Breaking News
Home / ಬೆಳಗಾವಿ / ಮೂಡಲಗಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಮೂಡಲಗಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Spread the love

ಮೂಡಲಗಿ :  ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಆಗುತ್ತಿದ್ದ ದುರ್ಬಲರ ಶೋಷಣೆ, ಜಾತೀಯತೆ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ವಿರುದ್ಧ ಸಾಮಾಜಿಕ ಕ್ರಾಂತಿ ಕೈಗೊಂಡ ಮಹಾನ್ ಪುರುಷ ಎಂದು ಮೂಡಲಗಿ ತಹಶೀಲ್ದಾರರಾದ ಶ್ರೀಶೈಲ ಗುಡುಮೆ ಹೇಳಿದರು.

ರವಿವಾರದಂದು ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ತಾಲೂಕು ಆಡಳಿತ ಮತ್ತು ಮೂಡಲಗಿ ತಾಲೂಕಾ ಮಡಿವಾಳ ಸಮಾಜದ ಸಂಯುಕ್ತಾಶ್ರಯದಲ್ಲಿ ಜರುಗಿದ 916ನೇ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ  ಮಾತನಾಡಿದ ಅವರು, ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರಿಗೆಲ್ಲರಿಗೂ ಸಮಪಾಲು–ಸಮಬಾಳು ಒದಗಿಸಲು ಶ್ರಮಿಸಿದ ಮಾಚಿದೇವರು ಅನುಕರಣೀಯ ದೈವೀ ಪುರುಷರು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ತಾಲೂಕಾ ಅಧ್ಯಕ್ಷ ಶಿವಾನಂದ ಮಡಿವಾಳರ ಮಾತನಾಡಿ, ಮಡಿವಾಳ ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಮಕ್ಕಳು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆದುಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಗೈಯಬೇಕು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಅಧಿಕಾರಿಗಳು ಹಾಗೂ ಸಮಾಜಬಾಂಧವರಿಗೆ ಜಯಂತಿಯ ಶುಭಾಶಯ ಕೋರಿ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಬಾಂಧವರಾದ ಬಸವರಾಜ ಮಡಿವಾಳರ, ಗಿರೀಶ್ ಮಡಿವಾಳರ, ಶ್ರೀಶೈಲ ಮಡಿವಾಳರ, ಮಂಜುನಾಥ ಮಡಿವಾಳರ, ನಾಗೇಶ ಮಡಿವಾಳರ, ಶ್ರೀಕಾಂತ ಮಡಿವಾಳರ, ಹನಮಂತ ಮಡಿವಾಳರ, ಕಲ್ಲಪ್ಪ ಮಡಿವಾಳರ, ಆದೇಶ ಮಡಿವಾಳರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ವಸತಿ ಸಹಿತ ಉಚಿತ ಶಿಕ್ಷಣಕ್ಕಾಗಿ ಯಶಸ್ವಿಯಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಅಕ್ಷರದಾಸೋಹಿ ದಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ