Breaking News
Home / ಬೆಳಗಾವಿ / ಬೆಳಗಾವಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಒಟ್ಟು 237 ಆಸ್ಪತ್ರೆಗಳು ಪಟ್ಟಿ ಮಾಡಲಾಗಿದೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಬೆಳಗಾವಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಒಟ್ಟು 237 ಆಸ್ಪತ್ರೆಗಳು ಪಟ್ಟಿ ಮಾಡಲಾಗಿದೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

Spread the love

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ  ಆಯುಷ್ಮಾನ್   ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಒಟ್ಟು 452.26 ಕೋಟಿ ರೂ.ಗಳ ಮೊತ್ತದ 6.67 ಲಕ್ಷ ಕ್ಲೈಮ್‍ಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಚಿವ ಜೆ.ಪಿ. ನಡ್ಡಾ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್
ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ  ಆಯುಷ್ಮಾನ್  ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅನುಷ್ಠನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ ಆಯುμÁ್ಮನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಒಟ್ಟು 16.77 ಲಕ್ಷ ಆಯುಷ್ಮಾನ್   ಭಾರತ್ ಕಾರ್ಡಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಒಟ್ಟು 237 ಆಸ್ಪತ್ರೆಗಳು ಪಟ್ಟಿ ಮಾಡಲಾಗಿದ್ದು, ಇದರಲ್ಲಿ 177 ಸರ್ಕಾರಿ
ಹಾಗೂ 60 ಖಾಸಗಿ ಆಸ್ಪತ್ರೆಗಳು ಸೇರಿವೆ.
ದೇಶಾದ್ಯಂತ 24.66 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್  ಭಾರತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, ಒಟ್ಟು 17.84 ಕೋಟಿ ಫಲಾನುಭವಿಗಳು ಭಾಗವಹಿಸಿದ್ದಾರೆ. ಹೆಚ್ಚುವರಿಯಾಗಿ, ಈ ಅವಧಿಯಲ್ಲಿ ದೇಶಾದ್ಯಂತ 9.5 ಕೋಟಿಗೂ ಹೆಚ್ಚು ಆಯುμÁ್ಮನ್
ಭಾರತ ಕಾರ್ಡ್‍ಗಳು ಮತ್ತು 13.48 ಕೋಟಿ ಆಯುಷ್ಮಾನ್   ಭಾರತ್ ಆರೋಗ್ಯ ಖಾತೆ ಐಡಿಗಳನ್ನು ವಿತರಿಸಲಾಗಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ನೋದಣಿಯಾದ ಆಸ್ಪತ್ರೆಗಳು ಯೋಜನೆಯ ಅರ್ಹ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ.
ನೋಂದಣಿಯಾದ ಆಸ್ಪತ್ರೆಗಳನ್ನು ಚಿಕಿತ್ಸೆಯನ್ನು ನಿರಾಕರಿಸಿದ ಸಂದರ್ಭದಲ್ಲಿ, ಫಲಾನುಭವಿಗಳು ತಮ್ಮ ದೂರುಗಳನ್ನು ಕೇಂದ್ರೀಕೃತ ಕುಂದುಕೊರತೆ ಪರಿಹಾರ ನಿರ್ವಹಣಾ ವ್ಯವಸ್ಥೆ ಅಥವಾ 24×7 ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 14555 ಮೂಲಕ ತಮ್ಮ ದೂರಗಳನ್ನು ಸಲ್ಲಿಸಬಹುದು ಎಂದು ಸಚಿವರು
ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.


Spread the love

About inmudalgi

Check Also

‘ದ್ವಿ-ಚಕ್ರ ವಾಹನಗಳ ದುರಸ್ತಿಯು ಶ್ರದ್ಧೆ ಮತ್ತು ಕೌಶಲ್ಯತೆಯಿಂದ ಕೂಡಿರುವ ಕಾಯಕವಾಗಿದೆ’ – ಸರ್ವೋತ್ತಮ ಜಾರಕಿಹೊಳಿ

Spread the love ಮೂಡಲಗಿ: ‘ದ್ವಿ-ಚಕ್ರ ವಾಹನಗಳ ದುರಸ್ತಿಯು ಶ್ರದ್ಧೆ ಮತ್ತು ಕೌಶಲ್ಯತೆಯಿಂದ ಕೂಡಿರುವ ಕಾಯಕವಾಗಿದೆ’ ಎಂದು ಯುವ ಧುರೀಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ