Breaking News
Home / ಬೆಳಗಾವಿ / ಬೆಟಗೇರಿ: ಕೆನರಾ ಬ್ಯಾಂಕ್ ಶಾಖೆಯಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ

ಬೆಟಗೇರಿ: ಕೆನರಾ ಬ್ಯಾಂಕ್ ಶಾಖೆಯಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ

Spread the love

ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ರಕ್ಷಾ
ಬಂಧನ ಹಬ್ಬ ಆಚರಣೆ

ಬೆಟಗೇರಿ:ನಮ್ಮ ನಾಡಿನಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳಲ್ಲಿ ರಕ್ಷಾ ಬಂಧನ ಹಬ್ಬವೂ ಒಂದು. ಸಹೋದರ-ಸಹೋದರಿಯರ ಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಜಗದೀಶ ಜಾಧವ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಅ.28ರಂದು ನಡೆದ ರಕ್ಷಾ ಬಂಧನ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಕೈಗೆ ರಕ್ಷೆ ಕಟ್ಟಿದ ಬಳಿಕ ಮಾತನಾಡಿ, ರಕ್ಷಾ ಬಂಧನ ಹಬ್ಬವೂ ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಪರಸ್ಪರ ರಕ್ಷಣೆಯ ಪ್ರತೀಕವಾಗಿದೆ ಎಂದರು.
ಬ್ಯಾಂಕಿನ ಮಹಿಳಾ ಸಿಬ್ಬಂದಿ ಹೆಣ್ಣುಮಕ್ಕಳು ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ಪುರುಷ ಸಿಬ್ಬಂದಿ ಗಂಡು ಮಕ್ಕಳಿಗೆ ಹಣೆಗೆ ವಿಭೂತಿ, ಕುಂಕುಮದ ತಿಲಕವಿಟ್ಟು, ಆರತಿ ಬೆಳಗಿ, ರಾಖಿ ಕಟ್ಟಿದ ದೃಶ್ಯ ಸಹೋದರತ್ವ ಭಾವನೆಗೆ ಸಾಕ್ಷಿಯಾಯಿತು. ರಕ್ಷೆ ಕಟ್ಟಿ ಸಹೋದರತ್ವದ ಪ್ರೀತಿ, ಕಾಳಜಿ, ಪರಸ್ಪರ ರಕ್ಷಣೆಯ ಪ್ರತೀಕವಾಗಿ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಿ ಸಂಭ್ರಮಿಸಿದರು.
ವಿನಯಕುಮಾರ ಕೊಮ್ಮೂರ, ಸುದೇಶ ಕುಮಾರ,
ಸಣ್ಣಸಿದ್ಧಲಿಂಗಪ್ಪ, ಮಹೇಶ ಪತ್ತಾರ, ರಮೇಶ ಪಾಟೀಲ, ಬಸವರಾಜ ಮಲ್ಲಿ, ಮಂಜು ಪತ್ತಾರ, ಸಿದ್ದಪ್ಪ ಚಂದರಗಿ, ಲತಾ ನಾಯಕ, ರೇಖಾ ಉಪ್ಪಾರ, ಕಾಳಪ್ಪ ಕಂಬಾರ ಸೇರಿದಂತೆ ಸ್ಥಳೀಯ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಸದಸ್ಯರು, ಬ್ಯಾಂಕಿನ ಗ್ರಾಹಕರು, ಸ್ಥಳೀಯರು, ಮತ್ತಿತರರು ಇದ್ದರು.


Spread the love

About inmudalgi

Check Also

ಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಸಹಕಾರಿ ಸಂಘ ಸಂಸ್ಥೆಗಳು ಗಟ್ಟಿಯಾಗಿ ಬೆಳೆಯಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಟಗೇರಿ: ಸಹಕಾರಿ ಸಂಘ, ಸಂಸ್ಥೆಗಳು ಬೆಳೆದಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ