Breaking News
Home / ಬೆಳಗಾವಿ / ನಿಸ್ವಾರ್ಥತೆಯಿಂದ ಗ್ರಾಮದ ಅಭಿವೃದ್ಧಿ, ಜನಸೇವೆ ಸಲ್ಲಿಸಿದ ನೀವು ಪುಣ್ಯವಂತರು -ಸರ್ವೋತ್ತಮ ಜಾರಕಿಹೊಳಿ

ನಿಸ್ವಾರ್ಥತೆಯಿಂದ ಗ್ರಾಮದ ಅಭಿವೃದ್ಧಿ, ಜನಸೇವೆ ಸಲ್ಲಿಸಿದ ನೀವು ಪುಣ್ಯವಂತರು -ಸರ್ವೋತ್ತಮ ಜಾರಕಿಹೊಳಿ

Spread the love

ಕುಲಗೋಡ: ಐದು ವರ್ಷ ನಿಸ್ವಾರ್ಥದಿಂದ ಗ್ರಾಮದ ಜನಸೇವೆ, ರಸ್ತೆ, ನೀರು, ನೈರ್ಮಲ್ಯ ಅಭಿವೃದ್ಧಿ ಕಾರ್ಯಗಳ ಮಾಡಿದ ನೀವೆ ಪುಣ್ಯವಂತರು. ಈ ಸೌಭಾಗ್ಯ ಎಲ್ಲರಿಗೂ ದೊರೆಯಲಿ ನೀವು ಜನರಿಂದ ಆಯ್ಕೆಯಾಗಿ ಜನರಿಗೋಸ್ಕರ ಮಾಡಿದ್ದು ಸೇವೆ ದೇವರ ಸೇವೆಗಿಂತಲೂ ಮಿಗಿಲು ಎಂದು ಯುವ ನಾಯಕ ಸವೋತ್ತಮ ಜಾರಕಿಹೊಳಿ ಮಾತನಡಿದರು.

ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗ್ರಾಪಂ ಆವರಣದಲ್ಲಿ ಸೋಮವಾರ ನಡೆದ ಗ್ರಾಪಂ ಸದಸ್ಯರ ಬಿಳ್ಕೋಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿ ಕುಲಗೋಡ ತಾಲೂಕಿನಲ್ಲಿ ಅತ್ಯತ್ತಮ ಗ್ರಾಮ ಎಂಬ ಹೆಗ್ಗಳಿಕೆ ಇದೆ. ವೇದಿಕೆ ಮೇಲೆ ಸರ್ವ ಧರ್ಮದ ಮುಖಂಡರ ಸೇರಿಸಿದ್ದು ಬಸವಣ್ಣರ ಅನುಭವ ಮಂಟಪ
ನೆನಪಿಸುತ್ತಿದೆ. ಮುಂಬರುವ ದಿನಗಳಲ್ಲಿ ಸರ್ವರೂ ಸೇರಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಿ ಎಂದರು.
ಅಧ್ಯಕ್ಷ ತಮ್ಮಣ್ಣ ದೇವರ ಮಾತನಾಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ.ಸುಭಾಸ ವಂಟಗೋಡಿ. ಸತೀಶ ವಂಟಗೋಡಿ. ಶಂಕರ ಹಾದಿಮನಿ ಮಾತಾಡಿದರು.
ಗ್ರಾಪಂ ಸದಸ್ಯರ ಅವಧಿ ಮುಕ್ತಾಯದ ಹಿನ್ನಲೇಯಲ್ಲಿ ಸರ್ವ ಸದಸ್ಯರಿಗೆ ದಲಿತ ಸಂಘರ್ಷ ಸಮಿತಿ ಹಾಗೂ ಶ್ರೀ ಬಲಭೀಮ ದೇವಸ್ಥಾನದ ಕಮಿಟಿ ಹಾಗೂ ನಾಗರೀಕರು ಸತ್ಕರಿಸಿದರು.
ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ. ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷ ಅಶೋಕ ನಾಯಿಕ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ. ಸುನೀಲ ವಂಟಗೋಡಿ.ಪಿ.ಡಿ.ಓ ಸದಾಶಿವ ದೇವರ. ಮುರಗೆಪ್ಪ ಯಕ್ಸಂಬಿ. ಬಸವಣ್ಣೆಪ್ಪ ತಿಪ್ಪಿಮನಿ. ಪ್ರಶಾಂತ ವಂಟಗೋಡಿ. ದತ್ತು ಕುಲಕರ್ಣಿ. ಗೋವಿಂದ ಪೂಜೇರ. ಅರ್ಜುನ ಪೂಜೇರಿ. ರಾಮಣ್ಣಾ ಕುರಬಚನ್ನಾಳ.
ಮಲ್ಲಪ್ಪ ಗೋಕಾವಿ. ಜಗದೀಶ ನಾಯಿಕ. ಬಾಬು ನದಾಫ. ಪ್ರಕಾಶ ಹಿರೇಮೇತ್ರಿ. ಶಿವಾನಂದ ದಾಸರ. ಮಾರುತಿ ಖಾನಪೇಟ ಇತರರು ಇದ್ದರು.


Spread the love

About inmudalgi

Check Also

ಶ್ರೀ ಮಹಾಲಕ್ಷ್ಮೀದೇವಿ ಗದ್ಗುಗೆ ವಿಶೇಷ ಮಹಾಪೂಜೆ

Spread the loveಲಕ್ಷ್ಮೀ…ಮಹಾಲಕ್ಷ್ಮೀ ಕಾಪಾಡಮ್ಮ..! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ವಾರದ ದಿನ ಶುಕ್ರವಾರ ಜು.31ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ