Breaking News
Home / ರಾಜ್ಯ / *ಡಾ. ಅಂಬೇಡ್ಕರ್ ಎಲ್ಲ ಸಮುದಾಯಗಳ ಆಸ್ತಿ- ಲಕ್ಕಪ್ಪ ಲೋಕುರಿ* *ಅರಭಾವಿ ಬಿಜೆಪಿ ಮಂಡಲದಿಂದ ಅಂಬೇಡ್ಕರ್ ಜಯಂತಿ ಆಚರಣೆ*

*ಡಾ. ಅಂಬೇಡ್ಕರ್ ಎಲ್ಲ ಸಮುದಾಯಗಳ ಆಸ್ತಿ- ಲಕ್ಕಪ್ಪ ಲೋಕುರಿ* *ಅರಭಾವಿ ಬಿಜೆಪಿ ಮಂಡಲದಿಂದ ಅಂಬೇಡ್ಕರ್ ಜಯಂತಿ ಆಚರಣೆ*

Spread the love

ಗೋಕಾಕ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.‌ಅಂಬೇಡ್ಕರ್ ಜಯಂತಿಯನ್ನು ಅರಭಾವಿ ಬಿಜೆಪಿ ಮಂಡಲದಿಂದ ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಆಚರಿಸಲಾಯಿತು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಈ ಸಂದರ್ಭದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ರಾಷ್ಟ್ರದ ಉನ್ನತಿ, ಪ್ರಗತಿಗಾಗಿ ಶ್ರಮಿಸಿರುವ ಮಹಾನ್ ವ್ಯಕ್ತಿ. ಪ್ರಪಂಚದಲ್ಲಿಯೇ ಎಲ್ಲರೂ ಮೆಚ್ಚುವಂತಹ ಸಂವಿಧಾನವನ್ನು ರಚನೆ ಮಾಡಿದ್ದಾರೆ. ನಮ್ಮ ದೇಶವು ಇಂದು ಶಿಕ್ಷಣದಲ್ಲಿ ಮುಂದುವರೆದು ಉನ್ನತ ಸ್ಥಾನ,ಮಾನ ಬರುತ್ತದೆಂದರೆ ಅದಕ್ಕೆ ಅಂಬೇಡ್ಕರ್ ಅವರು ಕಾರಣರು.‌ ಅವರು ಸಂವಿಧಾನವನ್ನು ಬರೆದು ಕೊಡುತ್ತಿದ್ದರೆ ನಾವಿಂದು ಸಮಾಜದಲ್ಲಿ ಯಾವುದೇ ಸ್ಥಾನವನ್ನು ಗಳಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಅವರಂತಹ ಮಹಾನ್ ರಾಷ್ಟ್ರಪ್ರೇಮಿಯನ್ನು ಕೇವಲ ಒಂದು ಸಮುದಾಯಕ್ಕೆ ಸಿಮೀತಗೊಳಿಸುತ್ತಿರುವುದು ವಿಷಾದನೀಯ.‌ ಎಲ್ಲ ಸಮುದಾಯಗಳ ಆಸ್ತಿ ಅಂಬೇಡ್ಕರ್ ಅವರು ಆಗಿದ್ದಾರೆಂದು ಲಕ್ಕಪ್ಪ ಲೋಕುರಿ ಹೇಳಿದರು.
ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಕೇವಲ ಓಟ್ ಬ್ಯಾಂಕ್ ಸಲುವಾಗಿ ಉಪಯೋಗಿಸುತ್ತ, ಜನರಿಗೆ ಮಣ್ಣು ಮುಕ್ಕಿಸುತ್ತಿದೆ. ಆದರೆ, ನಮ್ಮ ಪಕ್ಷವು ಅಂಬೇಡ್ಕರ್ ಅವರಿಗೆ ಸಿಗಬೇಕಾಗಿರುವ ಎಲ್ಲ ಮಾನ,ಗೌರವವನ್ನು ನೀಡುತ್ತಿದೆ. ಇದಕ್ಕಾಗಿ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಯಕ್ಸಂಬಿ, ಬೀರನಗಡ್ಡಿ ಗ್ರಾಪಂ. ಮಾಜಿ ಅಧ್ಯಕ್ಷ ಬಸಲಿಂಗ ಕೆಳಗಡೆ, ಬಸವರಾಜ ರಂಜಣಗಿ, ಪ್ರಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಅರಭಾವಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಂಜು ಹೊಸಮನಿ, ಭರಮಣ್ಣ ಪಾಶ್ಚಾಪೂರ, ಶಿವು ದೊಡ್ಡಗುಣಿ, ಶ್ರೀಧರ ಸಲಬನ್ನವರ, ಅಡಿವೆಪ್ಪ ಕಂಕಾಳಿ, ಶ್ರೀಶೈಲ ಶೆಕ್ಕಿ, ಗುತ್ತಿಗೆದಾರ ಅಶೋಕ ಹಸರಂಗಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ದಲಿತ ಸಮುದಾಯದ ಪ್ರಮುಖರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು.


Spread the love

About inmudalgi

Check Also

ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ

Spread the loveಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ