
ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ ತಮ್ಮ ಗ್ರಾಮಕ್ಕೆ ಬರಲು ಮತ್ತು ಮರಳಿ ಹೋಗಲು ಅನುಕೂಲವಾಗುವಂತೆ ಹಲವು ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣಕ್ಕೆ ನಿಲುಗಡೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ನವದೆಹಲಿಯಲ್ಲಿ ಭೇಟಿಯಾಗಿ ಮನವಿ ನೀಡಿ, ವಿನಂತಿಸಿದರು.
ಈ ಐದು ತಾಲೂಕಿನ ಹೆಚ್ಚಿನ ಸೈನಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಈ ರೈಲು ಘಟಪ್ರಭಾ ರೈಲು ನಿಲ್ದಾಣದ ಮೂಲಕ ಚಲಿಸುತ್ತದೆಯಾದರೂ, ಯಾವುದೇ ನಿಲುಗಡೆಗಳಿರುವುದಿಲ್ಲ ಮತ್ತು ಪ್ರಯಾಣಿಕರಿಗೆ ಹತ್ತಿರದ ರೈಲ್ವೆ ನಿಲ್ದಾಣವಾದ ಬೆಳಗಾವಿ ಅಥವಾ ಮೀರಜ್ ರೈಲು ನಿಲ್ದಾಣದಿಂದ ಬರಬೇಕಾಗುತ್ತದೆ. ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರ ಅನುಕೂಲಕ್ಕಾಗಿ ಘಟಪ್ರಭಾ ರೈಲು ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲುಗಳಾದ ಚಂಡೀಗಢ / ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (22685/86), ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (12629/30), ಹಜರತ್ ನಿಜಾಮುದ್ದೀನ್/ ಮೈಸೂರು ಸ್ವರ್ಣ ಜಯಂತಿ ಎಸ್‌ಎಫ್ ಎಕ್ಸ್ಪ್ರೆಸ್ (12781/87), ಕೆ.ಎಸ್.ಆರ್ ಬೆಂಗಳೂರು/ ಜೋಧಾಪುರ್ ಎಕ್ಸ್ಪ್ರೆಸ್ (16533/34), ಕೆಎಸ್‌ಆರ್ ಬೆಂಗಳೂರು / ಅಜ್ಮೀರ್ ಗರೀಬ್ ನವಾಜ್ ಎಕ್ಸ್ಪ್ರೆಸ್ (16531/32), ಕೆಎಸ್‌ಆರ್ ಬೆಂಗಳೂರು / ಗಾಂಧಿಧಾಮ್ ಎಕ್ಸ್ಪ್ರೆಸ್ (16505/06), ಅಜ್ಮೀರ್ ಮೈಸೂರು/ ಮೈಸೂರು ಅಜ್ಮೀರ್ ಎಕ್ಸ್ಪ್ರೆಸ್ (16209/10), ಪ್ಯಾಲೇಸ್ ಕ್ವೀನ್ ಹಮಸಫರ್ ಎಕ್ಸ್ಪ್ರೆಸ್ (19667/68), ತಿರುಚ್ಚಿರಾಪಳ್ಳಿ ಗಂಗಾನಗರ ಹಮ್‌ಸಫರ್ ಎಕ್ಸ್ಪ್ರೆಸ್(22497/98) ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣಕ್ಕೆ ನಿಲುಗಡೆ ಮಾಡುವಂತೆ ವಿನಂತಿಸಿದರು.
ನನ್ನ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News