Breaking News
Home / ಬೆಳಗಾವಿ / ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ

Spread the love

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ
ಪ್ರಯತ್ನಿಸಬೇಕು: ರಮೇಶ ಅಳಗುಂಡಿ

ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ ಸಸಿ ನೆಟ್ಟು, ಪಕ್ಷಿ ಸಂಕುಲ ಹಾಗೂ ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜೂನ್.5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮಗೆ ಹಸಿರೇ ಉಸಿರಾಗಿದೆ. ನಮ್ಮ ಸುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸಬೇಕಾದರೆ ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಪೋಷಿಸಿ, ಬೆಳಸಬೇಕು ಎಂದÀರು.
ಶಿಕ್ಷಕ ಸದಾನಂದ ತೆರಣೆ ಮತ್ತು ವೈ.ಎಂ.ವಗ್ಗರ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕುರಿತು ಮಾತನಾಡಿದರು. ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಮಾಡುವ ಕಾರ್ಯಕ್ರಮ
ನಡೆಯಿತು.
ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ರಾಕೇಶ ನಡೋಣೆ, ಭಾಗ್ಯಶ್ರೀ ನಾಯಕ, ಗಣಪತಿ ಭಾಗೋಜಿ, ಸಿರಾಜಅಹ್ಮದ ಜಿಡ್ಡಿಮನಿ, ಶಾಲೆಯ ಸಹ ಶಿಕ್ಷಕರು, ಅತಿಥಿ ಶಿಕ್ಷಕರು, ಪಾಲಕರು, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ಮತ್ತೀತರರು ಇದ್ದರು.


Spread the love

About inmudalgi

Check Also

ಬೆಟಗೇರಿ ಸಿಆರ್‍ಸಿ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ನಡೆದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Spread the loveಬೆಟಗೇರಿ ಸಿಆರ್‍ಸಿ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ನಡೆದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಬೆಟಗೇರಿ:ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್‍ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ