೆ ಹಪಹಪಿಸುತ್ತಾರೆ. ಸಿದ್ಧರು ಸಿದ್ಧಿಗೆ ಹಂಬಲಿಸಿದರೆ ದ್ಯಾನಿಸಿದರೆ,
ಪ್ರಚಾರ ಪ್ರಿಯರು, ಪ್ರಶಸ್ತಿ ಪುರಸ್ಕಾರಗಳಿಗೆ ಪ್ರಭುತ್ವ ಪರಿಶ್ರಮಪಡುತ್ತಾರೆ. ಈ ನಿಟ್ಟಿನಲ್ಲಿ ಅಗಾಧ ಸಾಧನೆಯ ಕವಿ ಸಿದ್ದು ಮಹಾರಾಜ
ನಿಜವಾದ ಸಿದ್ಧ ಸಾಧಕರು ಅಭಿನಂದನಾರ್ಹರು. ನನ್ನ ಆಕ್ಷೇಪಣೆ; ಬುದ್ಧಿಜೀವಿ- ಸುದ್ಧಿಜೀವಿಗಳ ಒಂದು ವರ್ಗ, ಅಕಾಡೆಮಿಕ ವಲಯದ ಸ್ವಯಂ ಘೋಷಿತ ಅಸಾಧ್ಯರು ನಾಟಕ-ಸಿನಿಮಾ ಚಿತ್ರಕಥೆ, ಹಾಡು ಸಾಹಿತ್ಯವೆಂದು ಪರಿಗಣಿಸುವದಿಲ್ಲ. ಜಾನಪದವನ್ನೂ ಕೇವಲವಾಗಿ ಪರಿಭಾವಿಸುವದಿದೆ. ನಾನು ಲೇಖಕ ಕಲಾವಿದನೂ ಆಗಿ ಕಲಾರಸಿಕ ಸಹೃದಯಿಯಾಗಿ, ಆ ಕ್ಷೇತ್ರಗಳೂ, ಕಲಾವಂತ
ಪ್ರತಿಭಾವಂತರು ಎಂತೆಂಥಾ ಅದ್ಭುತ ಸಾಹಿತ್ಯ ಕೊಡುಗೆ ನೀಡಿದ್ದಾರೆ. ಜಾನಪದದಲ್ಲೂ ಡೊಳ್ಳಿನ ಹಾಡು, ಸುಗ್ಗಿಹಾಡು, ಕರ್ಬಲ ರಿವಾಯತ, ಹೋಳಿ, ತತ್ವಪದ, ಗೀಗಿ ಲಾವಣಿ, ರಂಗಗೀತೆಗಳು, ಪಾರಿಜಾತದಂತ, ಗೀತ ನಾಟಕಗಳು ಕನ್ನಡದ ಅಸ್ಮಿತೆ ಆತ್ಮವಿದ್ದಂತೆ.
ಡಾ. ಕಂಬಾರ ನನ್ನ ಜೋಕುಮಾರ ಪ್ರದರ್ಶನದಲ್ಲಿ ಮಾತನಾಡುತ್ತ ‘ಸಂಗ್ಯಾಬಾಳ್ಯಾ-ಪಾರಿಜಾತ’ ಕೃರ್ತುಗಳು ಶೇಕ್ಸಪಿಯರ್‌ಗಿಂತ
ಯಾವ ಬಗೆಯಲ್ಲೂ ಕಡಿಮೆಯಿಲ್ಲ. ನಮ್ಮವರಿಗೆ ಅದರ ಬೆಲೆ ಗೊತ್ತಿಲ್ಲವೆಂದರು. ನಮ್ಮ ದೀಡಪಂಡಿತರಿಗೆ ದೃಷ್ಟಿ ಬುದ್ಧಿ ಸರಿಯಿಲ್ಲವೆಂದುಕೊಳ್ಳಬೇಕಷ್ಟೇ! ನನ್ನ ದೃಷ್ಟಿಯಲ್ಲಿ ದಾನವನನ್ನು, ಮಾನವನನ್ನಾಗಿ, ಮಾನವನನ್ನು ಮಹಾದೇವನನ್ನಾಗಿ ಮಾಡುವ ದಣಿದ, ನೊಂದ
ಮನಸ್ಸುಗಳಿಗೆ ಸಾಂತ್ವನ, ನವೋಲ್ಲಾಸ ನೀಡುವ ಸಾಹಿತ್ಯ ಕಲೆಯೇ ಶ್ರೇಷ್ಠ, ಉತ್ಕೃಷ್ಟ, ಅದು ದೇಶಿ-ಮಾರ್ಗವಿರಲಿ, ಜಾನಪದ -ಅಭಿಜಾತವಾಗಿರಲಿ ಅಂತಃ ಸತ್ವವುಳ್ಳ ಅಂತಃಕರಣ ತಟ್ಟುವಂತಿದ್ದರೆ ಅದು ನೈಜದಿವ್ಯ ವರಕವಿ ವರನಟರನ್ನು ಮೀರಿಸುವ ಪ್ರತಿಭೆಗಳು
ಅವಕಾಶ ಪ್ರೋತ್ಸಾಹವಿಲ್ಲದೆ ಸೊರಗುತ್ತಿವೆ. ನಲ್ವಾಡು ಕಾವ್ಯಪರಂಪರೆ ಮಾದರಿ ಮುಂದುವರಿಕೆ ಆಗಬೇಕಾಗಿದೆ ಸಚಿವ ಸತೀಶ
ಜಾರಕಿಹೊಳಿ ಮಾತು ಮನನೀಯ. ‘ಪ್ರತಿಭೆ ನಿಮ್ಮದು-ಪ್ರೋತ್ಸಾಹ ನಮ್ಮದು’ ಸರಕಾರ ಸಂಸ್ಕೃತಿ ಇಲಾಖೆ ವಿದ್ವಾಂಸರಿಗೆ ಧೇಯ್ಯವಾಕ್ಯ
ಆಗಬೇಕು. ಜನವಾಣಿ ಜಂಗಮವಾಣಿ ಅಳಿಸಿ ನಶಿಸಿ ಹೋಗುವ ಮುಂಚೆ ಉಳಿಸಿ ಬೆಳೆಸಿಕೊಂಡು ಹೋಗುವ ಪ್ರಯತ್ನಗಳು
ಆಗಬೇಕು. ‘ಹೊಸ ಚಿಗುರು ಹಳೇ ಬೇರು ಕೂಡಿರಲು ಮರಸೊಬಗು (ಡಿವಿಜಿ) ‘ಹಳತುಹೊಸತರ ಕೂಟ ಜಗದಬಾಳ ತೋಟ
(ಶಿವರುದ್ರಪ್ಪ) ಜಾನಪದವೂ ಬದಲಾಗಿದೆ ಸ್ವಾಭಾವಿಕ. ಅಂದಿನ ಜಮಾನದವರು. ಅಂದಂದಿನ ಜೀವನ ವಿಧಾನ ಪ್ರತಿಬಿಂಬಿಸಿದರು.
ಇಂದಿನವರು ಈ ದಿನಮಾನ ದೈನಂದಿನ ಜೀವನಶೈಲಿ ವಿದ್ಯಮಾನಗಳಿಗೆ ಪ್ರತಿಸ್ಪಂದಿಸುತ್ತಿದ್ದಾರೆ. ನಗರೀಕರಣ, ಜಾಗತೀಕರಣ,
ಸಂಸ್ಕೃತೀಕರಣ ಸಂದರ್ಭದ ಬದಲಾದ ಅಭಿವ್ಯಕ್ತಿ ಕನ್ನಡ ಕವಿ ಕಲಾವಿದರಿಗೆ ಈಗಲೂ ಬರವಿಲ್ಲ. ಆದರೆ ಬಲ ಬೆಂಬಲವಿಲ್ಲ, ಕನ್ನಡ
ಅನ್ನದ ಭಾಷೆಯಾಗಬೇಕು. ಅನ್ನುವಂತೆಯೇ ಜನಪರ ಜೀವಪರ ಜನವಾಣಿಗೂ ಕಾಯಕಲ್ಪ ನೀಡಬೇಕು. ಅವಕಾಶ ಪ್ರೋತ್ಸಾಹ, ಗೌರವ, ಮನ್ನಣೆ ದೊರೆಯಬೇಕು. ಪ್ರತಿಷ್ಠಿತರು, ಪ್ರತಿಷ್ಠಾನಗಳು, ಅಕಾಡೆಮಿಗಳು ಆದ್ಯತೆ ನೀಡಬೇಕು. ಪ್ರಚಾರ, ಪುರಸ್ಕಾರ, ಅರಿವು,
ಅಧ್ಯಯನ, ಸಂಶೋಧನ ಸಮಾವೇಶ, ಚಿಂತನ-ಮಂಥನ ಏರ್ಪಡಬೇಕು.
ನಾನಿಲ್ಲಿ ಪ್ರಾತಿನಿಧಿಕವಾಗಿ ಗುರುರಾಜ ಹೊಸಕೋಟಿ, ಕೆಂದೂಳಿ, ಸಿದ್ದು ಮಾರಾಜ, ಶಬ್ಬಿರ ಡಾಂಗೆ ಕೆಲವೇ ಹೆಸರು ಪ್ರಾತಿನಿಧಿಕವಾಗಿ ಉಲ್ಲೇಖಿಸಿದ್ದೇನೆ. ಉತ್ತರ ಕರ್ನಾಟಕದಲ್ಲಿ ದೇಸಿ ಪ್ರತಿಭೆಗಳು ಸಾವಿರಾರು ಮುಂಬಯಿ ಕರ್ನಾಟಕದಲ್ಲಿ ದೇಸಿ
ಹಾಡುಗಬ್ಬಗಳ ರಾಜ್ಯ ಸಮಾವೇಶಗಳು ನಡೆಯಬೇಕು. ನವ್ಯ ದೇಸಿ ಹಾಲಿ ಜಾನಪದ ಕಲೆ, ಸಾಹಿತ್ಯ, ಹಾಡುಗಬ್ಬಗಳ ಪರಂಪರೆ
ಮುಂದುವರೆಯಬೇಕು. ಕಾಯಕಲ್ಪ ನೀಡುವಂತಾಗಬೇಕು. ಸುಪ್ರಸಿದ್ಧ ಪ್ರಚಲಿತ ಚಾಲ್ತಿ ಮುಖವಾಡಗಳನ್ನು ಕೈ ಬಿಟ್ಟು ಅಪ್ಪಟ
ಅಸಲುಮುಖಗಳನ್ನು ಅವಕಾಶ ವಂಚಿತರನ್ನು ಗುರ್ತಿಸಿ ಪರಿಚಯಿಸಿ ಪ್ರೋತ್ಸಾಹಿಸಬೇಕಿದೆ. ಸಂಸ್ಕೃತಿ ಇಲಾಖೆಯ ಮೂಲ ಮುಖ್ಯ
ಆಶಯ ಕಾಳಜಿ ಕೂಡ ಇದೆ, ಮರೆಯಬಾರದು.
ನಿಮ್ಮ ಅಭಿಮಾನಿ
ಮಹಾಲಿಂಗ ಮಂಗಿ
‘ಶುಭೋದಯ’ ಲಕ್ಷ್ಮೀ ಬಡಾವಣೆ,
ಗೋಕಾಕ ಮೊ : 7975307738