ಮೂಡಲಗಿ: ಕಬ್ಬಿನಲ್ಲಿ ಬೆಳೆಯಲ್ಲಿನ ಗೊಣ್ಣೆಹುಳು ನಿರ್ವಹಣೆಯನ್ನು ರೈತರು ಕೃಷಿ ತಜ್ಞ ಹಾಗೂ ಬೆಳೆಗಳ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಬೆಳೆಗಳ ನಿರ್ವಹಣೆಯ ಮಾಹಿತಿ ಪಡೆದುಕೊಂಡು ಬೆಳೆಗಳಿಗೆ ಕೀಟ ಭಾದೆ ಬರದಂತೆ ತಡೆದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದು ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ ಹೇಳಿದರು
ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಸತೀಶ ಶುಗರ್ಸ್ ಕಾರ್ಖಾನೆಯ ಸಭಾಭವನದಲ್ಲಿ ಜರುಗಿದ ಕಬ್ಬಿನಲ್ಲಿ ಗೊಣ್ಣೆಹುಳು ನಿರ್ವಹಣೆ ಕುರಿತು ಒಂದು ದಿನದ ವಿಚಾರ ಸಂಕೀರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯ ಉಪಯೋಗ ಮತ್ತು ಗೊಣ್ಣೆ ಹುಳುವಿನ ಜೀವನ ಚಕ್ರದ ಕುರಿತು ವಿವರಿಸಿದರು.
ಸತೀಶ ಶುಗರ್ಸ್ ಕಾರ್ಖಾನೆಯ ಕಬ್ಬು ಅಭಿವೃದ್ದಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಸಾಲಟ್ಟಿ ಮಾತನಾಡಿ, ಕಬ್ಬಿನ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲ್ಲು ಹಾಗೂ ಕೀಟ ಬಾಧೆಯನ್ನು ನಿಯಂತ್ರಿಸಲು ಕಾರ್ಖಾನೆಯಿಂದ ಏರ್ಪಡಿಸುವ ಕೃಷಿ ವಿಚಾರ ಸಂಕೀರಣದಲ್ಲಿ ರೈತರು ಭಾಗವಹಿಸಿ ಕೃಷಿ ತಜ್ಞರಿಂದ ಮಾಹಿತಿ ಪಡೆದು ಬೆಳೆಗಳಲ್ಲಿ ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಸದೃಢವಾಗಬೇಕೆಂದರು.
ಮತ್ತಿಕೊಪ್ಪದ ಕೆಎಲ್‍ಇ ಕೆವಿಕೆಯ ಮುಖ್ಯಸ್ಥರು ಮತ್ತು ಕೀಟ ಶಾಸ್ತ್ರಜ್ಞ ಡಾ.ಮಂಜುನಾಥ ಚೌರಡ್ಡಿ ಅವರು ಗೊಣ್ಣೆಹುಳುವಿನ ಭಾದೆ ಮತ್ತು ಪ್ರತಿ ಎಕರೆಗೆ ಅವಶ್ಯಕ ಪ್ರಮಾಣದಲ್ಲಿ ಮೆಟರಾಜಿಯಂ ಬಳಸಿ ಗೊಣ್ಣೆಹುಳುವಿನ ನಿರ್ವಹಣೆ ಮಾಡಬಹುದು ಎಂಬುದರ ಕುರಿತು ರೈತಬಾಂಧವರಿಗೆ ಮತ್ತು ಕಬ್ಬು ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಚಿಕ್ಕೋಡಿ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಸಹದೇವ ಯರಗೊಪ್ಪ ಅವÀರು ಮಣ್ಣು ನಿರ್ವಹಣೆ ಕುರಿತು, ಗೋಕಾಕ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಎಮ್.ನದಾಫ್ ಅವರು ಕಬ್ಬಿನ ಕ್ಷೇತ್ರದ ಕುರಿತು ಮಾಹಿತಿ ನೀಡಿದರು
ಕಾರ್ಯಕ್ರಮದ ವೇದಿಕೆಯಲ್ಲಿ ಕೃಷಿ ಇಲಾಖೆಯ ಮಂಜುನಾಥ ಕಿತ್ತೂರ, ಲೀಲಾವತಿ ಕೌಜಗೆರಿ, ಸಿ.ಆಯ್.ಹೂಗಾರ ಹಾಗೂ ಕಾರ್ಖಾನೆಯ ಕಬು ್ಬಅಭಿವೃದ್ದಿ ವಿಭಾಗದ ಹಿರಿಯ ವ್ಯವಸ್ಥಾಪಕ ಲಕ್ಷ್ಮಣ ರೊಡ್ಡನವರ ಉಪಸ್ಥಿತರಿದ್ದರು. ವಿಚಾರ ಸಂಕೀರದಲ್ಲಿ ಸುಮಾರು 300 ಕ್ಕಿಂತ ಹೆಚ್ಚುರೈತ ಬಾಂಧವರು ಪಾಲ್ಗೊಂಡಿದ್ದರು.
ಕಾರ್ಖಾನೆಯ ಕಬ್ಬು ಅಭಿವೃದ್ದಿ ವಿಭಾಗದ ಸಹಾಯಕ ವ್ಯವಸ್ಥಾಪಕ ಆರ್.ಆರ್.ದಪ್ತರದಾರ ಸ್ವಾಗಸಿದರು, ಸಹಾಯಕ ವ್ಯವಸ್ಥಾಪಕ ಪರವಯ್ಯಾ ಪೂಜೇರಿ ನಿರೂಪಿಸದರು. ಉಪವ್ಯವಸ್ಥಾಪಕ ನಿಂಗಪ್ಪ ರಡರಟ್ಟಿ ವಂದಿಸಿದರು.