ಮೂಡಲಗಿ: ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾತ್ಮ ಜ್ಯೋತಿರಾವ್ ಫುಲೆ ಅವರು ನೀಡಿದ ಅಮೂಲ್ಯ ಕೊಡುಗೆ ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡ ಹೇಳಿದರು.
ಮೂಡಲಗಿ ಪಟ್ಟಣದ ವಿದ್ಯಾನಗರ ಜ್ಯೋರ್ತಿಲಿಂಗ ಬ್ಯಾಂಕ್ ಹತ್ತಿರ ನಡೆದ ಮಹಾತ್ಮ ಶ್ರೀ ಜ್ಯೋತಿಬಾ ಫುಲೆಯವರ 198ನೇ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಮತ್ತು ತುಳಿತಕ್ಕೊಳಗಾದವರನ್ನು ಸಬಲೀಕರಣಗೊಳಿಸಲು ಮಾಡಿದ ಅವಿರತ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದರು.’ಸತ್ಯಶೋಧಕ ಸಮಾಜ’ ಸ್ಥಾಪನೆಯ ಮೂಲಕ, ಸಮಾಜವನ್ನು ದುಷ್ಕೃತ್ಯಗಳಿಂದ ಮುಕ್ತಗೊಳಿಸುವಲ್ಲಿ ಅವರು ಗಮನಾರ್ಹ ಕೆಲಸ ಮಾಡಿದರು. ಶಿಕ್ಷಣ, ಸಮಾನತೆ ಮತ್ತು ನ್ಯಾಯದ ಮೂಲಕ ಸಾಮಾಜಿಕ ಬದಲಾವಣೆಗೆ ಅಡಿಪಾಯ ಹಾಕಿದ ಮಹಾತ್ಮರ ಜೀವನವು ಅನುಕರಣೀಯವಾಗಿದೆ ಅವರು ಮಾನವೀಯತೆಯ ನಿಜವಾದ ಸೇವಕ ಎಂದು ಬಣ್ಣಿಸಿದರು.
ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ,ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಳಿ ಸಮಾಜದ ಮುಖಂಡ, ಮುತ್ತಪ್ಪ ಈರಪ್ಪಣ್ಣವರ, ಈರಪ್ಪ ಬನ್ನೂರ, ಚನ್ನಬಸಪ್ಪ ಬಡ್ಡಿ, ಲಕ್ಷ್ಮಣ ಮಾಲಗಾರ, ಭೀಮಪ್ಪ ಅವರಾದಿ, ಮಲ್ಲಪ್ಪ ಮುತಾರಿ, ಶಂಕರ ಕೊತ್ತಂಬರಿ, ನಾಗಪ್ಪ ಮಾಲಗಾರ, ಯಲ್ಲಪ್ಪ ಖಾನಾಪುಗೋಳ, ಸಂಜು ಕಮತೆ, ಮಹಾದೇವ ಬಡ್ಡಿ, ಶಿವಬಸು ಹಂದಿಗುಂದ, ಚಂದ್ರು ಗಾಣಿಗ, ಈರಪ್ಪ ಢವಳೇಶ್ವರ, ಕುಮಾರ ಗಿರೆಡ್ಡಿ, ಗುರು ಗಂಗಣ್ಣವರ, ಈಶ್ವರ ಮುರಗೋಡ, ಬಸವರಾಜ ಪಾಲಭಾವಿ, ಮಲ್ಲಪ್ಪ ಮಧುಗುನುಕಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.