Breaking News
Home / ಬೆಳಗಾವಿ / ‘ದ್ವಿ-ಚಕ್ರ ವಾಹನಗಳ ದುರಸ್ತಿಯು ಶ್ರದ್ಧೆ ಮತ್ತು ಕೌಶಲ್ಯತೆಯಿಂದ ಕೂಡಿರುವ ಕಾಯಕವಾಗಿದೆ’ – ಸರ್ವೋತ್ತಮ ಜಾರಕಿಹೊಳಿ

‘ದ್ವಿ-ಚಕ್ರ ವಾಹನಗಳ ದುರಸ್ತಿಯು ಶ್ರದ್ಧೆ ಮತ್ತು ಕೌಶಲ್ಯತೆಯಿಂದ ಕೂಡಿರುವ ಕಾಯಕವಾಗಿದೆ’ – ಸರ್ವೋತ್ತಮ ಜಾರಕಿಹೊಳಿ

Spread the love

ಮೂಡಲಗಿ: ‘ದ್ವಿ-ಚಕ್ರ ವಾಹನಗಳ ದುರಸ್ತಿಯು ಶ್ರದ್ಧೆ ಮತ್ತು ಕೌಶಲ್ಯತೆಯಿಂದ ಕೂಡಿರುವ ಕಾಯಕವಾಗಿದೆ’ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ
ಹೇಳಿದರು.
 ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದ್ವಿ-ಚಕ್ರ ವಾಹನಗಳ ದುರಸ್ತಿದಾರರ ತಾಲ್ಲೂಕು ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘವನ್ನು
ಒಗ್ಗಟಿನಿಂದ ಬೆಳಸಬೇಕು ಎಂದರು.
ಸಂಘಕ್ಕೆ ಸರ್ಕಾರ ಮತ್ತು ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ತಮ್ಮ ಸಂಘದ ಬೆಳವಣಿಗೆಗೆ ಜಾರಕಿಹೊಳಿ ಕುಟುಂಬವು ಯಾವತ್ತೂ ಸಹಾಯ, ಸಹಕಾರ ನೀಡಲು ಸಿದ್ಧವಾಗಿರತ್ತದೆ. ವಾಹನಗಳ ದುರಸ್ತಿ ಕೆಲಸದೊಂದಿಗೆ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಮತ್ತು ಆರೋಗ್ಯ ಕಾಯ್ದುಕೊಂಡು, ಕುಟುಂಬದ ನಿರ್ವಹಣೆ ಉತ್ತಮ ಮಾಡಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಶ್ರೀಶೈಲ್ ಗುಡಮೆ, ಕಾರ್ಮಿಕ ನಿರೀಕ್ಷಕ ಪ್ರವೀಣ ಮಾವರಕರ, ಹುಬ್ಬಳ್ಳಿಯ ಉತ್ತರ ಕರ್ನಾಟಕ ಮೆಕ್ಯಾನಿಕ್ ಸಂಘದ ಅಧ್ಯಕ್ಷ ಮಂಜುನಾಥ
ಕೋಟೇಶ್ವರ ಮಾತನಾಡಿದರು.
ಸಾನ್ನಿಧ್ಯವನ್ನು ಜಾಮೀಯಾ ಮಸೀದಿಯ ಧರ್ಮ ಗುರು ಮೌಲಾನಾ ಕೌಸರ್ ರಜಾ ಮಾತನಾಡಿ ಸಂಘವು ಉತ್ತರೋತ್ತರವಾಗಿ ಬೆಳೆಯಲಿ ಎಂದರು.
ಗೌರವ ಅಧ್ಯಕ್ತ ಅಸ್ಥರಲಿ ಡಾಂಗೆ, ಅಧ್ಯಕ್ಷ ಶಿವಬಸು ಕಮತೆ, ಉಪಾಧ್ಯಕ್ಷ ನಬೀಲಾಲ್ ನದಾಫ್, ಕಾರ್ಯದರ್ಶಿ ಮುತ್ತಪ್ಪ ಬಾಂಡೆ, ಸಹಕಾರ್ಯದರ್ಶಿ ಬಂದೇನವಾಜ ಮುಜಾವರ, ಖಜಾಂಚಿ ಅರುಣಕುಮಾರ ವಂಟಗೋಡಿ, ನಿರ್ದೇಶಕರಾದ ಚಾಮುಂಡೇಶ್ವರ ಬರಗಿ, ಲೋಹಿತ ಬೆಳವಿ, ಬಂದೇನವಾಜ್ ಅತ್ತಾರ,ಶಾನೂರ ಅತ್ತಾರ, ಸೋಯಯ್ಯ ಹಿರೇಮಠ, ಅಡಿವೆಪ್ಪ ಶಿರಸಂಗಿ ಗೋಕಾಕ, ಬನಹಟ್ಟಿ, ರಬಕವಿ, ನರಗುಂದ, ಹುಬ್ಬಳ್ಳಿ, ತೇರದಾಳ, ಜಮಖಂಡಿ, ಮಹಾಲಿಂಗಪೂರ, ಮುಧೋಳ, ರಾಯಬಾಗ, ಸವದತ್ತಿ ತಾಲ್ಲೂಕು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಕಾಶ ಮಲ್ಲೇಶನವರ ಸ್ವಾಗತಿಸಿದರು, ಮಂಜುನಾಥ ಆಡಿನ ನಿರೂಪಿಸಿದರು.

Spread the love

About inmudalgi

Check Also

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ

Spread the loveಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ