Breaking News
Home / ಪ್ರಕಟಣೆ / ಫೆ.11ರಂದು ಬೆಟಗೇರಿ ಪಿಎಚ್‍ಸಿಯಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ಶಿಬಿರ

ಫೆ.11ರಂದು ಬೆಟಗೇರಿ ಪಿಎಚ್‍ಸಿಯಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ಶಿಬಿರ

Spread the love

ಫೆ.11ರಂದು ಬೆಟಗೇರಿ ಪಿಎಚ್‍ಸಿಯಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ಶಿಬಿರ

ಬೆಟಗೇರಿ:ಗೋಕಾಕ ಲಾಯನ್ಸ್ ಕ್ಲಬ್ ಹಾಗೂ ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾಮ ಪಂಚಾಯತಿ, ಗಜಾನನ ಯುವಕ ಮಂಡಳ, ಕರ್ನಾಟಕ ರಕ್ಷಣಾ ವೇದಿಕೆ, ಗೋಕಾಕ ತಾಲೂಕಾ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು,ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನುರಿತ ವೈದ್ಯ ತಂಡದೊಂದಿಗೆ ಉಚಿತ ಕಣ್ಣಿನ ಪೊರೆ ತಪಾಸನಾ ಬೃಹತ್ ಶಿಬಿರ್, ನವಜಾತ ಶಿಶುಗಳ ಆರೋಗ್ಯ, ಚರ್ಮರೋಗ, ಎಲುಬು ಕೀಲುಗಳ ತಪಾಸಣೆ ಬುಧವಾರ ಫೆ.11ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ. ಗೋಕಾಕ ಲಾಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ್ ಹಂಜಿ ಅಧ್ಯಕ್ಷತೆ, ಸ್ಥಳೀಯ ಹಿರಿಯ ನಾಗರಿಕ ಪತ್ರೆಪ್ಪ ನೀಲಣ್ಣವರ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಟಗೇರಿ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಚಂದರಗಿ ಮುಖ್ಯಅತಿಥಿಗಳಾಗಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಹಾದೇವ ಕಂಬಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವಂತ ಕೋಣಿ, ಗಜಾನನ ಯುವಕ ಮಂಡಳ ಅಧ್ಯಕ್ಷ ಬಸವರಾಜ ದೇಯಣ್ಣವರ, ಕರ್ನಾಟಕ ರಕ್ಷಣಾ ವೇದಿಕೆ ಸ್ಥಳೀಯ ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ಬಳಿಗಾರ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಗೋಕಾಕ ಎಲುಬು ಕೀಲು ತಜ್ಞ ಡಾ.ರಮೇಶ ಪಟಗುಂದಿ, ಗೋಕಾಕ ಶಸ್ತ್ರಕ್ರೀಯಾ ತಜ್ಞ ಡಾ. ಅಮರ ಮುರಗೋಡ, ಗೋಕಾಕ ನವಜಾತ ಶಿಶುಗಳ ತಜ್ಞೆ ಡಾ. ಪ್ರಮೀತಾ ಮುರಗೋಡ, ಗೋಕಾಕ ಚರ್ಮರೋಗ ತಜ್ಞೆ ಡಾ.ಪ್ರೀತಿ ಚೌದರಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸರಸ್ವತಿ ತಂಬಾಕೆ, ಗೋಕಾಕ ಲಾಯನ್ಸ್  ಕ್ಲಬ್ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಗೋಕಾಕ ಲಾಯನ್ಸ್ ಕ್ಲಬ್ ಖಜಾಂಚಿ ಅಶೋಕ ದಯಣ್ಣವರ ಸೇರಿದಂತೆ ನುರಿತ ತಜ್ಞರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಈ ಬೃಹತ್ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳ ಸಾರ್ವಜನಿಕರ ಈ ಬೃಹತ್ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಚಿತ ತಪಾಸಣೆ ಶಿಬಿರದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿದ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ