Breaking News
Home / ಬೆಳಗಾವಿ / ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ

ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ
ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ
ಬಿಡುಗಡೆ

ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಇದೇ ಏ.26 ರಿಂದ ಏ.30 ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಏ.16ರಂದು ಸ್ಥಳೀಯ ಮಹಾಲಕ್ಷ್ಮಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಏ.26 ರಿಂದ ಏ.29 ರವರೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ ಅವರಿಂದ ನಾಲ್ಕು ದಿನಗಳ ಕಾಲ ಪ್ರತಿ ದಿನ ಸಾಯಂಕಾಲ 7 ಗಂಟೆಯಿಂದ 8 ಗಂಟೆಯವರೆಗೆ ವಿವಿಧ ವಿಷಗಳ ಮೇಲೆ ಶ್ರೀ ಗಜಾನನ ವೇದಿಕೆ ಮೇಲೆ ಪ್ರವಚನ, ಏ.30 ರಂದು ಪ್ರವಚನ ಮಂಗಲ ಕಾರ್ಯಕ್ರಮ,
ಮುಂಜಾನೆ 10 ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.
ಏ.26 ರಂದು ಸಾಯಂಕಾಲ 5 ಗಂಟೆಗೆ ಸ್ಥಳೀಯ ಅಡವಿಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ಗಜಾನನ ವೇದಿಕೆ ತನಕ ಸುಮಂಗಲೆಯರಿಂದ ಆರತಿ ಮತ್ತು ಕುಂಭಮೇಳ, ಸಕಲ ವಾಧ್ಯಮೇಳಗಳೊಂದಿಗೆ ಭವ್ಯ ಸ್ವಾಗತ ಜರುಗಲಿದೆ. ಏ.30ರಂದು ಮುಂಜಾನೆ 8 ಗಂಟೆಗೆ ಬಳಗಾನೂರದ ಶಿವಶಾಂತವೀರ ಶರಣರಿಂದ ಶಿವಭಜನೆ ಮೂಲಕ ಗ್ರಾಮದ ವಿವಿಧಡೆ ಪಾದಯಾತ್ರೆ ನಡೆಯಲಿದೆ.
ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ,
ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸೇವೆ ನಡೆಯಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತ, ಶರಣರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.
ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕೋಣಿ, ಈರಯ್ಯ ಹಿರೇಮಠ, ವಿಜಯ ಹಿರೇಮಠ, ಈಶ್ವರ ಬಳಿಗಾರ, ಲಕ್ಷ್ಮಣ ನೀಲಣ್ಣವರ, ಬಸವರಾಜ ಪಣದಿ, ತಮ್ಮಣ್ಣ ಗಾಣಗಿ ಗೌಡಪ್ಪ ದೇಯಣ್ಣವರ, ಈರಣ್ಣ ಬಳಿಗಾರ, ಶ್ರೀಧರ ದೇಯಣ್ಣವರ, ವಿಠಲ ಕೋಣಿ, ಈರಪ್ಪ ದೇಯಣ್ಣವರ, ರಾಮಣ್ಣ ನೀಲಣ್ಣವರ, ಹಜರತ ಮಿರ್ಜಾನಾಯ್ಕ, ಮಲ್ಲಪ್ಪ ಪಣದಿ, ರಾಮಣ್ಣ ದೇಯಣ್ಣವರ,, ದುಂಡಪ್ಪ ಕಂಬಿ, ಸುರೇಶ ನೀಲಣ್ಣವರ, ಭರಮಣ್ಣ ಪೂಜೇರ, ದುಂಡಪ್ಪ ಮಾಳೇದ, ಬಾಳಪ್ಪ ಕನೋಜಿ, ರಾಚಪ್ಪ ಮುರಗೋಡ, ಮುತ್ತೆಪ್ಪ ದೇಯಣ್ಣವರ ಸೇರಿದಂತೆ ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವಕರು, ಸ್ಥಳೀಯ ಹಿರಿಯ ನಾಗರಿಕರು ಇದ್ದರು.


Spread the love

About inmudalgi

Check Also

ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ನೀರನ್ನು ಹರಿಸಿದ್ದು, ಕೌಜಲಗಿ ಮತ್ತು ಯಾದವಾಡ ಭಾಗದ ರೈತರಿಗೆ ನೀರು ತಲುಪಿಸಬೇಕು – ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ್- ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ನೀರನ್ನು ಹರಿಸಿದ್ದು, ಕೌಜಲಗಿ ಮತ್ತು ಯಾದವಾಡ ಭಾಗದ ರೈತರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ